ಶಾಸಕ ಪ್ರಭು ವಿವಾಹ ಜಟಾಪಟಿ: ಅರ್ಜಿ ಇತ್ಯರ್ಥಗೊಳಿಸಿದ ಮದ್ರಾಸ್ ಹೈಕೋರ್ಟ್
ಇದೇ ಸಂದರ್ಭದಲ್ಲಿ ತಂದೆಯ ಬಳಿ ಮಾತನಾಡಲು ಸೌಂದರ್ಯಾಗೆ ಅವಕಾಶ ಮಾಡಿಕೊಡಲಾಯಿತು.
Team Udayavani, Oct 10, 2020, 10:16 AM IST
ಚೆನ್ನೈ: ಎಐಎಎಡಿಎಂಕೆ ಶಾಸಕ ಎ.ಪ್ರಭು ವಿವಾಹ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಶಾಸಕ ತನ್ನ ಮಗಳನ್ನು
ಅಪಹರಣ ಮಾಡಿದ್ದು, ಅವಳನ್ನು ಹುಡುಕಿಕೊಡಬೇಕು ಎಂದು ಕೋರಿ ಶಾಸಕನ ಪತ್ನಿ ಸೌಂದರ್ಯಾ ಅವರ ತಂದೆ ಸ್ವಾಮಿನಾಥನ್ ಹೇಬಿ ಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಕೋರ್ಟ್ ಹಾಲ್‌ನಲ್ಲಿ ಹಾಜರಿದ್ದ ಸೌಂದರ್ಯಾ, ತಾನು ಪತಿಯ ಜತೆಗೇ ಇರಲು ಬಯಸುವುದಾಗಿ ಮತ್ತು ತನ್ನನ್ನು ಯಾರೂ ಅಪಹರಿಸಲಿಲ್ಲ ಎಂದು ಅರಿಕೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ತಂದೆಯ ಬಳಿ ಮಾತನಾಡಲು ಸೌಂದರ್ಯಾಗೆ ಅವಕಾಶ ಮಾಡಿಕೊಡಲಾಯಿತು.
ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ಹೈಕೋರ್ಟ್, ಸೌಂದರ್ಯಾ ಅವರಿಗೆ ಪತಿಯೊಂದಿಗೆ ಹೋಗಲು ಅನುಮತಿ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿತು.
ಕ್ಲಾಟ್ ರದ್ದತಿಗೆ ಸುಪ್ರೀಂ ನಕಾರ
ಕಾನೂನು ವ್ಯಾಸಂಗ ಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯುವ ಪ್ರವೇಶ ಪರೀ ಕ್ಷೆ ಕಾಮನ್ ಲಾ ಅಡ್ಮಿ ಷನ್ ಟೆಸ್ಟ್‌ನ (ಕ್ಲಾಟ್) ಈ ವರ್ಷದ ಪರೀಕ್ಷೆಯನ್ನು ರದ್ದುಗೊಳಿ ಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಜೊತೆಗೆ, ಕ್ಲಾಟ್ ಪರೀಕ್ಷೆ ಜರಗಿ ದರೂ ಸೀಟು ಹಂಚಿಕೆ ಕೌನ್ಸೆ ಲಿಂಗ್ ಪ್ರಕ್ರಿಯೆಯನ್ನಾ ದರೂ ತಡೆಯಲು ಆದೇಶಿಸಬೇಕು ಎಂದು ಕೇಳಲಾಗಿದ್ದ ಮನವಿಯನ್ನೂ ತಿರಸ್ಕರಿಸಲಾಗಿದೆ.
ದೇಶದ 23 ರಾಷ್ಟ್ರೀಯ ಕಾನೂನು ವಿವಿಗಳ ಕೋರ್ಸ್ ಗಳ ದಾಖಲಾತಿಗಾಗಿ ಸೆ. 28ರಂದು ಕ್ಲಾಟ್ ಪರೀಕ್ಷೆ ನಡೆದಿದೆ. ಆ ಪರೀಕ್ಷೆಯಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದ ಹಿನ್ನೆ ಲೆಯಲ್ಲಿ ಇಡೀ ಪರೀಕ್ಷೆ ರದ್ದುಗೊಳಿಸಬೇಕೆಂದು ಹಿರಿಯ ವಕೀಲ ಶಂಕರನಾರಾಯಣನ್ ಅವರು ಮನವಿ ಸಲ್ಲಿ ಸಿ ದ್ದರು. ಇದಕ್ಕೆ ಉತ್ತರಿಸಿರುವ ನ್ಯಾಯಪೀಠ, ಪರೀಕ್ಷೆ ಬಗೆಗಿನ ದೋಷಗಳನ್ನು ಪಟ್ಟಿ ಮಾಡಿ 2 ದಿನಗ ಳೊಳಗೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.