ಆನ್‌ಲೈನ್ ಶಿಕ್ಷಣ: ಪೋಷಕರ ಮೇಲೂ ಹೆಚ್ಚುತ್ತಿರುವ ಒತ್ತಡ: ನಿರ್ವಹಣೆ ಹೇಗೆ?; ಪರಿಣತರ ಸಲಹೆ


Team Udayavani, Oct 11, 2020, 5:40 AM IST

ಆನ್‌ಲೈನ್ ಶಿಕ್ಷಣ: ಪೋಷಕರ ಮೇಲೂ ಹೆಚ್ಚುತ್ತಿರುವ ಒತ್ತಡ: ನಿರ್ವಹಣೆ ಹೇಗೆ?; ಪರಿಣತರ ಸಲಹೆ

ಸಾಂದರ್ಭಿಕ ಚಿತ್ರ

ಓದಿನಲ್ಲಿ ತಮ್ಮ ಮಕ್ಕಳು ಎಲ್ಲರಿಗಿಂತಲೂ ಮುಂದಿರಬೇಕು, ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಹೆತ್ತವರ ಕನಸಾಗಿರುತ್ತದೆ. ಅದಕ್ಕಾಗಿ ಕೊರೊನಾ ಸಂಕಷ್ಟ ಕಾಲದಲ್ಲಿಯೂ ಮಕ್ಕಳ ಓದಿಗಾಗಿ ಯಾವ ತ್ಯಾಗ ಕ್ಕೂ ಪೋಷಕರು ತಯಾ ರಿರುತ್ತಾರೆ. ಇಷ್ಟೆಲ್ಲ ಮಾಡಿದರೂ ಮಕ್ಕಳ ಭವಿಷ್ಯದ ಬಗೆಗಿನ ಚಿಂತೆ, ಆನ್‌ಲೈನ್‌ ಶಿಕ್ಷಣದ ವೇಳೆ ಉಂಟಾಗುತ್ತಿರುವ ಕೆಲವೊಂದು ಅಡಚಣೆಗಳು, ಆನ್‌ಲೈನ್‌ ಪಾಠ ಮಕ್ಕಳಿಗೆ ಮನದಟ್ಟಾಗುತ್ತಿದೆಯೇ ಎನ್ನುವ ಆತಂಕ.. ಇದು ಆನ್‌ಲೈನ್‌ ಕಲಿಕೆಯಿಂದ ಪೋಷಕರ ಮೇಲೆ ಉಂಟಾಗುತ್ತಿರುವ ಹೊಸ ರೀತಿಯ “ತಾಂತ್ರಿಕ ಒತ್ತಡ’ಗಳಾಗಿವೆ. ಹಿಂದೆ ಮಕ್ಕಳ ಭವಿಷ್ಯ, ಸರಿಯಾಗಿ ಓದುತ್ತಿಲ್ಲ, ಹೇಳಿದಂತೆ ಕೇಳುತ್ತಿಲ್ಲ ಎನ್ನುವ ಬಗೆಗಿನ ಸಮಸ್ಯೆಗಳನ್ನು ಹಿಡಿದುಕೊಂಡು ಆಪ್ತ ಸಮಾಲೋಚಕರ ಬಳಿಗೆ ಬರುತ್ತಿದ್ದರು. ಆದರೆ ಈಗ ಶೇ. 5ರಿಂದ ಶೇ. 10ರಷ್ಟು ಪೋಷಕರು ತಮ್ಮ ಮಕ್ಕಳ ಆನ್‌ಲೈನ್‌ ಶಿಕ್ಷಣದ ಬಗೆಗಿನ ಸಮಸ್ಯೆಗಳನ್ನು ಎದುರಿಸಲಾಗದೇ ತಮ್ಮ ಬಳಿ ಬರುತ್ತಿದ್ದಾರೆ ಎನ್ನುವುದು ಆಪ್ತ ಸಮಾಲೋಚಕರಾದ ಕುಂದಾಪುರದ ಡಾ| ಕೆ.ಎಸ್‌. ಕಾರಂತ ಅವರ ಅನುಭವದ ಮಾತು.  ಆನ್‌ಲೈನ್‌ ಕಲಿಕೆಯಿಂದ ಮಕ್ಕಳ ಮೇಲಿನ ಭಾರವನ್ನು ಯಾವ ರೀತಿಯಾಗಿ ಕಡಿಮೆ ಮಾಡಬಹುದು, ಪೋಷಕರು ಹೇಗೆ ತಮ್ಮ ಒತ್ತಡ ಕಡಿಮೆ ಮಾಡಬಹುದು, ಈ ಸಂಕಷ್ಟ ಕಾಲದಲ್ಲಿ ಪೋಷಕರ ಪಾತ್ರವೇನು ಎನ್ನುವುದರ ಕುರಿತಂತೆ ಡಾ| ಕೆ.ಎಸ್‌. ಕಾರಂತ ಅವರು ಈ ರೀತಿ ವಿವರಿಸುತ್ತಾರೆ.

ಹೆಚ್ಚುತ್ತಿರುವ ಮನೋ, ದೈಹಿಕ ಸಮಸ್ಯೆ
ಅಧ್ಯಯನವೊಂದರ ಪ್ರಕಾರ ಪ್ರಸ್ತುತ ಶೇ. 50ರಷ್ಟು ಮಂದಿಗೆ ಕೊರೊನಾ ಸಂಬಂಧಿ ವಿಚಾರಗಳಿಂದ ಮಾನಸಿಕ ಖನ್ನತೆ, ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಶೇ. 20ರಷ್ಟು ಮಂದಿ ಮಕ್ಕಳ ಕಲಿಕೆ, ಭವಿಷ್ಯ, ಆನ್‌ಲೈನ್‌ ಶಿಕ್ಷಣ ಇನ್ನಿತರ ವಿಷಯಗಳಿಂದಾಗಿ ಚಿಂತೆಗೊಳಗಾಗಿ ಖನ್ನತೆ, ಒತ್ತಡದಿಂದ ಬಳಲುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ.

ಶಿಕ್ಷಕರೇನು ಮಾಡಬೇಕು?
ಆನ್‌ಲೈನ್‌ ಶಿಕ್ಷಣವು ಶಿಕ್ಷಕರ ಮೇಲೂ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಅನೇಕ ಮಂದಿ ಮಕ್ಕಳನ್ನು ಒಟ್ಟಾಗಿ ಸಂಭಾಳಿಸಿಕೊಂಡು ಹೋಗುವುದು ಕಷ್ಟಕರ. ಅದರಲ್ಲೂ ಆನ್‌ಲೈನ್‌ ಪಾಠ ಮಾಡುವಾಗ ಮಕ್ಕಳು ಶಿಕ್ಷಕರ ನಿಯಂತ್ರಣದಲ್ಲಿ ಇರುವುದಿಲ್ಲ. ಅಂತಹ ಸಮಯದಲ್ಲಿ ಶಿಕ್ಷಕರು ಪೋಷಕರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿರಬೇಕು. ಪೋಷಕರಿಗೆ ಆನ್‌ಲೈನ್‌ ಶಿಕ್ಷಣದ ಕುರಿತಂತೆ ಮೊದಲೇ ವರ್ಚುವಲ್‌ ಮೀಟಿಂಗ್‌ ಮೂಲಕ ತರಬೇತಿಯನ್ನು ನೀಡಿದರೆ ಉತ್ತಮ.

ಪೋಷಕರ ಮೇಲೆ ಯಾವ ರೀತಿ ಒತ್ತಡ ?
– ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಚಿಂತೆ ಹೆಚ್ಚುತ್ತಿದೆ.
– ಆನ್‌ಲೈನ್‌ ಶಿಕ್ಷಣ ತಮ್ಮ ಮಕ್ಕಳಿಗೆ ಪರಿಣಾಮಕಾರಿ ಆಗಿದೆಯೇ ಎನ್ನುವ ಆತಂಕ.
– ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣದಿಂದ ಸರಿಯಾಗಿ ಅರ್ಥವಾಗುತ್ತಿಲ್ಲ ಅಥವಾ ಮಾಡಿದ ಪಾಠ ಮನದಟ್ಟಾಗುತ್ತಿಲ್ಲ ಎನ್ನುವ ಆತಂಕ.
– ಮಕ್ಕಳು ಭವಿಷ್ಯದಲ್ಲಿ ಮೊಬೈಲ್‌ಗೆ ಅಡಿಕ್ಟ್ (ಗೀಳು) ಆಗಬಹುದು ಎನ್ನುವ ಭಯ.
– ತಂದೆ-ತಾಯಿಗಳಿಬ್ಬರಲ್ಲಿ ಒಬ್ಬರು ಮಾತ್ರ ಮಕ್ಕಳ ಶಿಕ್ಷಣದ ಬಗ್ಗೆ ಗಮನಕೊಡುತ್ತಿದ್ದರೆ, ಅದೇ ವಿಚಾರವಾಗಿ ಇಬ್ಬರ ಮಧ್ಯೆ ವೈಮನಸ್ಸು, ಅಸಮಾಧಾನ ಸಹ ಉಂಟಾಗುತ್ತದೆ.

ಪೋಷಕರ ಒತ್ತಡ ನಿವಾರಣೆ ಹೇಗೆ ?
ಆನ್‌ಲೈನ್‌ ಶಿಕ್ಷಣ ಎನ್ನುವುದು ಶಾಶ್ವತವಲ್ಲ. ಇದೇ ಅಂತಿಮವೂ ಅಲ್ಲ. ಈಗಿನ ಕಾಲದಲ್ಲಿ ಅನಿವಾರ್ಯ.
ಆನ್‌ಲೈನ್‌ ಶಿಕ್ಷಣವೇ ಸೂಕ್ತ ಪಠ್ಯ ಕ್ರಮವೂ ಅಲ್ಲ. ಮುಂದಿನ 3-4 ತಿಂಗಳುಗ ಳಲ್ಲಿ ಪರಿಸ್ಥಿತಿ ಯಥಾಸ್ಥಿತಿಗೆ ಬಂದು ಎಲ್ಲವೂ ಮತ್ತೆ ಮೊದಲಿನಂತಾಗುತ್ತದೆ. ಅದನ್ನು ಪೋಷಕರು ಬಹುಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕು.
ಮಕ್ಕಳಿಗೆ ಹೆಚ್ಚಿನ ಸಮಯವನ್ನು ಕೊಡಿ.
ನಿಮ್ಮೆಲ್ಲ ಕೆಲಸಗಳ ಮಧ್ಯೆಯೂ ಈಗ ಮಕ್ಕಳಿಗೆ
ಹೆಚ್ಚಿನ ಸಮಯ ಕೊಡುವುದು ಆವಶ್ಯಕ.
ತಂದೆ ಹಾಗೂ ತಾಯಿ ಇಬ್ಬರಲ್ಲಿಯೂ ಮಕ್ಕಳ ಬಗೆಗೆ ಏಕಾಭಿ ಪ್ರಾಯ ಇರಲಿ. ಮಕ್ಕಳ ಶಿಕ್ಷಣ, ಭವಿಷ್ಯದ ಕುರಿತಂತೆ ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಗಮನಕೊಡಿ.
ಮಕ್ಕಳೆದುರು ಪೋಷಕರು ತಮ್ಮ ಕಷ್ಟಗಳನ್ನು,
ಆನ್‌ಲೈನ್‌ ಶಿಕ್ಷಣ ಅಥವಾ ಪಾಠ ಕಷ್ಟವೆಂದು ತೋರಿಸಿಕೊಳ್ಳಬೇಡಿ. ಇದರಿಂದ ಮಕ್ಕಳಿಗೆ ಅನಗತ್ಯ
ಭಯ, ಹಿಂಜರಿಕೆ ಶುರುವಾಗುತ್ತದೆ.
ಓದುವುದೊಂದೇ ಮಕ್ಕಳ ಕೆಲಸ ಎನ್ನುವ ನಿಮ್ಮ ಸಿದ್ದಾಂತ ವನ್ನು ತೊಡೆದು ಹಾಕಿ. ಮಕ್ಕಳಿಗೆ ಈಗ ಹಿಂದಿನಂತೆ ಸಣ್ಣ – ಪುಟ್ಟ ಮನೆ ವಾರ್ತೆ (ಮನೆ ಕೆಲಸ) ಯನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ. ಈಗ ಅದಕ್ಕೆ ಸೂಕ್ತ ಸಮಯವೂ ಬಂದಿದೆ. ಇದರಿಂದ ಮಕ್ಕಳಲ್ಲಿಯೂ ಪಾಠ, ಶಿಕ್ಷಣದ ಹೊರತಾಗಿ, ಸ್ವಲ್ಪ ಬದಲಾವಣೆ ಇರುತ್ತದೆ. ಇದು ಅವರಿಗೆ ಭವಿಷ್ಯದಲ್ಲಿಯೂ ನೆರವಾಗುತ್ತದೆ.
ಶಿಕ್ಷಕರೊಂದಿಗೆ ಮಕ್ಕಳ ಬಗೆಗೆ ಮುಕ್ತವಾಗಿ
ಸಂವಹನ ಇರಲಿ.

ಹೆತ್ತ ವರು ಬಹುಮುಖ್ಯವಾಗಿ ಮಕ್ಕಳ ಬಗ್ಗೆ ಈ ಸಮಯದಲ್ಲಿ ಹೆಚ್ಚಿನ ಕಾಳಜಿ ತೋರಬೇಕಾದುದು ಅತೀ ಆವಶ್ಯಕ. ಯಾವುದೇ ಸನ್ನಿವೇಶದಲ್ಲಿ ನೀವು ಆತಂಕ, ಒತ್ತಡ, ಚಿಂತೆಗೊಳಗಾದರೆ ಅದು ನಿಮ್ಮ ಮಗುವಿನ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ತಂದೆ- ತಾಯಿ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಸಮಾನ ರೀತಿಯಲ್ಲಿ ಮಕ್ಕಳ ಆನ್‌ಲೈನ್‌ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಮನೆಯಲ್ಲಿರುವ ತಾಯಂದಿರ ಮೇಲೆ ಭಾರೀ ಒತ್ತಡ ಬೀರುತ್ತದೆ.
-ಡಾ| ಕೆ.ಎಸ್‌. ಕಾರಂತ, ಮನೋ ವೈದ್ಯರು ಕುಂದಾಪುರ

ಆನ್‌ಲೈನ್‌ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು. ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್‌ಲೈನ್‌ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಸೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತು ಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್‌ ಮಾಡಿ.
7618774529

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.