![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 12, 2020, 7:15 AM IST
ಬೆಂಗಳೂರು: ಐಸಿಸ್ ನಂಟು ಹೊಂದಿದ್ದ ಆರೋಪದಲ್ಲಿ ಮೂರು ದಿನಗಳ ಹಿಂದೆ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದ ಎನ್‌ಎಐ ಅಧಿಕಾರಿಗಳು ಬೆಂಗಳೂರು ಮತ್ತು ತಮಿಳುನಾಡಿನಲ್ಲಿರುವ ವಾಟ್ಸಾಪ್ ಗ್ರೂಪ್‌ಗ್ಳ ಇನ್ನಷ್ಟು ಸದಸ್ಯರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯ ಡಾ| ಅಬ್ದುರ್ ರೆಹಮಾನ್ ಅಲಿಯಾಸ್ ಡಾ| ಬ್ರೇವ್ ಹೇಳಿಕೆ ಆಧರಸಿ ಅ. 8ರಂದು ಫ್ರೆಜರ್ ಟೌನ್‌ನ ಇರ್ಫಾನ್ ನಾಸೀರ್ ಮತ್ತು ತಮಿಳುನಾಡು ರಾಮನಾಥಪುರದ ಅಹ್ಮದ್ ಅಬ್ದುಲ್ ಖಾದರ್ ಅವರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ಸಂದರ್ಭದಲ್ಲಿ ಕೆಲವು ಸ್ಫೋಟಕ ಮಾಹಿತಿ ಸಿಕ್ಕಿದ್ದು, ಅವರ ” ಸರ್ಕಲ್’ ಹೆಸರಿನ ವಾಟ್ಸಾಪ್ ಗ್ರೂಪ್‌ನಲ್ಲಿದ್ದ ಇನ್ನಷ್ಟು ಮಂದಿಯ ಹೆಸರನ್ನು ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ.
ಈ ಮಾಹಿತಿ ಪ್ರಕಾರ ಬೆಂಗಳೂರು ಮತ್ತು ತಮಿಳುನಾಡಿನಲ್ಲಿ 7ಕ್ಕೂ ಅಧಿಕ ಶಂಕಿತರು ಅಡಗಿಕೊಂಡಿದ್ದಾರೆ. ಇರ್ಫಾನ್ ಮತ್ತು ಖಾದರ್ ಬಂಧನವಾಗುತ್ತಿದ್ದಂತೆ ಅವರು ತಲೆಮರೆಸಿಕೊಂಡಿದ್ದಾರೆ. ಅವರ ಹೆಸರು ಮತ್ತು ವಿಳಾಸವನ್ನು ಪತ್ತೆ ಹಚ್ಚಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಇದನ್ನೂ ಓದಿ :ಫ್ರೆಂಚ್ ಓಪನ್ : 20ನೇ ಗ್ರಾಂಡ್ ಸ್ಲಾಮ್ ಗೆದ್ದ ನಡಾಲ್! ವೃತ್ತಿ ಜೀವನದ 100ನೇ ಗೆಲುವು
ಈ ಇಬ್ಬರು ಶಂಕಿತರು ಬೆಂಗಳೂರು ಮತ್ತು ತಮಿಳುನಾಡಿನ ಸಮುದಾಯದ ಐವರು ಯುವಕರಿಗೆ ಆಮಿಷವೊಡ್ಡಿ 2013-14ರಲ್ಲಿ ಸಿರಿಯಾಕ್ಕೆ ಕಳುಹಿಸಿದ್ದರು. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಮೂವರು ವಾಪಸಾಗಿದ್ದಾರೆ. ಈಗ ಮೂವರು ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಸ್ಲಿಪರ್ ಸೆಲ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.
ಇನ್ನಷ್ಟು ಮಂದಿ ಸಿರಿಯಾಗೆ
ಇರ್ಫಾನ್ ಮತ್ತು ಖಾದರ್ ಸಮುದಾಯದ ಇನ್ನಷ್ಟು ಮಂದಿಗೆ ಕೆಲ ಆಮಿಷವೊಡ್ಡಿ ಮತ್ತು ಧರ್ಮ ಬೋಧನೆ ಹೆಸರಿನಲ್ಲಿ ಕೇರಳ ಮೂಲಕವೇ ಸಿರಿಯಾಗೆ ಕಳುಹಿಸಲು ಸಿದ್ಧತೆ ನಡೆಸಿದ್ದರು. ಆದರೆ, ದೇಶದಲ್ಲಿ ಲಾಕ್‌ಡೌನ್ ಜಾರಿಯಾದ್ದರಿಂದ ವಿಮಾನಗಳ ಹಾರಾಟ ಸ್ಥಗಿತಗೊಂಡಿತ್ತು. ಹೀಗಾಗಿ ಈ ಯೋಜನೆಯನ್ನು ಮುಂದೂಡಲಾಗಿತ್ತು. ಇತ್ತೀಚೆಗೆ ಈ ಕಾರ್ಯ ಮತ್ತೆ ಚುರುಕುಗೊಂಡಿದೆ. ಆದರೆ, ಈ ಇಬ್ಬರ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಡಾ| ಬ್ರೇವ್ ಮತ್ತೆ ವಶಕ್ಕೆ
ಡಾ| ಅಬ್ದರ್ ರೆಹಮಾನ್ ಅಲಿಯಾಸ್ ಡಾ| ಬ್ರೇವ್‌ನನ್ನು ಮತ್ತೂಮ್ಮೆ ವಶಕ್ಕೆ ಪಡೆಯಲಾಗುವುದು ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಡಾ| ಬ್ರೇವ್‌ಗೆ ವಾಟ್ಸಾಪ್ ಗ್ರೂಪ್ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಅಲ್ಲದೆ, ಸಿರಿಯಾದಿಂದ ವಾಪಸಾಗಿರುವ ಮೂವರ ಬಗ್ಗೆಯೂ ಮಾಹಿತಿ ಇದೆ. ಹೀಗಾಗಿ ಆತನನ್ನು ಹೆಚ್ಚಿನ ವಿಚಾರಣೆಗೆ ಐದು ದಿನಗಳ ಕಾಲ ವಶಕ್ಕೆ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.