ಮರು ಬಿಡುಗಡೆಯತ್ತ ರಮೇಶ್ ಅರವಿಂದ್ ಸಿನಿಮಾ
Team Udayavani, Oct 11, 2020, 1:08 PM IST
ರಮೇಶ್ ಅರವಿಂದ್ ನಾಯಕರಾಗಿರುವ ಚಿತ್ರವೊಂದು ಚಿತ್ರಮಂದಿರ ತೆರೆಯುತ್ತಿದ್ದಂತೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಪಕ್ಕಾ ಫ್ಯಾಮಿಲಿ ಹೀರೋ ಎನಿಸಿಕೊಂಡಿರುವ ರಮೇಶ್ ಅವರಿಂದಲೇ ರೀಓಪನ್ ಆಗಲಿದೆ!
ಹೀಗೆಂದರೆ ನಿಮಗೆ ಆಶ್ವರ್ಯವಾಗಲಿದೆ. ರಮೇಶ್ ಅವರ ಯಾವ ಚಿತ್ರ ಬಿಡುಗಡೆಯಾಗುತ್ತಿದೆ ಎಂದು. ಏಕೆಂದರೆ ರಮೇಶ್ ನಟಿಸಿ, ನಿರ್ದೇಶಿಸಿರುವ “100′ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಸೆನ್ಸಾರ್ ಬೇರೆ ಆಗಿದೆ. ಹಾಗಾದರೆ ಆ ಚಿತ್ರ ಬಿಡುಗಡೆಯಾಗುತ್ತಾ ಎಂದು ನೀವು ಕೇಳಬಹುದು. ಖಂಡಿತಾ ಅಲ್ಲ, ಆ ಚಿತ್ರ ಈಗ ಬಿಡುಗಡೆಯಾಗುತ್ತಿಲ್ಲ. ಚಿತ್ರಮಂದಿರಕ್ಕೆ ಜನ ಭಯಬಿಟ್ಟು ಬರುವವರೆಗೆ ಆ ಚಿತ್ರವನ್ನು ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ. ಈಗ ಬಿಡುಗಡೆಯಾಗುತ್ತಿರುವುದು ರಮೇಶ್ ಅವರ”ಶಿವಾಜಿ ಸುರತ್ಕಲ್’ ಚಿತ್ರ. ಹೌದು, ಈ ಚಿತ್ರ ಅಕ್ಟೋಬರ್15ರಿಂದ ಮರುಬಿಡುಗಡೆಯಾಗುತ್ತಿದೆ.ಈ ಮೂಲಕ ಚಿತ್ರಮಂದಿರ ರೀ ಓಪನ್ ಆಗುವ ದಿನವೇ ಈ ಚಿತ್ರ ಪ್ರದರ್ಶನವಾಗಲಿದೆ. ಕೆ.ಆರ್.ಜಿ. ಸ್ಟುಡಿಯೋ ಈ ಚಿತ್ರವನ್ನು ಮರುಬಿಡುಗಡೆ ಮಾಡಲು ನಿರ್ಧರಿಸಿದೆ.
ಈ ಚಿತ್ರ ಫೆ.21ರಂದು ತೆರೆಕಂಡು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಮೊದಲ ವಾರ ಸುಮಾರು80ಕೇಂದ್ರಗಳಲ್ಲಿ ಬಿಡುಗಡೆಯಾಗಿದ್ದ “ಶಿವಾಜಿ ಸುರತ್ಕಲ್’,2ನೇ ವಾರದಿಂದ ಸುಮಾರು 120 ಕೇಂದ್ರಗಳಲ್ಲಿ ಪ್ರದರ್ಶನವಾಗಿತ್ತು. ಇದೊಂದು ಪತ್ತೇದಾರಿ ಸಿನಿಮಾವಾಗಿದ್ದು, ಕೊಲೆಯೊಂದರ ರಹಸ್ಯದ ಸುತ್ತ ಚಿತ್ರ ಸಾಗುತ್ತದೆ. ಆಕಾಶ್ ಶ್ರೀವತ್ಸ ಈ ಚಿತ್ರದ ನಿರ್ದೇಶಕರು. ಈಗ ಈ ಚಿತ್ರದ ಮುಂದುವರೆದ ಭಾಗ ಮಾಡುವ ತಯಾರಿಯಲ್ಲಿದ್ದಾರೆ.
ದಿಯಾಗೂ ಮರು ಬಿಡುಗಡೆ ಭಾಗ್ಯ : ಈ ವರ್ಷಾರಂಭದಲ್ಲಿ ಬಿಡುಗಡೆಯಾಗಿ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆ ಪಡೆದ ಸಿನಿಮಾ “ದಿಯಾ’. ಆದರೆ ಚಿತ್ರಮಂದಿರಗಳಿಗೆಮಾತ್ರ ಹೆಚ್ಚು ಜನ ಬರಲಿಲ್ಲ ಎಂಬ ಬೇಸರ ಚಿತ್ರತಂಡಕ್ಕಿತ್ತು. ಆದರೆ, ಸೋಶಿಯಲ್ ಮೀಡಿಯಾ ಹಾಗೂ ಟಿವಿಯಲ್ಲಿಈಚಿತ್ರ ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಈ ಚಿತ್ರ ಕೂಡಾ ಮರು ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ ಆರಂಭದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿಹಾಡು ಇರಲಿಲ್ಲ. ಆದರೆ ಈಗ ಚಿತ್ರಕ್ಕೊಂದು ಹಾಡು ಸೇರಿಸಿಯೇ ರಿಲೀಸ್ ಮಾಡಲು ಚಿತ್ರತಂಡ ಯೋಚಿಸಿದೆ. ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಖುಷಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.