ದೇಶದಲ್ಲಿ ಪ್ರತಿನಿತ್ಯ ದಾಖಲಾಗುತ್ತಿವೆ 87 ಅತ್ಯಾಚಾರ ಪ್ರಕರಣಗಳು!
Team Udayavani, Oct 12, 2020, 5:45 AM IST
ಮಣಿಪಾಲ: ದೇಶದಲ್ಲಿ ಪ್ರತೀ ದಿನ ಅತ್ಯಾಚಾರ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೂಮ್ಮೆ ದೇಶಾದ್ಯಂತ ಮಹಿಳೆಯರ ಸುರಕ್ಷತೆ ವಿಚಾರ ಮುನ್ನೆಲೆಗೆ ಬಂದಿದೆ. ಮಹಿಳೆಯರಲ್ಲಿ ಸುರಕ್ಷತ ಮನೋಭಾವ ಹೆಚ್ಚುವ ಬದಲು ಪಾತಕಿಗಳು ನಿರ್ಭೀತಿ ಯಿಂದ ತಮ್ಮ ಪೈಶಾಚಿಕ ಕೃತ್ಯಗಳನ್ನು ನಡೆಸು ತ್ತಿರುವುದು ನಾಗರಿಕ ಸಮಾಜವನ್ನು ಆತಂಕ ಕ್ಕೀಡು ಮಾಡಿದೆ.
ದಿಲ್ಲಿಯ ನಿರ್ಭಯಾ ಪ್ರಕರಣದ ಬಳಿಕ ಕೇಂದ್ರ, ರಾಜ್ಯ ಸರಕಾರಗಳು ಮಹಿಳೆಯರ ಸುರಕ್ಷತೆಗಾಗಿ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಮಹಿಳೆಯರ ಮೇಲಣ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಕಡಿಮೆ ಯಾಗುವ ಬದಲು ಹೆಚ್ಚುತ್ತಿವೆ.
2012ರ ಬಳಿಕ ದೇಶಾದ್ಯಂತ ಹೆಚ್ಚಿದ ಅತ್ಯಾಚಾರ, ಮಹಿಳೆಯರು-ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು, ತಗ್ಗಿದ ಶಿಕ್ಷೆಯ ಪ್ರಮಾಣದ ಕುರಿತಾಗಿನ ಅಂಕಿ- ಅಂಶ ಗಳು ಈ ವಿಷಯವನ್ನು ಸಾರಿ ಹೇಳುತ್ತಿವೆ. ಈ ಬೆಳ ವಣಿಗೆಗೆ ನಿದರ್ಶನ ಎಂಬಂತೆ 2019ರ ಅವಧಿಯಲ್ಲಿಯೂ ದೇಶ ದಲ್ಲಿ ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳು ಗಮ ನಾರ್ಹ ಪ್ರಮಾಣದಲ್ಲಿ ಹೆಚ್ಚಳ ವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್‌ಸಿಆರ್‌ಬಿ) ವರದಿ ನೀಡಿದೆ.
ಪ್ರತಿನಿತ್ಯ 87 ಅತ್ಯಾಚಾರ ಪ್ರಕರಣಗಳು
ಎನ್‌ಸಿಆರ್‌ಬಿ ಬಿಡುಗಡೆ ಮಾಡಿರುವ “ಕ್ರೈಮ್ ಇನ್ ಇಂಡಿಯಾ – 2019′ ವರದಿಯ ಪ್ರಕಾರ ದೇಶದ್ಯಾಂತ ಪ್ರತಿ ನಿತ್ಯ ಸರಾಸರಿ 87 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. 1 ಲಕ್ಷ ಮಹಿಳೆಯರಲ್ಲಿ 62.4ರಷ್ಟು ಮಂದಿ ದೌರ್ಜನ್ಯಕ್ಕೆ ಒಳ ಗಾಗುತ್ತಿದ್ದು, 2018ರಲ್ಲಿ ಇದರ ಪ್ರಮಾಣ 58.8ರಷ್ಟಿತ್ತು ಎಂದು ವರದಿ ಹೇಳಿದೆ.
ಶೇ. 7.3 ರಷ್ಟು ಹೆಚ್ಚಳ
2018ರಲ್ಲಿ 3.78 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಮಾಣ 2019ರಲ್ಲಿ 4.05 ಲಕ್ಷಕ್ಕೆ ಏರಿಕೆಯಾಗಿದೆ. ಆ ಮೂಲಕ ಅಪರಾಧ ಕೃತ್ಯಗಳ ಒಟ್ಟಾರೆ ಪ್ರಮಾಣದಲ್ಲಿ ಶೇ.7.3ರಷ್ಟು ಏರಿಕೆಯಾಗಿದೆ.
ಶೇ. 30.9ರಷ್ಟು ದೌರ್ಜನ್ಯ ಪ್ರಕರಣ
ದಾಖಲಾಗಿರುವ ಅಪರಾಧ ಪ್ರಕರಣಗಳ ಪೈಕಿ ಬಹುತೇಕ ಭಾರತೀಯ ದಂಡ ಸಂಹಿತೆಯಡಿ ಪತಿ ಅಥವಾ ಪತ್ನಿಯ ವಿರುದ್ಧದ ದೌರ್ಜನ್ಯ ಸಂಬಂಧ ಶೇ.30.9 ರಷ್ಟು ಪ್ರಕರಣಗಳು ದಾಖಲಾಗಿವೆ.
ಶೇ. 21.84ರಷ್ಟು ಹಲ್ಲೆ ಪ್ರಕರಣ
ಶೇ. 21.84ರಷ್ಟು ಪ್ರಕರಣಗಳು ತನ್ನ ಅಧೀನದಲ್ಲೇ ಇರಬೇಕೆಂದು ಮಹಿಳೆ ಮೇಳೆ ಹಲ್ಲೆ, ಶೇ.17.9 ರಷ್ಟು ಅಪಹರಣ ಮತ್ತು 7.9 ರಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ಅಂಕಿ ಅಂಶಗಳು ಹೇಳಿವೆ.
ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ
ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳಲ್ಲಿ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ. ಹಿಂದಿನ ವರ್ಷ ಮಹಿಳೆಯರ ಸಂಬಂಧಿತ ಒಟ್ಟು 4,05,861 ಪ್ರಕರಣಗಳು ದಾಖಲಾಗಿದ್ದರೆ, 2018ರಲ್ಲಿ 3,78,236 ಪ್ರಕರಣಗಳು ದಾಖಲಾಗಿದ್ದವು. ಆ ಪೈಕಿ ಉತ್ತರ ಪ್ರದೇಶವೊಂದರಲ್ಲೇ 59,583 ಪ್ರಕರಣಗಳು ವರದಿಯಾಗಿವೆ.
ನಿರ್ಭಯಾ ಪ್ರಕರಣದಲ್ಲಿ ಕೇಂದ್ರ ತೆಗೆದುಕೊಂಡ ಕ್ರಮ
– ನಿರ್ಭಯಾ ನಿಧಿ ಅಡಿ ರಾಜ್ಯಗಳಿಗೆ ಮಹಿಳಾ ಸುರಕ್ಷತೆಗೆ ಕ್ರಮಗಳಿಗಾಗಿ ಕೇಂದ್ರದ ನೆರವು
– ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಗಾಗಿ ಪೋಕ್ಸೋ ಕಾಯಿದೆಗೆ ತಿದ್ದುಪಡಿ.
– ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ಕೋರ್ಟ್ ಸ್ಥಾಪನೆ.
– ತುರ್ತು ಕರೆ ವ್ಯವಸ್ಥೆ (ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ) 16 ರಾಜ್ಯಗಳಲ್ಲಿ ಪ್ರಾಯೋಗಿಕ ವಾಗಿ ಪ್ಯಾನಿಕ್ ಬಟನ್ ಯೋಜನೆ ಜಾರಿ.
– ಒನ್ ಸ್ಟಾಪ್ ಸೆಂಟರ್ (ಸಂಕಷ್ಟದಲ್ಲಿರುವ ಮಹಿಳೆಯರ ನೆರವು ಕೇಂದ್ರ) ಮಹಿಳೆ ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧ ತಡೆ ಯೋಜನೆ.
– ಕೇಂದ್ರೀಯ ಸಂತ್ರಸ್ತ ಪರಿಹಾರ ನಿಧಿ ಸ್ಥಾಪನೆ, ಮಹಿಳಾ ಪೊಲೀಸ್ ಸ್ವಸಹಾಯ ಯೋಜನೆ.
– ಜಾರಿ ಮಹಿಳಾ ಸಹಾಯವಾಣಿಯ ಸಾರ್ವತ್ರೀಕರಣ ಯೋಜನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.