IPL 2020 : ರಾಜಸ್ಥಾನ್ ಮಣಿಸಿದ ಡೆಲ್ಲಿ
Team Udayavani, Oct 9, 2020, 11:21 PM IST
ಶಾರ್ಜಾ: ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡ್ ಪ್ರದರ್ಶನ ನೀಡಿ ರಾಜಸ್ಥಾನ ತಂಡವನ್ನು 46ರನ್ನುಗಳಿಂದ ಬಗ್ಗುಬಡಿದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ಭರ್ಜರಿ ಪ್ರದರ್ಶನ ನೀಡಿದ ಡೆಲ್ಲಿ ತಂಡವು ತಾನಾಡಿದ ಆರು ಪಂದ್ಯಗಳಲ್ಲಿ ಐದನೇ ಗೆಲುವು ಸಾಧಿಸಿ ಒಟ್ಟು ಹತ್ತು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಧವನ್, ಪೃಥ್ವಿ ಶಾ, ಅಯ್ಯರ್, ಪಂತ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರೂ ಹೆಟ್‌ಮೆರ್, ಸ್ಟೋಯಿನಿಸ್ ಮತ್ತು ಹರ್ಷಲ್ ಪಟೇಲ್ ಅವರ ಕೊನೆ ಹಂತದ ಸ್ಫೋಟಕ ಆಟದಿಂದಾಗಿ ಡೆಲ್ಲಿ ತಂಡವು 8 ವಿಕೆಟಿಗೆ 184 ರನ್ನುಗಳ ಸವಾಲೆಸೆಯುವ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ರಾಜಸ್ಥಾನ ತಂಡವು 19.4 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 138 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ ಆರಂಭಿಕ ಆಘಾತ ಎದುರಿಸಿತು. 6 ಓವರ್‌ನಲ್ಲಿ 50 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕಳೆದ ಪಂದ್ಯದಲ್ಲಿ ಮಿಂಚಿದ ಆರಂಭಿಕ ಜೋಡಿ ಪೃಥ್ವಿ ಶಾ (19), ಶಿಖರ್ ಧವನ್ (5) ರನ್ ಗಳಿಸಿ ಈ ಪಂದ್ಯದಲ್ಲಿ ನಿರಾಶೆ ಮೂಡಿಸಿದರು. ಈ ಜೋಡಿಯಿಂದ ಮೊದಲ ವಿಕೆಟಿಗೆ 12 ರನ್ ಒಟ್ಟುಗೂಡಿತು. 2ನೇ ವಿಕೆಟಿಗೆ ಆಡಲಿಳಿದ ನಾಯಕ ಶ್ರೇಯಸ್ ಅಯ್ಯರ್ ಕೂಡ ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ ಇಲ್ಲದ ರನ್ ಕದಿಯಲು ಪ್ರಯತ್ನಿಸಿದ ವೇಳೆ ಜೈಸ್ವಾಲ್ ರನೌಟ್ ಮಾಡುವ ಮೂಲಕ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೆ ಪಂತ್ ಕೂಡ ರನೌಟ್ ಆದರು ಇವರ ಗಳಿಕೆ 5 ರನ್.
ಆರ್‌ಸಿಬಿ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಟೋಯಿನಿಸ್ ಒಂದು ಹಂತದಲ್ಲಿ ಶ್ರೇಯಸ್ ಗೋಪಾಲ್ ಅವರ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಅಪಾಯಕಾರಿ ಆಗುವ ಸೂಚನೆ ನೀಡಿದರು. ಆದರೆ ರಾಹುಲ್ ತೆವಾತಿಯಾ ಇವರ ವಿಕೆಟ್ ಬೇಟೆಯಾಡುವ ಮೂಲಕ ಬ್ರೇಕ್ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಆಟವಾಡಿದ ವಿಂಡೀಸ್‌ನ ಶಿಮ್ರಾನ್ ಹೆಟ್‌ಮೆರ್, ಹರ್ಷಲ್ ಪಟೇಲ್ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಹೆಟ್‌ಮೆರ್ 24 ಎಸೆತಗಳಿಂದ 45 ರನ್ ಸೂರೆಗೈದರು.
ಮಿಂಚಿದ ಆರ್ಚರ್ -ತೆವಾತಿಯಾ
ರಾಜಸ್ಥಾನ ಪರ ವೇಗಿ ಜೋಫ್ರ ಆರ್ಚರ್ 3 ವಿಕೆಟ್ ಕಬಳಿಸಿದರೆ ತೆವಾತಿಯಾ 4 ಓವರ್‌ಗಳಲ್ಲಿ 20 ರನ್ ಬಿಟ್ಟುಕೊಡುವ ಮೂಲಕ ಒಂದು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಟೈ ಮತ್ತು ತ್ಯಾಗಿ ತಲಾ ಒಂದು ವಿಕೆಟ್ ಉರುಳಿಸಿದರು.
ರಾಜಸ್ಥಾನ ತಂಡವು ಈ ಪಂದ್ಯಕ್ಕಾಗಿ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿಕೊಂಡಿತು. ಟಾಮ್ ಕರನ್ ಮತ್ತು ಅಂಕಿತ್ ರಜಪೂತ್ ಅವರನ್ನು ಕೈಬಿಟ್ಟು ವರುಣ್ ಆರನ್ ಹಾಗೂ ಆ್ಯಂಡ್ರು ಟೈಗೆ ಅವಕಾಶ ನೀಡಿತು. ಡೆಲ್ಲಿ ತಂಡದಲ್ಲಿ ಕಳೆದ ಪಂದ್ಯ ಆಡಿದ ತಂಡವೇ ಕಾಣಿಸಿಕೊಂಡಿತು.
ಸ್ಕೋರ್ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಮತ್ತು ಬಿ ಜೋಫ್ರ 19
ಶಿಖರ್ ಧವನ್ ಸಿ ಜೈಸ್ವಾಲ್ ಬಿ ಜೋಫÅ 5
ಅಯ್ಯರ್ ರನೌಟ್ 22
ರಿಷಭ್ ರನೌಟ್ 5
ಸ್ಟೋಯಿನಿಸ್ ಸಿ ಸ್ಮಿತ್ ಬಿ ತೆವಾತಿಯಾ 39
ಹೆಟ್‌ಮೆರ್ ಸಿ ತೆವಾತಿಯಾ ಬಿ ತ್ಯಾಗಿ 45
ಹರ್ಷಲ್ ಸಿ ತೆವಾತಿ ಬಿ ಜೋಫ್ರ 16
ಅಕ್ಷರ್ ಸಿ ಬಟ್ಲರ್ ಬಿ ಟೈ 17
ರಬಾಡ ಔಟಾಗದೆ 2
ಆರ್. ಅಶ್ವಿನ್ ಔಟಾಗದೆ 0
ಇತರ 14
ಒಟ್ಟು(20 ಓವರ್‌ಗಳಲ್ಲಿ 8 ವಿಕೆಟಿಗೆ) 184
ವಿಕೆಟ್ ಪತನ: 1-12, 2-42, 3-50, 4-79, 5-109,-6-149, 7-181, 8-183.
ಬೌಲಿಂಗ್:
ವರುಣ್ ಆರನ್ 2-0-25-0
ಜೋಫ್ರ ಆರ್ಚರ್ 4-0-24-3
ಕಾರ್ತಿಕ್ ತ್ಯಾಗಿ 4-0-35-1
ಆ್ಯಂಡ್ರುé ಟೈ 4-0-50-1
ಶ್ರೇಯಸ್ ಗೋಪಾಲ್ 2-0-23-0
ರಾಹುಲ್ ತೆವಾತಿಯಾ 4-0-20-1
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್ ಬಿ ಸ್ಟೋಯಿನಿಸ್ 34
ಜಾಸ್ ಬಟ್ಲರ್ ಸಿ ಧವನ್ ಬಿ ಅಶ್ವಿನ್ 13
ಸ್ಟೀವನ್ ಸ್ಮಿತ್ ಸಿ ಹೆಟ್‌ಮೆರ್ ಬಿ ನೋರ್ಜೆ 24
ಸ್ಯಾಮ್ಸನ್ ಸಿ ಹೆಟ್‌ಮೆರ್ ಬಿ ಸ್ಟೋಯಿನಿಸ್ 5
ಲೋನ್ರೊರ್ ಸಿ ಅಕ್ಷರ್ ಬಿ ಅಶ್ವಿನ್ 1
ತೆವಾತಿಯಾ ಸಿ ರಬಾಡ 38
ಆ್ಯಂಡ್ರುé ಟೈ ಸಿ ರಬಾಡ ಬಿ ಅಕ್ಷರ್ 6
ಆರ್ಚರ್ ಸಿ ಅಯ್ಯರ್ ಬಿ ರಬಾಡ 2
ಗೋಪಾಲ್ ಸಿ ಹೆಟ್‌ಮೆರ್ 2
ತ್ಯಾಗಿ ಔಟಾಗದೆ 2
ಆರನ್ ಸಿ ಪಂತ್ ಬಿ ರಬಾಡ 1
ಇತರ
ಒಟ್ಟು ( 19.4 ಓವರ್‌ಗಳಲ್ಲಿ ಆಲೌಟ್) 138
ವಿಕೆಟ್ ಪತನ: 1-15, 2-56, 3-72, 4-76, 5-82, 6-90, 7-100, 8-121, 9-136
ಬೌಲಿಂಗ್:
ಕಗಿಸೊ ರಬಾಡ 3.4-0-35-3
ಅನ್ರಿಚ್ ಜೋರ್ಜೆ 4-0-25-1
ಆರ್. ಅಶ್ವಿನ್ 4-0-22-2
ಹರ್ಷಲ್ ಪಟೇಲ್ 4-0-29-1
ಅಕ್ಷರ್ ಪಟೇಲ್ 2-0-8-1
ಸ್ಟೋಯಿನಿಸ್ 2-0-17-2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.