ರಾಮುಲು ರಾಜೀನಾಮೆ? ; ಖಾತೆ ಬದಲಾವಣೆಗೆ ಬೇಸರ ವರಿಷ್ಠರಿಗೆ ಪತ್ರ ಬರೆಯಲು ನಿರ್ಧಾರ
Team Udayavani, Oct 13, 2020, 6:10 AM IST
ಬೆಂಗಳೂರು: ರಾಜ್ಯ ಸರಕಾರದ “ಕೋವಿಡ್ ನಿಯಂತ್ರಣ ಹೊಣೆ’ ಬದಲಾವಣೆ ಸಂಪುಟ ಬೇಗುದಿಗೆ ಕಾರಣವಾಗಿದ್ದು, ಸಚಿವ ಬಿ. ಶ್ರೀರಾಮುಲು ರಾಜೀನಾಮೆಗೂ ಮುಂದಾಗಿದ್ದಾರೆ. ತನ್ನಲ್ಲಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಖಾತೆಗಳನ್ನು ವಾಪಸ್ ಪಡೆದು, ಸಮಾಜ ಕಲ್ಯಾಣ ಖಾತೆ ನೀಡಿರುವುದಕ್ಕೆ ಶ್ರೀರಾಮುಲು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆ ಪಕ್ಷದ ದಿಲ್ಲಿ ವರಿಷ್ಠರು ರಾಮುಲುಗೆ ಸೂಚನೆ ನೀಡಿದ್ದಾರೆ.
ತಪ್ಪು ಸಂದೇಶ ರವಾನೆ
ಖಾತೆ ಬದಲಾವಣೆಯಿಂದ ತನ್ನ ಕಾರ್ಯದ ಮೇಲೆ ಅಪನಂಬಿಕೆ ಮೂಡಿದಂತಾಗಿದೆ ಎಂಬುದು ಶ್ರೀರಾಮುಲು ಅವರ ಬೇಸರಕ್ಕೆ ಕಾರಣ.
ಸಿಎಂಗಾಗಿ ಕಾದ ಶ್ರೀರಾಮುಲು
ಖಾತೆ ಬದಲಾವಣೆಯ ಆದೇಶ ಹೊರಬೀಳು ತ್ತಿದ್ದಂತೆ ಸಚಿವ ಶ್ರೀರಾಮುಲು ಖಾಸಗಿ ಕಾರಿನಲ್ಲಿ ಸಿಎಂ ನಿವಾಸಕ್ಕೆ ತೆರಳಿ, ಅವರಿಗಾಗಿ ಒಂದು ತಾಸು ಕಾದಿದ್ದಾರೆ. ಕೊನೆಗೆ ಐದು ನಿಮಿಷವಷ್ಟೇ ಭೇಟಿ ಸಾಧ್ಯವಾಗಿದೆ. ಇದರಿಂದ ಸಮಾಧಾನಗೊಳ್ಳದ ಶ್ರೀರಾಮುಲು ಬೇಸರದಿಂದಲೇ ತೆರಳಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿ ದ್ದಾರೆ ಎಂದು ತಿಳಿದು ಬಂದಿದೆ.
ಪತ್ರ ಬರೆಯಲು ನಿರ್ಧಾರ
ಈ ಬಗ್ಗೆ ವರಿಷ್ಠರಿಗೆ ಸುದೀರ್ಘ ಪತ್ರ ಬರೆಯಲು ಸಚಿವ ಶ್ರೀರಾಮುಲು ನಿರ್ಧರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಆರೋಗ್ಯ ಇಲಾಖೆಯಲ್ಲಿ ತಾನು ಮಾಡಿರುವ ಕೆಲಸಗಳು, ಕೊರೊನಾ ಬಂದ ಮೇಲೆ ರಾಜ್ಯಾದ್ಯಂತ ಮಾಡಿರುವ ಪ್ರವಾಸ ಕುರಿತು ವಿವರವಾದ ಪತ್ರ ಬರೆಯಲು ನಿರ್ಧರಿಸಿದ್ದು, ತನ್ನನ್ನು ಸಂಪುಟದಿಂದ ಬಿಡುಗಡೆಗೊಳಿಸಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಲು ಅವರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಕ್ಷೇಪವಿಲ್ಲ ಎಂದ ಕಾರಜೋಳ
ಡಿಸಿಎಂ ಗೋವಿಂದ ಕಾರಜೋಳ ತನ್ನ ಬಳಿ ಇದ್ದ ಮಹತ್ವದ ಸಮಾಜ ಕಲ್ಯಾಣ ಖಾತೆಯನ್ನು ವಾಪಸ್ ಪಡೆದುಕೊಂಡಿರುವ ಕುರಿತು ಸಿಎಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ನನ್ನ ಬಳಿ ಹೆಚ್ಚುವರಿಯಾಗಿತ್ತು. ಸಿಎಂ ತೀರ್ಮಾನಕ್ಕೆ ನನ್ನ ಆಕ್ಷೇಪವಿಲ್ಲ. ಬೇರೆ ಖಾತೆ ಬಗ್ಗೆ ಸಿಎಂ ಚರ್ಚೆ ಮಾಡಿಲ್ಲ. ನಾನು ಯಾವುದೇ ಖಾತೆಗೆ ಬೇಡಿಕೆ ಮಂಡಿಸಿಲ್ಲ ಎಂದರು.
ಸಿಎಂ ಯಡಿಯೂರಪ್ಪ ಅವರು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿರುವುದು ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿರುವುದಕ್ಕೆ ಸಾಕ್ಷಿ. ರಾಜ್ಯ ಸರಕಾರದ ವಿರುದ್ಧ ನಾವು ಮಾಡಿರುವ ಆರೋಪಕ್ಕೆ ಇದು ಪೂರಕವಾಗಿದೆ. ಸಾಕಷ್ಟು ಜನರು ಜೀವ ಕಳೆದುಕೊಂಡ ಅನಂತರ ಸರಕಾರವು ತನ್ನ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ.
– ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.