ಪ್ರವಾಸೋದ್ಯಮ ಇಲಾಖೆಗೆ ನಂದಿ ಗಿರಿಧಾಮ ನಿರ್ವಹಣೆ
ನಂದಿ ಉಳಿಸಿ ಅಭಿಯಾನ ನಡೆಸಲು ಪರಿಸರ ಪ್ರೇಮಿಗಳ ಎಚ್ಚರಿಕೆ , ತೋಟಗಾರಿಕೆ ಇಲಾಖೆಯೇ ನಿರ್ವಹಣೆ ಮುಂದುವರಿಸಲು ಒತ್ತಾಯ
Team Udayavani, Oct 12, 2020, 3:28 PM IST
ಚಿಕ್ಕಬಳ್ಳಾಪುರ: ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕರ್ನಾಟಕದಊಟಿ ಎಂದು ಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರಜಿಲ್ಲೆಯ ನಂದಿಗಿರಿಧಾಮದ ನಿರ್ವಹಣೆಯನ್ನುತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ನಿರ್ಧಾರಕ್ಕೆ ಪರಿಸರಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಹಾಗೂ ಸಚಿವ ಸಿಟಿ ರವಿ ಸಮ್ಮುಖದಲ್ಲಿ ನಂದಿಗಿರಿಧಾಮವನ್ನು ತೋಟಗಾರಿಕೆಇಲಾಖೆಯಿಂದ ಪ್ರವಾಸೋದ್ಯಮಹಸ್ತಾಂತರಿಸಲುನಿರ್ಧರಿಸಿರುವುದು ಅಸಮಾಧಾನಕ್ಕೆಕಾರಣವಾಗಿದೆ.
ಅಸಮಾಧಾನ: 1914ರಲ್ಲಿ ಮೈಸೂರು ಮಹಾ ರಾಜರು ನಂದಿ ಗಿರಿಧಾಮದ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ನೀಡಿದರು.ಅಂದಿನಿಂದ ಇದುವರೆಗೆ ನಂದಿ ಗಿರಿಧಾಮಕ್ಕೆ ಬರುವಪ್ರವಾಸಿಗಿರಿಗೆ ಅಗತ್ಯ ಸೌಲಭ್ಯಕಲ್ಪಿಸಲು ತೋಟಗಾರಿಕೆ ಇಲಾಖೆ ಶ್ರಮಿಸುತ್ತಾ ಬಂದಿದೆ. ಆದರೆ ಸರ್ಕಾರ ನಂದಿ ಗಿರಿಧಾಮದ ನಿರ್ವಹಣೆಯನ್ನು ಪ್ರವಾಸೋದ್ಯಮದಇಲಾಖೆಗೆ ಹಸ್ತಾಂತರಿಸಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲು ಮುಂದಾಗಿರುವುದಕ್ಕೆ ಅಸಮಾಧಾನ ಕೇಳಿಬಂದಿದೆ.
ಸ್ವರ್ಗಕ್ಕೆ ಹೋಲಿಕೆ: ಬಯಲುಸೀಮೆ ಪ್ರದೇಶದಲ್ಲಿ ಬರಪೀಡಿತ ಜಿಲ್ಲೆಯೆಂದು ಅಪಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಂದಿ ಗಿರಿಧಾಮ ಪರಿಸರಸಂರಕ್ಷಣೆಯಿಂದ ನೈಸರ್ಗಿಕ ಸಂಪತ್ತನ್ನು ತನ್ನಮಡಿಲಲ್ಲಿ ಇಟ್ಟಕೊಂಡು ವಿಶ್ವ ವಿಖ್ಯಾತಿ ಹೊಂದಿದೆ. ಇಲ್ಲಿನ ಸೌಂದರ್ಯ ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಗಿರಿಧಾಮವನ್ನು ಸ್ವರ್ಗಕ್ಕೆ ಹೋಲಿಸುತ್ತಾರೆ ಇಲ್ಲಿನ ಬೆಟ್ಟಗುಡ್ಡಗಳು, ಹಸಿರುಮಯ ವಾತಾವರಣ
ನೋಡಿ ಮನಸೋಲದ ಪ್ರವಾಸಿಗರಿಲ್ಲ.ತೋಟಗಾರಿಕೆ ಇಲಾಖೆಯೇ ನಿರ್ವಹಿಸಲಿ: ಸಾರ್ಕ್ ಕಾನ್ಫರೆನ್ಸ್ ಮೂಲಕ ಇಡೀ ವಿಶ್ವದ ಗಮನ ಸೆಳೆದ ನಂದಿಗಿರಿಧಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ವಿಶ್ರಾಂತಿ ಪಡೆದಿರುವ ಗಾಂಧಿ ಭವನ ಮತ್ತು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕಾಲಾವಧಿಯಲ್ಲಿ ಬ್ರಿಟಿಷರಿಗೆ ಶಿಕ್ಷೆ ವಿಧಿಸಲು ನಿರ್ಮಿಸಿರುವ ಟಿಪ್ಪು ಡ್ರಾಪ್ ಮತ್ತು ಅರಮನೆ ಸೇರಿದಂತೆ ಅನೇಕ ವೈಶಿಷ್ಟ್ಯತೆಯನ್ನು ಹೊಂದಿರುವ ನಂದಿ ಗಿರಿಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಂಡಿದ್ದು, ಅದರ ನಿರ್ವಹಣೆ ತೋಟಗಾರಿಕೆಗೆ ಇಲಾಖೆಗೆ ಮುಂದುವರಿಯಲಿ ಎಂಬ ಆಗ್ರಹ ಕೇಳಿಬರುತ್ತಿದೆ.
ವಾಣಿಜ್ಯಕರಣ ಬೇಡ: ಜಿಲ್ಲೆಯ ಪ್ರವಾಸಿತಾಣ ನಂದಿ ಗಿರಿಧಾಮದ ಅಭಿವೃದ್ಧಿಗೆ ಸರ್ಕಾರಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿ. ಆದರೆ ನಂದಿ ಗಿರಿಧಾಮವನ್ನು ಪ್ರವಾಸೋದ್ಯಮದ ಇಲಾಖೆಗೆ ಹಸ್ತಾಂತರಿಸಿ ವಾಣಿಜ್ಯಕರಣಗೊಳಿಸುವಯಾವುದೇ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿರ್ಧಾರವನ್ನು ಸರ್ಕಾರ ವಾಪಸ್ ಪಡೆಯಬೇಕೆಂದು ಪರಿಸರ ಪ್ರೇಮಿಗಳು ಮತ್ತುನಿವೃತ್ತ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಪರಿಸರ ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ.
ನಂದಿ ಉಳಿಸಿ ಅಭಿಯಾನ… : ಕೋಲಾರ ಮತ್ತು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಮ್ಲಜನಕ ಕೇಂದ್ರ (ಆಕ್ಸಿಜನ್ ಸೆಂಟರ್)ವಾಗಿದೆ. ಜೀವ ವೈವಿಧ್ಯತೆ ಇದೆ. ಹಲವಾರು ನದಿಗಳ ಉಗಮ ಸ್ಥಾನ ಮತ್ತು ಅರಣ್ಯ ಸಂಪತ್ತನ್ನು ಮಡಿಲಲ್ಲಿ ಇಟ್ಟುಕೊಂಡಿದೆ ನಂದಿ ಗಿರಿಧಾಮ. ಈ ಪ್ರದೇಶದ ವ್ಯಾಪ್ತಿಯಲ್ಲಿಕೃಷಿಯೇತರಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿ ಸುಮಾರು5ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿ ಗಣಿಗಾರಿಕೆಗೆ ಅವಕಾಶ ನೀಡದೆ ಅಲ್ಲಿರುವಅರಣ್ಯ ಪ್ರದೇಶ ಉಳಿಸುವ ಜೊತೆಗೆ ಅಮೂಲ್ಯ ಪ್ರಭೇದಗಳನ್ನು ಉಳಿಸಿ ಸ್ಥಳೀಯ ಪ್ರಭೇದಗಳನ್ನು ಹಾಕಿ ಅರಣ್ಯ ಬೆಳೆಸುವಂತಹಕೆಲಸ ಆಗಬೇಕೆಂಬ ಆಗ್ರಹಕೇಳಿ ಬರುತ್ತಿದೆ. ಸರ್ಕಾರ ವಾಣಿಜ್ಯಕರಣಗೊಳಿಸುವ ಉದ್ದೇಶದಿಂದ ನಂದಿ ಗಿರಿಧಾಮವನ್ನು ಪ್ರವಾಸೋದ್ಯಮದ ಇಲಾಖೆಗೆ ಹಸ್ತಾಂತರಿಸಲು ಹೊರಟಿರುವುದನ್ನು ಆಕ್ಷೇಪ ವ್ಯಕ್ತಪಡಿಸಿರುವ ಪರಿಸರ ಪ್ರೇಮಿಗಳು ಸರ್ಕಾರ ನಿರ್ಧಾರವನ್ನು ವಾಪಸ್ ಪಡೆಯದಿದ್ದಲ್ಲಿ ನಂದಿ ಉಳಿಸಿ ಅಭಿಯಾನ ನಡೆಸಲು ವೇದಿಕೆ ಸಜ್ಜಾಗಿದೆ.
ಲೇಔಟ್,ಕೈಗಾರಿಕೆ, ರೆಸಾರ್ಟ್‌ಗೆ ಅವಕಾಶ ಬೇಡ : ನಂದಿ ಗಿರಿಧಾಮದ ಸುತ್ತಮುತ್ತ ಲೇಔಟ್, ಕೈಗಾರಿಕೆಗಳು, ರೆಸಾರ್ಟ್‌ಗಳ ಸ್ಥಾಪನೆಗೆ ಅವಕಾಶ ನೀಡಬಾರದು. ಪರಿಸರ ಸಂರಕ್ಷಣೆ ಮಾಡಲು ಪರಿಸರ ಸೂಕ್ಷ್ಮ ವಲಯ ವೆಂದು ಘೋಷಿಸಿ ಗಿರಿ ಧಾಮದ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಬೇಕುಎಂದು ಚಿಕ್ಕಬಳ್ಳಾಪುರದಪರಿಸರ ಪ್ರೇಮಿ ಆಂಜಿನೇಯರೆಡ್ಡಿ ಹೇಳಿದರು. ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವುದರಿಂದ ಸರ್ಕಾರಕ್ಕೆ ಆದಾಯ ಬರಬಹುದು ವಿನಃ ಜೀವ ವೈವಿಧ್ಯತೆಮತ್ತು ಜಲಮೂಲಗಳನ್ನು ಅಭಿವೃದ್ಧಿಗೊಳಿಸುವಕಾರ್ಯ ಪ್ರವಾಸೋದ್ಯಮ ಇಲಾಖೆಯಿಂದ ಆಗುವುದಿಲ್ಲ. ಬದಲಿಗೆ ನಾಶವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ನಿರ್ಧಾರ ಹಿಂಪ ಡೆದು ಪರಿಸರ ಸ್ನೇಹಿ ಕೆಲಸ ಮಾಡಬೇಕು. ಇಲ್ಲ ದಿದ್ದರೆ ಪ್ರಗತಿಪರ ಸಂಘಟನೆಗಳ ಸಹಕಾರದಿಂದ ನಂದಿಬೆಟ್ಟ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡುತ್ತೇವೆ ಎಂದು ಹೇಳಿದ್ದಾರೆ.
ನಂದಿ ಗಿರಿಧಾಮವನ್ನು ತೋಟ ಗಾರಿಕೆ ಇಲಾಖೆಯನಿರ್ವಹಣೆ ಮುಂದು ವರಿಸಿ ಪ್ರವಾಸೋದ್ಯಮ ಇಲಾಖೆ ಮೂಲಕ ಅಭಿವೃದ್ಧಿ ಕೆಲಸಗಳು ನಡೆಯಲಿ. ನಂದಿಗಿರಿಧಾಮದ ಮೂಲಕ ಬರುವ ಆದಾಯ ಗಿರಿಧಾಮಕ್ಕೆಬಳಸುವಂತಹಕೆಲಸ ಆಗಬೇಕು. ಎರಡುಇಲಾಖೆಗಳು ಸಮನ್ವಯದಿಂದಕಾರ್ಯ ನಿರ್ವಹಿಸಿ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸುವಕೆಲಸ ಪರಿಣಾಮಕಾರಿಯಾಗಿ ಮಾಡಬೇಕು. – ಸಂತೋಷ್ ಬೆಳ್ಳೂಟಿ, ಪರಿಸರ ಪ್ರೇಮಿ, ಶಿಡ್ಲಘಟ್ಟ
–ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.