ಧಾರ್ಮಿಕ ಕ್ಷೇತ್ರಕ್ಕೆ ತೆರಳುತ್ತಿದ್ದ ಬಸ್ಸಿಗೆ ರೈಲು ಡಿಕ್ಕಿ 18 ಸಾವು, 40ಕ್ಕೂ ಹೆಚ್ಚು ಗಾಯ
Team Udayavani, Oct 11, 2020, 5:40 PM IST
ಥೈಲ್ಯಾಂಡ್ : ಬಸ್ ಚಾಲಕನ ಅಜಾಗರೂಕತೆಯಿಂದ ಗೂಡ್ಸ್ ರೈಲೊಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಹದಿನೆಂಟು ಮಂದಿ ಸಾವನ್ನಪ್ಪಿ, ಸುಮಾರು ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಬ್ಯಾಂಕಾಕ್ ನಿಂದ 40ಮೈಲು ದೂರದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಪೂರ್ವ ಬ್ಯಾಂಕಾಕ್ ನಿಂದ ಮೂವತ್ತು ಮೈಲು ದೂರದಲ್ಲಿರುವ ಚಾಚೊಂಗ್ಸಾವೊ ಪ್ರಾಂತ್ಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪರಿಣಾಮ ಗಂಭೀರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯಲ್ಲಿ ಬಸ್ಸು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಬಸ್ಸಿನಲ್ಲಿ ಸಿಲುಕೊಂಡವರ ರಕ್ಷಣೆ ಮಾಡಲು ಕೆಲವು ಗಂಟೆಗಳೇ ಬೇಕಾಯಿತು.
ಘಟನೆ ವಿವರ :
ಥೈಲ್ಯಾಂಡ್ ಸಮುತ್ ಪ್ರಕಾನ್ ಪ್ರಾಂತ್ಯದಿಂದ ಕಾರ್ಖಾನೆಯ 60 ಮಂದಿ ಸಿಬ್ಬಂದಿಗಳು ಧಾರ್ಮಿಕ ಕ್ಷೇತ್ರಗಳ ಭೇಟಿಗಾಗಿ ಚಚೊಯೆಂಗ್‌ಸಾವೊದಲ್ಲಿರುವ ಬುದ್ಧನ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು ಈ ವೇಳೆ ಖ್ಲಾಂಗ್ ಕ್ವಾಂಗ್ ಕ್ಲಾನ್ ಜಿಲ್ಲೆಯಲ್ಲಿ ರೈಲ್ವೆ ಕ್ರಾಸಿಂಗ್ ಇದ್ದ ಪರಿಣಾಮ ಗೇಟ್ ಹಾಕಿದ್ದರು ಆದರೆ ಬಸ್ಸು ಚಾಲಕ ಅದನ್ನು ಕಡೆಗಣಿಸಿ ಮುನ್ನುಗ್ಗಿದ್ದಾನೆ ಪರಿಣಾಮ ಗೂಡ್ಸ್ ರೈಲು ಬಸ್ಸಿಗೆ ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಚಲ್ಲಾಪಿಲ್ಲಿಯಾಗಿದ್ದಾರೆ, ಕೆಲವೊಂದು ಮೃತದೇಹಗಳು ಬಸ್ಸಿನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು, ಘಟನೆ ನಡೆದ ಕೂಡಲೇ ರಕ್ಷಣಾ ಕಾರ್ಯ ನಡೆಸಿದರೂ ಹದಿನೆಂಟು ಮಂದಿ ಸಾವನ್ನಪ್ಪಿದ್ದಾರೆ, ಸುಮಾರು ನಲವತ್ತು ಮಂದಿಯನ್ನು ಆಸ್ಪತ್ರೆಗೆ ಸಾಗಿಸಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.