ಸಂಪತ್ ಕುಮಾರ್ ಹತ್ಯೆ ಪ್ರಕರಣ: ನಾಲ್ವರು ಪೊಲೀಸ್ ಕಸ್ಟಡಿಗೆ, ಓರ್ವನಿಗೆ ನ್ಯಾಯಾಂಗ ಬಂಧನ
Team Udayavani, Oct 12, 2020, 8:42 PM IST
ಸುಳ್ಯ: ಸುಳ್ಯ ಪಟ್ಟಣದ ಶಾಂತಿನಗರ ಬಳಿ ಅ. 8ರ ಮುಂಜಾನೆ ಮುಸುಕುಧಾರಿಗಳ ತಂಡ ಕಲ್ಲುಗುಂಡಿ ನಿವಾಸಿ ಸಂಪತ್ ಕುಮಾರ್ (35) ನನ್ನು ಗುಂಡಿನ ದಾಳಿ ನಡೆಸಿ ತಲವಾರಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಐವರು ಆರೋಪಿಗಳನ್ನು ಅ. 12ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಘಟನ ಸ್ಥಳದಲ್ಲಿ ಮಹಜರು ನಡೆಸಿದ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಬಂಧಿತ ಆರೋಪಿಗಳ ಪೈಕಿ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ಹಾಗೂ ಓರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳಾದ ಮನಮೋಹನ್ ಯಾನೆ ಮನು ಕಲ್ಲುಗುಂಡಿ, ಮನೋಜ್ ಯಾನೆ ಮಧು ದಂಡಕಜೆ, ಬಿಪಿನ್ ಕೂಲಿಶೆಡ್ಡ್, ಕಾರ್ತಿಕ್ ದಂಡಕಜೆಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನೋರ್ವ ಆರೋಪಿ ಶಿಶರ್‌ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದನ್ನೂ ಓದಿ:ಟೋಲ್ ಕೇಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯ : ಐದು ಮಂದಿ ವಶಕ್ಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.