ನೀರು ಶುದ್ಧೀಕರಣಕ್ಕೆ ಫಿಲ್ಟರ್‌ ಮೀಡಿಯಾ

ದಶಕದ ನಂತರ ದುರಸ್ತಿಗೊಳ್ಳುತ್ತಿದೆ ಘಟಕ

Team Udayavani, Oct 12, 2020, 4:40 PM IST

ನೀರು ಶುದ್ಧೀಕರಣಕ್ಕೆ ಫಿಲ್ಟರ್‌ ಮೀಡಿಯಾ

ವಾಡಿ: ಪಟ್ಟಣದ ಪುರಸಭೆಗೆ ಸೇರಿದ ಕುಂದನೂರು ಭೀಮಾನದಿ ದಡದ ಜಲ ಶುದ್ಧೀಕರಣ ಘಟಕಕ್ಕೆಮರುಜೀವ ನೀಡಲು ಅಧಿಕಾರಿಗಳುಹಾಗೂ ಜನಪ್ರತಿನಿಧಿಗಳು ಹರಸಾಹಸ ಪಡುತ್ತಿದ್ದಾರೆ.

ಕೆಟ್ಟು ಹೋಗಿದ್ದ ಘಟಕದ ನೀರು ಶುದ್ಧೀಕರಣದ ತುಕ್ಕು ಹಿಡಿದ ಯಂತ್ರಗಳನ್ನು ಬದಲಿ ಹೊಸ ಯಂತ್ರೋಪಕರಣಗಳನ್ನುಅಳವಡಿಸಲಾಗಿದೆ. ಕಳೆದ ಎರಡು ತಿಂಗಳಿಂದ ಶುಚಿತ್ವ ಕಾರ್ಯಮುಂದುವರೆದಿದ್ದು, ವಿವಿಧ ರಾಸಾಯನಿಕ ದಾಸ್ತಾನು ತರಿಸಿಘಟಕದಲ್ಲಿ ಶೇಖರಣೆ ಮಾಡಲಾಗಿದೆ. ಬೃಹತ್‌ ಜಲ ಸಂಗ್ರಹಗಾರಗಳನ್ನುಶುಚಿಗೊಳಿಸಲಾಗಿದೆ. ಕಲುಷಿತನೀರನ್ನು ಶ್ವೇತವರ್ಣಕ್ಕೆ ತಿರುಗಿಸಲು ಪ್ರಮುಖವಾಗಿ ಬೇಕಾದ ಬ್ಲೀಚಿಂಗ್‌ಫೌಡರ್‌ ಮತ್ತು ಆಲಂ ತುಂಡುಗಳರಾಶಿಯೇ ಬಂದು ಬಿದ್ದಿದ್ದು,ಸ್ಥಳೀಯರ ದಶಕಗಳ ಶುದ್ಧ ನೀರಿನಕನಸು ನನಸಾಗುವ ಸಮಯ ಹತ್ತಿರ ಬಂದಂತಾಗಿದೆ.

ಅಗತ್ಯ ರಾಸಾಯನಿಕವಿಲ್ಲದೆ, ಗುಣಮಟ್ಟದ ಯಂತ್ರೋಪಕರಣಗಳು ಇಲ್ಲದೆ ಹಾಗೂ ಟ್ರ್ಯಾಕ್ಟರ್‌ಗಟ್ಟಲೇ ಹೂಳು ತುಂಬಿದ್ದ ನೀರು ಸಂಗ್ರಹಗಾರಗಳ ಶುಚಿತ್ವವಿಲ್ಲದೆ  ನಿರ್ಲಕ್ಷ್ಯಕ್ಕೊಳಗಾಗಿದ್ದ ನೀರು ಶುದ್ಧೀಕರಣ ಘಟಕವೀಗ ನವೀಕರಣ ಗೊಳ್ಳುತ್ತಿದೆ. ಕಾಂಗ್ರೆಸ್‌ನ ಝರೀನಾಬೇಗಂ ಅವರು ಪುರಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಶುದ್ಧ ನೀರಿನ ಘಟಕ ದುರಸ್ತಿಗೆ ಮುಂದಾಗಿರುವುದೇ ಅಗತ್ಯ ಪರಿಕರಗಳು ಖರೀದಿಯಾಗಲು ಸಾಧ್ಯವಾಗಿದೆ ಎನ್ನಬಹುದು. ನೀರು ಫಿಲ್ಟರ್‌ ಮಾಡಲು ಅತ್ಯಗತ್ಯವಾಗಿ ಬೇಕಾದ ನಾಲ್ಕು ರೂಪದ ಮರಳು ಇಷ್ಟುದಿನ ಹೂಳಿನಲ್ಲಿ ಹೂಳಾಗಿ ಹೋಗಿತ್ತು.

ಈಗ ಮತ್ತೆ ಹೊಸದಾಗಿ ಸ್ಯಾಂಡ್‌ ಮೀಡಿಯಾ ತರಿಸಲಾಗಿದ್ದು, ಘಟಕದಲ್ಲಿ ಮರಳು ತುಂಬುವ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ವಾಡಿ ಪಟ್ಟಣದ ಜನತೆಗೆ ಕುಡಿಯಲು ಅತ್ಯಂತ ಶುದ್ಧ ನೀರು ಸರಬರಾಜು ಮಾಡುತ್ತೇವೆ ಎನ್ನುತ್ತಾರೆ ಮುಖ್ಯಾ ಧಿಕಾರಿ ವಿಠuಲ ಹಾದಿಮನಿಹಾಗೂ ಕಿರಿಯ ಅಭಿಯಂತರರಾಜಕುಮಾರ ಅಕ್ಕಿ ಅವರು. ಇದ್ದೂ ಇಲ್ಲದಂತಿದ್ದ ಜಲ ಶುದ್ಧೀಕರಣ ಘಟಕ ಬಹಳ ವರ್ಷಗಳ ನಂತರ ಹೊಸ ರೂಪ ಪಡೆದುಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಫಿಲ್ಟರ್‌ ನೀರು ಉತ್ಪತ್ತಿಯಾಗಲು ಯೋಗ್ಯವಲ್ಲದಷ್ಟು ಘಟಕ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಯಾವುದೇ ಯಂತ್ರಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಫಿಲ್ಟರ್‌ ಮೀಡಿಯಾ ಮರಳು ಹೂಳಿನಲ್ಲಿ ಕೊಚ್ಚಿಕೊಂಡು ಹೋಗಿತ್ತು.ರಾಸಾಯನಿಕಗಳು ಇರಲಿಲ್ಲ. ನೀರು ಸಂಗ್ರಹಗಾರಗಳು ಹೂಳು ತುಂಬಿಕೊಂಡಿದ್ದವು. ಹೀಗಾಗಿ ಜನರಿಗೆ ಶುದ್ಧ ನೀರು ಕೊಡಲು ಸಾಧ್ಯವಾಗಿರಲಿಲ್ಲ. ಪರಿಶೀಲನೆ ನಡೆಸಿದ ನಂತರ ವಾಸ್ತವ ಸ್ಥಿತಿ ನನಗೆ ತಿಳಿಯಿತು. ಹೀಗಾಗಿ ನೀರು ಶುದ್ಧೀಕರಣ ಘಟಕವನ್ನು ತಳಮಟ್ಟದಿಂದ ದುರಸ್ತಿ ಕಾರ್ಯ ಕೈಗೊಳ್ಳಲು ಮುಂದಾಗಿದ್ದೇವೆ. ನಗರದ ನಾಲ್ಕು ಓವರ್‌ ಹೆಡ್‌ಟ್ಯಾಂಕ್‌ಗಳ ಹೂಳು ತೆರವುಗೊಳಿಸಲು ಪುರಸಭೆ ಖಜಾನೆಯಲ್ಲಿ ಅನುದಾನದಕೊರತೆಯಿದ್ದು, 14ನೇ ಹಣಕಾಸಿನಲ್ಲಿ 8 ಲಕ್ಷ ರೂ. ಅನುದಾನ ಬಳಕೆಮಾಡಿಕೊಳ್ಳಲು ಅನುಮೋದನೆ ನೀಡುವಂತೆ ಜಿಲ್ಲಾ ಧಿಕಾರಿಗಳಿಗೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. -ಝರೀನಾಬೇಗಂ, ವಾಡಿ ಪುರಸಭೆ ಅಧ್ಯಕ್ಷೆ

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.