ಸೋಂಕಿನಿಂದ ಜೀವವಿಲ್ಲದ ಶಿಶುಗಳ ಜನನ!
Team Udayavani, Oct 10, 2020, 6:23 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಜಗತ್ತಿನಲ್ಲಿ ಪ್ರತಿ 16 ಸೆಕೆಂಡುಗಳಿಗೆ ಒಂದು ಜೀವವಿಲ್ಲದ ಮತ್ತು ಅರೆ ಜೀವದ ಸ್ಥಿತಿ (ಸ್ಟಿಲ್ಬರ್ತ್)ಯಲ್ಲಿರುವ ಮಗು ಜನಿಸುತ್ತಿದೆ. ಇದೇ ಲೆಕ್ಕಾಚಾರವನ್ನು ತೆಗೆದುಕೊಂಡರೆ ಪ್ರತಿ ವರ್ಷ 20 ಲಕ್ಷ ಅಂಥ ಮಕ್ಕಳು ಜನಿಸುತ್ತವೆ ಎಂದು ಯೂನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಬ್ಯಾಂಕ್ ಸಿದ್ಧಗೊಳಿಸಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಕೋವಿಡ್ ಸೋಂಕಿನಿಂದಾಗಿ ಜಗತ್ತಿನಾದ್ಯಂತ ಸಾಮಾನ್ಯ ಆರೋಗ್ಯ ಸೇವೆಗಳು ವ್ಯತ್ಯಯವಾಗಿರುವುದರಿಂದ ಈ ಪರಿಸ್ಥಿತಿ ಮತ್ತಷ್ಟು ಕೈಮೀರಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ಭಾರತದಲ್ಲಿ ಈ ಸ್ಥಿತಿ ಹೆಚ್ಚು ಗಂಭೀರವಾಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. 2 ಸಾವಿರನೇ ಇಸ್ವಿ ಬಳಿಕ ಇಂಥ ಶಿಶುಗಳ (ಸ್ಟಿಲ್ಬರ್ತ್) ಜನನ ಪ್ರಮಾಣ ಶೇ.53ಕ್ಕಿಂತ ಕಡಿಮೆಯಾಗಿದೆ. ಆದರೆ ನಿಜವಾದ ಸಂಖ್ಯೆಗಳನ್ನು ಗಮನಿಸಿದರೆ 3,40,622 ಜೀವವಿಲ್ಲದ ಮತ್ತು ಅರೆ ಜೀವದ ಸ್ಥಿತಿಯ ಶಿಶುಗಳು ಜನಿಸುತ್ತವೆ. 2019ರ ವರದಿ ಪ್ರಕಾರ, ಪ್ರತಿ 1 ಸಾವಿರ ಶಿಶುಗಳ ಪೈಕಿ ಶೇ.13.9 ಸ್ಟಿಲ್ಬರ್ತ್ ಶಿಶುಗಳು ಜನಿಸಿವೆ.
ನೈಜೀರಿಯಾ, ಪಾಕಿಸ್ತಾನ, ಇಥಿಯೋಪಿಯಾ, ಕಾಂಗೋ, ಚೀನಾಗಳಲ್ಲಿ ಇಂಥ ಶಿಶುಗಳ ಜನನ ಪ್ರಮಾಣ ಇನ್ನೂ ಹೆಚ್ಚಾಗಿಯೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.