2 ತಿಂಗಳಲ್ಲಿ ಅತ್ಯಾಚಾರ ತನಿಖೆ ಮುಗಿಸಿ
ಹತ್ರಾಸ್ ಅತ್ಯಾಚಾರ ಹಿನ್ನೆಲೆಯಲ್ಲಿ ಸಲಹಾ ಪಟ್ಟಿ ಪ್ರಕಟ
Team Udayavani, Oct 11, 2020, 6:04 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: “ಅತ್ಯಾಚಾರ ಪ್ರಕರಣಗಳ ತನಿಖೆ ಯನ್ನು 2 ತಿಂಗಳುಗಳಲ್ಲಿ ಮುಗಿಸಬೇಕು, ಝೀರೋ ಎಫ್ಐಆರ್ ದಾಖಲಿಸಬೇಕು, ಸಾವಿನ ಸಂದರ್ಭದ ಹೇಳಿಕೆ ದಾಖಲಿಸಿಕೊಳ್ಳಬೇಕು… ಸಂತ್ರಸ್ತರಿಗೆ ಶೀಘ್ರ ನ್ಯಾಯ ಕೊಡಿಸಲು ಶ್ರಮಿಸಬೇಕು…’
ಹತ್ರಾಸ್‌ನ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 3 ಪುಟಗಳ ಮಾರ್ಗಸೂಚಿಗಳನ್ನು ಕಳುಹಿಸಿದೆ.
2 ತಿಂಗಳುಗಳಲ್ಲಿ ತನಿಖೆ ಮುಗಿಸಿ
ಅತ್ಯಾಚಾರ ಪ್ರಕರಣ ದಾಖಲಾದ ದಿನದಿಂದ ಎರಡು ತಿಂಗಳುಗಳಲ್ಲಿ ತನಿಖೆ ಮುಗಿಸಬೇಕು. ಯಾವುದೇ ಕಾರಣಕ್ಕೂ ಪ್ರಕರಣವನ್ನು ಎಳೆಯುವಂತಿಲ್ಲ. ಸಂತ್ರಸ್ತೆ ಸಾವನ್ನಪ್ಪುವಾಗ ನೀಡಿದ ಹೇಳಿಕೆಯನ್ನು ಸಾಕ್ಷ éವಾಗಿ ಪರಿಗಣಿಸಲೇಬೇಕು. ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿಲ್ಲ ಎಂಬ ಕಾರಣಕ್ಕೋ ಅಥವಾ ಹೇಳಿಕೆ ದಾಖಲಿಸುವಾಗ ಸಾಕ್ಷ್ಯಗಳು ಇರಲಿಲ್ಲ ಎಂಬ ಕಾರಣಕ್ಕೆ ಸಂತ್ರಸ್ತೆಯ ಹೇಳಿಕೆಯನ್ನು ತಿರಸ್ಕರಿಸಬಾರದು. ಇದನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಬೇಕು ಎಂದಿದೆ.
ಝೀರೋ ಎಫ್ಐಆರ್
ಪೊಲೀಸ್ ಠಾಣೆಗಳ ಸರಹದ್ದು ಕುರಿತಂತೆ ಇಂದಿಗೂ ವಿವಾದಗಳಿವೆ. ಆದರೆ ಅತ್ಯಾಚಾರ ಪ್ರಕರಣದಲ್ಲಿ ಈ ಸರಹದ್ದಿನ ಗೋಜಿಗೇ ಹೋಗಕೂಡದು. ಇಂಥ ಪ್ರಕರಣ ತಮ್ಮ ಠಾಣೆಯ ವ್ಯಾಪ್ತಿಯಿಂದ ಹೊರಗೆ ನಡೆದಿದ್ದರೂ ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇದಕ್ಕಾಗಿ “ಝೀರೋ ಎಫ್ಐಆರ್’ ದಾಖಲಿಸಿಕೊಳ್ಳಬೇಕು. ಒಂದು ವೇಳೆ ಕ್ರಮ ತೆಗೆದುಕೊಳ್ಳದೇ ಹೋದರೆ ಸಂತ್ರಸ್ತರಿಗೆ ನ್ಯಾಯ ನೀಡಿದಂತಾಗುವುದಿಲ್ಲ ಎಂದು ಹೇಳಿದೆ.
ಆನ್‌ಲೈನ್ ಪೋರ್ಟಲ್
ಲೈಂಗಿಕ ಅಪರಾಧಗಳ ತನಿಖಾ ನಿಗಾ ವ್ಯವಸ್ಥೆ (ಐಟಿಎಸ್‌ಎಸ್‌ಒ) ಅನ್ನು ಶುರು ಮಾಡಲಾಗಿದ್ದು, ರಾಜ್ಯ ಸರಕಾರಗಳ ವ್ಯಾಪ್ತಿಗೆ ನೀಡಲಾಗಿದೆ. ಇದರ ಮೂಲಕ ಲೈಂಗಿಕ ಪ್ರಕರಣಗಳಲ್ಲೆ ಮತ್ತೆ ಮತ್ತೆ ಅಪರಾಧವೆಸಗುವಂಥವರನ್ನು ಗುರುತಿಸಲು ಸಾಧ್ಯವಾಗಲಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು, ಮಹಿಳೆಯರ ದೌರ್ಜನ್ಯವನ್ನು ತಡೆಗಟ್ಟುವ ವಿಚಾರದಲ್ಲಿ ಇರುವ ಎಲ್ಲ ಕಾನೂನುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಸರಿಯಾದ ಸಮಯಕ್ಕೆ ಚಾರ್ಜ್‌ಶೀಟ್ ಹಾಕಿ, ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದೆ.
ಅಧಿಕಾರಿಗಳ ವಿರುದ್ಧ ಕ್ರಮ
ಮಹಿಳೆಯರ ಮೇಲಿನ ದೌರ್ಜನ್ಯ ಸಂಬಂಧ ಇಂದಿಗೂ ದೇಶದ ಸಿಆರ್‌ಪಿಸಿಯಲ್ಲಿ ಅತ್ಯಂತ ಕಠಿನ ಕಾನೂನುಗಳಿವೆ. ಆದರೆ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದನ್ನು ಮನಗಂಡಿರುವ ಕೇಂದ್ರ ಸರಕಾರ, ಇನ್ನು ಮುಂದೆ ಮಹಿಳೆಯರ ರಕ್ಷಣೆ ಕುರಿತಂತೆ ಪೊಲೀಸರ ವೈಫಲ್ಯ ಕಂಡು ಬಂದರೆ, ಅಂಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಕಠಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದೂ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.