ವಿಜ್ಞಾನದಿಂದ ಮೂಢನಂಬಿಕೆ ದೂರ
Team Udayavani, Oct 12, 2020, 4:47 PM IST
ಯಾದಗಿರಿ: ವಿಜ್ಞಾನದಿಂದ ಮೂಢನಂಬಿಕೆ, ಕಂದಾಚಾರ ದೂರವಾಗಲಿದೆ. ಡಿಜಿಟಲ್ ಯುಗಕ್ಕೆ ಕಾಲಿಡುತ್ತಿರುವ ಸನ್ನಿವೇಶದಲ್ಲಿ ಭಾನಾಮತಿಯಂತಹ ಪ್ರಕರಣಗಳು ಜೀವಂತವಾಗಿರುವುದು ವಿಷಾದನೀಯ ಸಂಗತಿ ಎಂದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಗಿರೀಶ ಕಡ್ಲೇವಾಡ ಹೇಳಿದರು.
ಯಾದಗಿರಿ ನಗರದ ಹೊರವಲಯದಲ್ಲಿರುವ ಎಪಿಎಫ್‌ದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಅಜೀಂ ಪ್ರೇಮಜಿಫೌಂಡೇಶನ್ ಇವರ ಸಹಯೋಗದಲ್ಲಿ ಕಲಬುರಗಿ ವಿಭಾಗದ ಬಾಲ ವಿಜ್ಞಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ನಾಲ್ಕು ದಶಕಗಳಿಂದ ಬಾಲ ವಿಜ್ಞಾನ ಪತ್ರಿಕೆಯ ಕೊಡುಗೆ ಗುರುತರವಾಗಿದೆ. ವೈಜ್ಞಾನಿಕ ಚಿಂತನೆಗಳನ್ನು ಕನ್ನಡ ಭಾಷೆಯ ಮೂಲಕ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. ಇದನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ವೆಬ್‌ಸೈಟ್ ನಲ್ಲಿ ಹಳೆಯ ಪತ್ರಿಕೆಗಳನ್ನು ಪಡೆದುಕೊಳ್ಳಬಹುದು ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ಮಹಾರುದ್ರಪ್ಪ ಅಣದೂರು ಅಧ್ಯಕ್ಷತೆ ವಹಿಸಿದ್ದರು. ಡಾ. ಕುಂಟೆಪ್ಪ ಗೌರಿಪುರ, ಪ್ರಕಾಶ ಲಕ್ಕಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ ಕ್ಯಾತನಾಳ, ಎಪಿಎಪ್ ಸಂಸ್ಥೆ ಸಂಯೋಜಕಿ ಅಕ್ಕಮಹಾದೇವಿ, ಬಾಲವಿಜ್ಞಾನೋತ್ಸವ ಸಂಯೋಜಕ ಸೂರ್ಯಪ್ರಕಾಶ ಘನಾತೆ,ರಾಜಶೇಖರ ಪಾಟೀಲ, ಶ್ರೀಶೈಲ ಎನ್. ಪೂಜಾರಿ,ಅಶೋಕ ಕೆಂಭಾವಿ, ಶರಣಗೌಡ, ಮುಖ್ಯಗುರು ಲಿಂಗಾರೆಡ್ಡಿ ನಾಯಕ ಇತರರಿದ್ದರು. ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ರಾಮಕೃಷ್ಣ ಕಟ್ಕಾವಲಿ ಮತ್ತು ಸಾಯಪ್ಪ ಚಂಡ್ರಿಕಿ ವಿವಿಧ ಗೋಷ್ಠಿಗಳನ್ನು ನಿರೂಪಿಸಿದರು.
ಕನ್ನಡದಲ್ಲಿ ವಿಜ್ಞಾನ ಸಂವಹನ ಕುರಿತು ಚಿಟಗುಪ್ಪ ಜ್ಞಾನಾಮೃತ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶೈಲಜಾ ಜಿ.ಹುಡಗೆ ಉಪನ್ಯಾಸ ನೀಡಿದರು. ಇದಕ್ಕೂ ಮುಂಚೆ ಬಾಲ ವಿಜ್ಞಾನ ಪತ್ರಿಕೆಯ ಲೇಖಕರಾದ ಅಮರೇಗೌಡ ಲಿಂಗಸುಗೂರ, ಸಂತೋಷಕುಮಾರ ಎಸ್.ಪಿ. ಆಳಂದ, ಶೈಲಜಾ ಗುಂಡಪ್ಪ ಬೀದರ ಅವರನ್ನು ಸನ್ಮಾನಿಸಿ ಅಭಿನಂದನಾ ಪತ್ರಗಳನ್ನು ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.