ಕೋವಿಡ್: ಆಸ್ಪತ್ರೆಗೆ ದಾಖಲಾದ 4 ದಿನದಲ್ಲೇ ಶೇ. 51 ಸಾವು!
ಜೀವನ ರಕ್ಷಾ ಅಧ್ಯಯನದಲ್ಲಿ ಬಹಿರಂಗ
Team Udayavani, Oct 11, 2020, 6:00 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಶೇ. 51ರಷ್ಟು ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾದ ನಾಲ್ಕು ದಿನಗಳಲ್ಲೇ ಸಾವನ್ನಪ್ಪಿದ್ದು, ಈ ಪೈಕಿ ಶೇ. 17 ಸೋಂಕಿತರು ಆಸ್ಪತ್ರೆಗೆ ಆಗಮಿಸಿದ ದಿನವೇ ಮೃತಪಟ್ಟಿದ್ದಾರೆ ಎಂಬುದು ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಆಗಸ್ಟ್‌ನಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯನ್ನು ಆಧರಿಸಿ ಮೈಸೂರಿನ ಜೀವನ್ ರಕ್ಷಾ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಸಂಸ್ಥೆಯು ಈ ಅಧ್ಯಯನ ನಡೆಸಿದೆ. ಆ ತಿಂಗಳಲ್ಲಿ ಸಾವನ್ನಪ್ಪಿದ 2,697 ಸೋಂಕಿತರ ಪೈಕಿ ಶೇ. 51 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿ ನೂರು ತಾಸುಗಳಲ್ಲೇ ಸಾವನ್ನಪ್ಪಿದ್ದಾರೆ. ಕೋಲಾರದಲ್ಲಿ ಈ ಪ್ರಮಾಣ ನೂರರಷ್ಟಿದ್ದು, ಶೇ. 17ರಷ್ಟು ಮಂದಿ ದಾಖಲಾದ ದಿನವೇ ಮೃತಪಟ್ಟಿದ್ದಾರೆ. ಶೇ. 3ರಷ್ಟು ಸೋಂಕಿತರು ಆಸ್ಪತ್ರೆಗೆ ಆಗಮಿಸುವಷ್ಟರಲ್ಲಿ ಕೊನೆಯುಸಿರೆಳೆದಿರುವುದು ಪತ್ತೆಯಾಗಿದೆ ಎಂದು ಜೀವನ್ ರಕ್ಷಾ ಇನಿಷಿಯೇಟಿವ್ ಆಫ್ ಪ್ರಾಕ್ಸಿಮಾ ಸಂಚಾಲಕ ಮೈಸೂರು ಸಂಜೀವ್ ತಿಳಿಸಿದರು.
“ಕೋವಿಡ್ ಅವಧಿಯಲ್ಲಿ ಸಾವಿಗೆ ಕಾರಣವಾಗುವ ಅಂಶಗಳು’ ಕುರಿತ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂಕಿ-ಅಂಶಗಳು ಕೊರೊನಾ ಬಗ್ಗೆ ಸೋಂಕಿತರ ನಿರ್ಲಕ್ಷ್ಯ ಹಾಗೂ ಆಸ್ಪತ್ರೆ ವ್ಯವಸ್ಥೆಗೆ ಕನ್ನಡಿಯಾಗಿವೆ ಎಂದರು.
ಸಾವನ್ನಪ್ಪಿದವರಲ್ಲಿ ಬಹುತೇಕರು ವೈರಸ್ ಬಗ್ಗೆ ನಿರ್ಲಕ್ಷ್ಯ ಹೊಂದಿ ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಹೋಗಿದ್ದಾರೆ. ಉತ್ತರ ಕನ್ನಡ, ಕಲಬುರಗಿ, ಚಾಮರಾಜನಗರ ಮತ್ತು ಹಾಸನದಲ್ಲಿ ಕನಿಷ್ಠ ಶೇ. 18ರಿಂದ ಗರಿಷ್ಠ ಶೇ. 23ರಷ್ಟು ಜನ ಆಸ್ಪತ್ರೆಗಳಿಗೆ ಬರುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಹಲವು ಪ್ರಕರಣಗಳಲ್ಲಿ ಗ್ರಾಮೀಣ ಭಾಗದ ಸೌಲಭ್ಯಗಳ ಕೊರತೆ ಕಾರಣವಾಗಿವೆ. ಶೇ.40 ರೋಗಿಗಳು ಆಸ್ಪತ್ರೆಗಳಲ್ಲಿ 5-49 ದಿನಗಳ ಅಂತರದಲ್ಲಿ ಮೃತಪಟ್ಟಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ ಎಂದರು.
ಆಸ್ಪತ್ರೆಗಳ ಲೆಕ್ಕಾಚಾರ
ಶೇ. 45 ಸಾವು ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟ ಆಸ್ಪತ್ರೆಗಳಲ್ಲಿ ಹಾಗೂ ಶೇ. 27 ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಒಟ್ಟಾರೆ 2,697 ಸಾವುಗಳಲ್ಲಿ 32 ಸೋಂಕಿತರು ತಮ್ಮ ಮನೆಗಳಲ್ಲಿ ಹಾಗೂ 38 ರೋಗಿಗಳು ಆಸ್ಪತ್ರೆಗೆ ತರುವಾಗ ಸಾವನ್ನಪ್ಪಿದ್ದಾರೆ. ರಾಮನಗರದಲ್ಲಿ ದಾಖಲಾದ ಸಾವುಗಳ ಪೈಕಿ ಶೇ. 88 ಖಾಸಗಿ ಆಸ್ಪತ್ರೆಗಳಲ್ಲಾಗಿವೆ. ಇನ್ನು ಬೀದರ್‌ನಲ್ಲಿ ಶೇ. 92 ಸಾವು ಕೋವಿಡ್-19ಗೆ ಮೀಸಲಿಟ್ಟ ಆಸ್ಪತ್ರೆಗಳಲ್ಲಾಗಿವೆ. 30 ವರ್ಷ ಮೇಲ್ಪಟ್ಟ 54 ಸೋಂಕಿತರು ಅಸುನೀಗಿದ್ದು, ಇದರಲ್ಲಿ ಶೇ. 37 ಜನ ಬೆಂಗಳೂರು ನಗರಕ್ಕೆ ಸೇರಿದವರು.
ಮೃತರಲ್ಲಿ ಹೆಚ್ಚಿನವರಿಗೆ ತೀವ್ರ ಉಸಿರಾಟದ ಸಮಸ್ಯೆ (ಸಾರಿ), ವಿಷಮಶೀತ ಜ್ವರದ ಲಕ್ಷಣಗಳಿದ್ದವು. ಶ್ವಾಸಕೋಶ ತಜ್ಞರ ಕೊರತೆ ಮತ್ತಿತರ ಅಂಶಗಳು ಕಾರಣ ಎಂದ ಅವರು, ಸಾವನ್ನಪ್ಪಿದವರಲ್ಲಿ ಶೇ. 69.19ರಷ್ಟು ಪುರುಷರು ಹಾಗೂ ಶೇ. 30.77 ಮಹಿಳೆಯರು. ದೇಶದ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 7.6ರಷ್ಟಿದ್ದು, ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಶೇ. 9.7 ರಷ್ಟಿದೆ. ಅದೇ ರೀತಿ, ದೊಡ್ಡ ರಾಜ್ಯ ಗಳಲ್ಲಿ ಮೃತ ಪ್ರಮಾಣ ಶೇ. 78ರಷ್ಟಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.