ಜಪಾನ್‌ ಕಡಲ ಗಡಿ ಪ್ರವೇಶಿಸಿದ ಚೀನದ ಹಡಗುಗಳು; ಎಚ್ಚರಿಕೆ ಬಳಿಕ ವಾಪಾಸಾದವು


Team Udayavani, Oct 12, 2020, 5:41 PM IST

Bihar Election NDA 2

ಮಣಿಪಾಲ: ಚೀನದ ನೆರೆಯ ರಾಷ್ಟ್ರಗಳು ಅದರ ವಿರುದ್ಧ ತಿರುಗಿ ಬೀಳಲು ಪ್ರಾರಂಭಿಸಿವೆ. ಇದೀಗ ಜಪಾನ್‌ ಸರದಿ. ಸೆನ್ಕಾಕು ದ್ವೀಪದ ಬಳಿ ತಮ್ಮ ಗಡಿಯನ್ನು ಪ್ರವೇಶಿಸಿದ ಎರಡು ಚೀನೀ ಹಡಗುಗಳಿಗೆ ತತ್‌ಕ್ಷಣ ಮರಳುವಂತೆ ಜಪಾನ್ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಚೀನದ ಹಡಗು ವಾಪಾಸಾಗಿದೆ ಎಂದು ವರದಿಯಾಗಿದೆ.

ಎನ್‌ಎಚ್‌ಕೆ ವರ್ಲ್ಡ್ ವರದಿಯ ಪ್ರಕಾರ ಚೀನದ ಮೂರು ಗಸ್ತು ಹಡಗುಗಳು ಜಪಾನ್‌ನ ಮೀನುಗಾರಿಕೆ ದೋಣಿಯನ್ನು ಅನುಸರಿಸುತ್ತಿದ್ದವು. ಈ ಸಂದರ್ಭ ಇವುಗಳಲ್ಲಿ ಎರಡು ಹಡಗುಗಳು ಜಪಾನ್‌ನ ಕಡಲ ಗಡಿಯನ್ನು ಪ್ರವೇಶಿಸಿದ್ದವು ಎನ್ನಲಾಗಿದೆ. ಈ ಹಡಗುಗಳು ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ಜಪಾನ್‌ನ ಕಡಲ ಪ್ರದೇಶದಲ್ಲಿ ಉಳಿದುಕೊಂಡಿದ್ದವು. ಬಳಿಕ ಜಪಾನ್ ಕೋಸ್ಟ್ ಗಾರ್ಡ್ ಅವರನ್ನು ಹಿಂದಿರುಗುವಂತೆ ಸೂಚನೆ ನೀಡಿದ ಬಳಿಕ ಚೀನದ ಹಡಗುಗಳು ಹಿಂದಿರುಗಿದವು ಎಂದು ಹೇಳಿದೆ.

ಆಗಸ್ಟ್ 28ರ ಬಳಿಕ ಚೀನದ ಹಡಗುಗಳು ಜಪಾನ್‌ ಗಡಿ ಪ್ರವೇಶಿಸಿದ್ದು ಇದೇ ಮೊದಲು. ಈ ವರ್ಷ ಇಲ್ಲಿಯ ವರೆಗೆ 18 ಚೀನಾದ ಗಸ್ತು ಹಡಗುಗಳು ಜಪಾನಿನ ಕಡಲ ಗಡಿಯಲ್ಲಿ ನುಸುಳಿವೆ. ಚೀನದ ಹಡಗುಗಳ ಈ ಆಕ್ರಮಣಕಾರಿ ವರ್ತನೆಗಳ ದೃಷ್ಟಿಯಿಂದ ಜಪಾನ್ ತನ್ನ ಅಂತಾರಾಷ್ಟ್ರೀಯ ಸಾಗರ ಗಡಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಗಸ್ತು ತಿರುಗುತ್ತಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಚೀನ ಸಮುದ್ರದಲ್ಲಿ ಮಲೇಷ್ಯಾ ಕೂಡ ಚೀನಕ್ಕೆ ಸವಾಲು ಹಾಕಿದೆ. ಚೀನದ 6 ಮೀನುಗಾರಿಕಾ ದೋಣಿಗಳನ್ನು ಮಲೇಷ್ಯಾದ ಕಡಲ ಜಾರಿ ಸಂಸ್ಥೆ (ಎಂಎಂಇಎ) ಶುಕ್ರವಾರ ವಶಪಡಿಸಿಕೊಂಡಿದೆ. ಈ ದೋಣಿಗಳು ಅಕ್ರಮವಾಗಿ ಮಲೇಷ್ಯಾದ ಕಡಲ ಗಡಿಯಲ್ಲಿರುವ ಜೊಹೋರ್ ಕೊಲ್ಲಿಗೆ ಪ್ರವೇಶಿಸಿದ್ದವು. ಇವುಗಳಲ್ಲಿ ಪ್ರಯಾಣಿಸುತ್ತಿದ್ದ 60 ಚೀನೀ ಪ್ರಜೆಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ

ಸೆನ್ಕಾಕು ಅಥವಾ ದಾಯು ದ್ವೀಪವು ಜಪಾನ್‌ನ ನೈಋತ್ಯ ಪ್ರದೇಶದಲ್ಲಿದೆ. ಜಪಾನ್ ಚೀನದೊಂದಿಗಿನ ವಿವಾದಕ್ಕೆ ಇದು ಕಾರಣವಾಗಿದೆ. ಜಪಾನ್ ಪ್ರಸ್ತುತ ಇದರ ಹಕ್ಕನ್ನು ಹೊಂದಿದೆ. ಆದರೆ ಚೀನ ಇದರ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಇದು ದಕ್ಷಿಣ ಚೀನ ಸಮುದ್ರದ ಸಮೀಪದಲ್ಲಿದೆ. ದ್ವೀಪವು 12 ಮೈಲಿ ಅಂತಾರಾಷ್ಟ್ರೀಯ ವಿಮಾನ ಮಾರ್ಗವನ್ನು ಸಹ ಹೊಂದಿದೆ. ಆದರೆ ಚೀನ ಇದನ್ನು ಒಪ್ಪಿಕೊಳ್ಳದೇ ತನ್ನ ಕುತಂತ್ರವನ್ನೂ ಅಲ್ಲೂ ಮುಂದುವರೆಸಿವೆ. ಚೀನದ ವಾಯುಪಡೆಯು ಜಪಾನ್‌ನ ವಾಯುಪ್ರದೇಶಕ್ಕೆ ನುಸುಳುತ್ತಿರುತ್ತದೆ. ಈ ನಿಟ್ಟಿನಲ್ಲಿ ಜಪಾನಿನ ವಾಯುಪಡೆಯು ಯಾವಾಗಲೂ ಚೀನದ ಎದುರು ಎಚ್ಚರಿಕೆಯಂದಿರುತ್ತದೆ.

ಸೆನ್ಕಾಕು ದ್ವೀಪದ ಬಳಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಚೀನ ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಹೇಳಿದೆ. ಈ ದ್ವೀಪವು ಮೊದಲಿನಿಂದಲೂ ಚೀನದ ಭಾಗವಾಗಿದೆ. ನಮ್ಮ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ದೃಢನಿಶ್ಚಯವನ್ನು ಹೊಂದಿದ್ದೇವೆ. ಇಲ್ಲಿ ನಮ್ಮ ಸೇನಾ ವಿಮಾನಗಳು ಕಾರ್ಯಚರಿಸುತ್ತಿರುತ್ತದೆ. ನಮ್ಮ ನೌಕಾಪಡೆಯು ನಿಯಮಿತವಾಗಿ ಗಸ್ತು ತಿರುಗುತ್ತಿದೆ. ಇದು ಯಾವುದೇ ರೀತಿಯಲ್ಲಿ ಅಂತಾರಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲ. ಇದರಿಂದ ಯಾವುದೇ ದೇಶಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಚೀನದ ವಿದೇಶಾಂಗ ವಕ್ತಾರ ಹೇಳಿದ್ದಾರೆ.

 

ಟಾಪ್ ನ್ಯೂಸ್

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

1-tume

Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

death

Kinnigoli: ಔಷಧ ಸಿಂಪಡಿಸುವಾಗ ಕುಸಿದು ಬಿದ್ದು ಕೃಷಿಕ ಸಾವು

4

Uppinangady: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.