![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 12, 2020, 10:07 PM IST
ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋವಿಡ್ ಕೊರೊನಾ ಸೋಂಕಿನ ಅವಧಿಯಲ್ಲಿ ದೇಶವಾಸಿಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡಲು ತಾವು ವಿಫಲವಾಗಿದ್ದಕ್ಕೆ ಕ್ಷಮಾಪಣೆ ಕೋರಿದ್ದಾರೆ. ಇದಷ್ಟೇ ಅಲ್ಲದೇ, ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ!
ಇತ್ತೀಚೆಗೆ ನಡೆದ ತಮ್ಮ ಪಕ್ಷದ 75 ಸಂಸ್ಥಾಪನಾ ದಿನೋತ್ಸವದ ಆಚರಣೆಯ ವೇಳೆ ಮಿಲಿಟರಿ ಪರೇಡ್ ಅನ್ನು ಉದ್ದೇಶಿಸಿ ಮಾತನಾಡಿದ ಕಿಮ್ ಜಾಂಗ್ ಉನ್, “”ಜನರು ನಮ್ಮ ಮೇಲೆ ಆಕಾಶದಷ್ಟು ಎತ್ತರ, ಸಾಗರದಷ್ಟು ಆಳವಾದ ನಂಬಿಕೆಯನ್ನು ಇಟ್ಟಿದ್ದರು. ಆದರೆ, ಅವರ ನಂಬಿಕೆಗೆ ತಕ್ಕಂತೆ ಕಾರ್ಯನಿರ್ವಹಿಸಲು ನಾನು ವಿಫಲನಾಗಿದ್ದೇನೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.
ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಕಿಮ್ ಜಾಂಗ್ ಉನ್ ಕೆಲ ತಿಂಗಳ ಹಿಂದೆ ತೀವ್ರವಾಗಿ ಆಸ್ವಸ್ಥಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೆಲವು ಸುದ್ದಿ ಮಾಧ್ಯಮಗಳಂತೂ ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆ ಎಂದೇ ವರದಿ ಮಾಡಿದ್ದವು. ಈ ಸುದ್ದಿ ಹರಡಿದ ಕೆಲವೇ ದಿನಗಳಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಅನುಮಾನಗಳಿಗೆ ತೆರೆ ಎಳೆದಿದ್ದರು. ಉತ್ತರ ಕೊರಿಯಾದಲ್ಲಿ ಕೋವಿಡ್ ಯಾವ ಪ್ರಮಾಣದಲ್ಲಿ ಹರಡಿದೆ ಎನ್ನುವ ವಿಚಾರವನ್ನು ಈಗಲೂ ಗೌಪ್ಯವಾಗಿಯೇ ಇಡಲಾಗಿದೆ. ಆದರೆ, ಈಗಿನ ಅವರ ಭಾಷಣ ಕೇಳಿದರೆ ಪರಿಸ್ಥಿತಿ ಗಂಭೀರವಾಗಿದೆ ಎಂದೆನಿಸುತ್ತದೆ.
ಇದನ್ನೂ ಓದಿ :ಕಂಪೆನಿಯ ರಾಯಭಾರಿ ಮಾಡುವುದಾಗಿ ಹೇಳಿ ನಟಿ ಪ್ರಣೀತಾ ಹೆಸರಿನಲ್ಲಿ 13.5 ಲಕ್ಷ ರೂ. ವಂಚನೆ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.