ರಾಮ ರಕ್ಷೆ : ಭಟ್ಟರ ಫೇಸ್‌ಶೀಲ್ಡ್‌ ಉದ್ಯಮದ ಸಾಹಸ


Team Udayavani, Oct 12, 2020, 7:27 PM IST

ರಾಮ ರಕ್ಷೆ ಭಟ್ಟರ ಫೇಸ್‌ಶೀಲ್ಡ್‌ ಉದ್ಯಮದ ಸಾಹಸ

 

ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟ ಎದುರಾದಾಗ ಆಟೊಮೊಬೈಲ್‌ ಉದ್ಯಮಿ ಶ್ರೀರಾಮ ಭಟ್ಟರು ಎದೆಗುಂದಲಿಲ್ಲ. ತಮ್ಮಲ್ಲಿದ್ದ ನೌಕರರನ್ನುಕೆಲಸದಿಂದ ತೆಗೆಯಲಿಲ್ಲ. ಬದಲಾಗಿ, ಆಟೊಮೊಬೈಲ್‌ ಉದ್ಯಮಕ್ಕೆ ಚಿಕ್ಕ ಬ್ರೇಕ್‌ಕೊಟ್ಟು, ಕೋವಿಡ್ ಸೋಂಕು ತಡೆಯಲು ಅಗತ್ಯವಿರುವ ಫೇಸ್‌ ಶೀಲ್ಡ್ ಗಳ ಉತ್ಪಾದನೆಗೆ ಮುಂದಾದರು…

ಭಾರತದಲ್ಲಿ ಕೋವಿಡ್ ವೈರಸ್‌ ಹರಡುವಿಕೆಯನ್ನು ತಡೆಯಲು ಮಾರ್ಚ್‌ ತಿಂಗಳಲ್ಲಿ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಲಾಕ್‌ಡೌನ್‌ ದೆಸೆಯಿಂದಾಗಿ ಹಲವಾರು ಕಂಪನಿಗಳು,ಕೈಗಾರಿಕೆಗಳು ಬಾಗಿಲು ಮುಚ್ಚಿದವು. ಪರಿಣಾಮ, ಹಲವು ಮಂದಿ “ವರ್ಕ್‌ ಫ್ರಂ ಹೋಂ’ ಎನ್ನುತ್ತಾಊರಿನ ಹಾದಿ ಹಿಡಿದರೆ, ಇನ್ನೂಕೆಲವರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾದರು. ಇಂಥ ಸಂಕಷ್ಟದಕಾಲದಲ್ಲಿಯೂ ತಮ್ಮ ಕೈಗಾರಿಕೆಗೆ ಹೊಸ ಸ್ವರೂಪ ನೀಡಿ, ಹಲವಾರುಕಾರ್ಮಿಕರಿಗೆ ಉದ್ಯೋಗವನ್ನೂ ನೀಡಿ ಮಾದರಿಯಾಗಿದ್ದಾರೆ, ಹೊನ್ನಾವರ ಮೂಲದ ಉದ್ಯಮಿ ಶ್ರೀರಾಮ್‌ ಭಟ್‌.

ಫೇಸ್‌ಶೀಲ್ಡ್ ಉದ್ಯಮ ಪ್ರಾರಂಭ : ಹತ್ತು ವರ್ಷಗಳ ದೇಶದ ವಿವಿಧಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದ ಶ್ರೀರಾಮ್‌ ಭಟ್‌, ವಿದೇಶದಲ್ಲಿಯೂ ಎರಡು ವರ್ಷ ಕಾರ್ಯನಿರ್ವಹಿಸಿದ್ದರು. ಬಳಿಕ2006ರಲ್ಲಿ ಬೆಂಗಳೂರಿನಲ್ಲಿ ಶ್ರೀಮಾತಾ ಪೆಸಿಶನ್‌ಕಂಪೋನೆಚಿಟ್‌ಎಂಬ ಆಟೊಮೊಬೈಲ್‌ ಬಿಡಿಭಾಗಗಳ ತಯಾರಿಕೆಯ ಸ್ವಂತ ಉದ್ಯಮ ಪ್ರಾರಂಭಿಸಿದರು. ” ಕೋವಿಡ್ ಪ್ರಾರಂಭವಾದ ಬಳಿಕ ಸೋಂಕು ಹರಡದಂತೆ ತಡೆಗಟ್ಟಲು ಫೇಸ್‌ ಶೀಲ್ಡ್ ನ ಅಗತ್ಯ ಇತ್ತು. ಆದರೆ ಫೇಸ್‌ ಶೀಲ್ಡ್ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಈ ಸಂದರ್ಭದಲ್ಲಿ ನಮ್ಮ ಆಟೊಮೊಬೈಲ್‌ ಬಿಡಿಭಾಗಗಳ ಉತ್ಪಾದನೆಯೂ ನಿಂತಿತ್ತು.

ಹೀಗಾಗಿ, ನಮ್ಮ ಕಾರ್ಮಿಕರು ಕೂಡಾ ಸಂಕಷ್ಟದಲ್ಲಿದ್ದರು.  ಬೇಡಿಕೆಗೆ ತಕ್ಕಷ್ಟು ಫೇಸ್‌ ಶೀಲ್ಡ್ ಗಳು ವಿದೇಶಗಳಿಂದ ಭಾರತಕ್ಕೆ ಪೂರೈಕೆಯಾಗಲಿಲ್ಲ. ಆ ಸಂದರ್ಭದಲ್ಲಿ ವೈದ್ಯಕೀಯ ಸೇರಿದಂತೆ ವಿವಿಧ ಇಲಾಖೆಗಳು ಫೇಸ್‌ಶೀಲ್ಡ್ ಗೆ ಬೇಡಿಕೆಯಿಟ್ಟವು. ಇದನ್ನೇ ಸವಾಲಾಗಿ ಸ್ವೀಕರಿಸಿ ಫೇಸ್‌ಶೀಲ್ಡ್  ಉದ್ಯಮವನ್ನು ಆರಂಭಿಸಿದೆವು” ಎನ್ನುತ್ತಾರೆ ಶ್ರೀರಾಮ್‌ ಭಟ್.

ಪ್ರಾರಂಭದಲ್ಲಿ ತಮ್ಮ ಬಳಿ ಇರುವ ಉಪಕರಣಗಳನ್ನು ಫೇಸ್‌ಶೀಲ್ಡ್  ತಯಾರಿಕೆಗೆ ಬೇಕಾಗುವಂತೆ ಮಾರ್ಪಾಡು ಮಾಡಿಕೊಂಡರು. ಅದರ ಬೆನ್ನಿಗೇ, ಫೇಸ್‌ ಶೀಲ್ಡ್  ತಯಾರಿಕೆಗೆ ಅಗತ್ಯವಿದ್ದ ಹಲವು ಉಪಕರಣಗಳನ್ನು ಖರೀದಿಸಿ ಉತ್ಪಾದನೆಗೆ ಮುಂದಾದರು. ಐಎಸ್‌ಓ ಮಾನ್ಯತೆ ಹೊಂದಿರುವ ಈ ಸಂಸ್ಥೆಯಲ್ಲಿ ಪ್ರತಿ ತಿಂಗಳು ಐದು ವಿಧದ, ಲಕ್ಷಕ್ಕೂ ಅಧಿಕ ಫೇಸ್‌ಶೀಲ್ಡ್ ಉತ್ಪಾದನೆಯಾಗುತ್ತಿದೆ. ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸರು, ಪತ್ರಕರ್ತರು ಹೀಗೆ ವಿವಿಧ ವಲಯಗಳಿಂದ ಫೇಸ್‌ಶೀಲ್ಡ್ ಗೆ ಉತ್ತಮ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಶ್ರೀರಾಮ್.

ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆಕೇವಲ 25 ರೂ. ಗೆ ಗ್ರಾಹಕರಿಗೆ ಫೇಸ್‌ ಶೀಲ್ಡ್ ಒದಗಿಸುವ ಮೂಲಕ, ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತಕರೆಗೆ ಭಟ್ಟರು ಸ್ಪಂದಿಸಿದ್ದಾರೆ.

ಹೊಸ ಪ್ರಾಡಕ್ಟ್ ಗಳು ಮಾರುಕಟ್ಟೆಗೆ :  ಇವರ ಕೈಗಾರಿಕಾ ಘಟಕದಲ್ಲಿ ಆಟೋಮೊಬೈಲ್‌ ಬಿಡಿಭಾಗಗಳು ಮತ್ತು ಫೇಸ್‌ಶೀಲ್ಡ್ ಗಳ ಜೊತೆಗೆ ಮತ್ತೂಕೆಲವು ಉತ್ಪನ್ನಗಳು ಸಿದ್ಧಗೊಳ್ಳುತ್ತಿವೆ. ಫೇಸ್‌ ಶೀಲ್ಡ್ ತಯಾರಿಕೆಯಿಂದಾಗಿ ಸಂಕಷ್ಟದಕಾಲದಲ್ಲಿ ನೌಕರರಿಗೆ ಉದ್ಯೋಗ ನೀಡಿದ್ದಲ್ಲದೇ, ಸ್ವ ಉದ್ಯಮದಕುರಿತು ಇನ್ನಷ್ಟು ಅನುಭವ ದೊರೆಯಿತು ಎಂಬುದು ಶ್ರೀರಾಮ್‌ ಅವರ ಅಂಬೋಣ. ಸ್ವದೇಶಿ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಕನಸಿದ್ದು, ಈಗಾಗಲೇ ಹೊಸ ಉತ್ಪನ್ನಗಳ ತಯಾರಿಕಾಕಾರ್ಯ ಪ್ರಾರಂಭ ಗೊಂಡಿದ್ದು, ಶೀಘ್ರವೇ ಮಾರುಕಟ್ಟೆ ಯನ್ನು ಪ್ರವೇಶಿಸಲಿವೆ. ಮುಂದಿನ ದಿನಗಳಲ್ಲಿ ಶ್ರೀಮಾತಾ ಪೆಸಿಶನ್‌ ಕಂಪೋನೆಚಿಟ್‌ನ ಸ್ವದೇಶಿ ಪ್ರಾಡಕ್ಟ್ ಗಳನ್ನು ಅಮೆಜಾನ್‌ ಸೇರಿದಂತೆ ವಿವಿಧ ಆನ್‌ಲೈನ್‌ ಮಾರುಕಟ್ಟೆ ಗೂ ಪರಿಚಯಿಸುವ ಆಕಾಂಕ್ಷೆ ಹೊಂದಿದ್ದಾರೆ ಭಟ್‌. ಶ್ರೀರಾಮ್‌ ಭಟ್‌ ಅವರ ಸಂಪರ್ಕ:98455 82997

ಫೇಸ್‌ಶೀಲ್ಡ್ ನ ಉಪಯೋಗಗಳು :

  • ಮರುಬಳಕೆ ಮಾಡಬಹುದಾಗಿದೆ
  • ಮಾಲಿನ್ಯ ತಡೆಗಟ್ಟಲು ಸಹಾಯಕ
  • ಹೆಚ್ಚು ಪಾರದರ್ಶಕ ಧೂಳಿನಿಂದ ಮುಕ್ತಿ
  • ಮಾಸ್ಕ್ ಗಳಿಗಿಂತ ಹೆಚ್ಚು ಸುರಕ್ಷಿತ.

 

ಎಂ.ಎಸ್‌. ಶೋಭಿತ್‌, ಮೂಡ್ಕಣಿ

ಟಾಪ್ ನ್ಯೂಸ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.