54 ವರ್ಷ ಹಿಂದೆ ಕಳಿಸಿದ್ದ ರಾಕೆಟ್ ಮತ್ತೆ ಭೂಮಿಯತ್ತ!
1966ರಲ್ಲಿ ಚಂದ್ರನತ್ತ ; ಸಾಗುವಾಗ ನಾಪತ್ತೆಯಾಗಿದ್ದ ನಾಸಾದ ರಾಕೆಟ್
Team Udayavani, Oct 13, 2020, 6:00 AM IST
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಭೂಮಿಗೆ ಇನ್ನು ಕೆಲವೇ ದಿನಗಳಲ್ಲಿ ಬಂದು ಅಪ್ಪಳಿಸುತ್ತದೆ ಎಂಬ ಭೀತಿ ಸೃಷ್ಟಿಸಿದ್ದ, ಅಂತರಿಕ್ಷದಲ್ಲಿ ಅತಿ ವೇಗವಾಗಿ ಸಾಗಿಬರುತ್ತಿದ್ದ ನಿಗೂಢ ಆಕಾಶಕಾಯದ ನಿಜ ಸ್ವರೂಪ ಪತ್ತೆಯಾಗಿದೆ. ಅದು, 54 ವರ್ಷಗಳ ಹಿಂದೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಚಂದ್ರನಲ್ಲಿಗೆ ಕಳುಹಿಸಿದ್ದ ರಾಕೆಟ್‌ನ ಮೇಲ್ಭಾಗವಾಗಿದ್ದು, ಆಗ ನಾಪತ್ತೆಯಾಗಿದ್ದ ಅದು ಈಗ ಪುನಃ ಭೂಮಿಯತ್ತ ಬರುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಎಚ್ಚರಿಸಿದ್ದ ವಿಜ್ಞಾನಿಗಳು: ಕೆಲವು ದಿನಗಳ ಹಿಂದೆ, ದೈತ್ಯ ವಸ್ತುವೊಂದು ವೇಗವಾಗಿ ಭೂಮಿಯ ಕಡೆಗೆ ನುಗ್ಗಿ ಬರುತ್ತಿದೆ ಎಂಬ ಮಾಹಿತಿಯೊಂದನ್ನು ಹವಾಯ್ ತಾರಾಲಯದ ವಿಜ್ಞಾನಿಗಳು ಹಂಚಿಕೊಂಡಿದ್ದರು. ಇದರಿಂದಾಗಿ, ಜಗತ್ತಿನ ನಾನಾ ಭಾಗಗಳಲ್ಲಿರುವ ಅಬ್ಸರ್ವೇಟರಿಗಳಲ್ಲಿರುವ ದೂರದರ್ಶಕಗಳೆಲ್ಲವೂ ಹವಾಯ್ ವಿಜ್ಞಾನಿಗಳು ಸೂಚಿಸಿದ್ದ ದಿಕ್ಕಿನ ಕಡೆಗೆ ತಿರುಗಿಕೊಂಡಿದ್ದವು. ಆಗಿನಿಂದಲೂ ಅದನ್ನು ಪತ್ತೆ ಹಚ್ಚುವ ಕಾರ್ಯ ಸಾಗಿತ್ತು.
ಮುಂದೇನು?: 26 ಅಡಿ ಇರುವ ಆ ರಾಕೆಟ್‌ನ ಭಾಗ, ಭೂಮಿಯ ಗುರುತ್ವಾಕರ್ಷಣೆ ಬಲಕ್ಕೊಳಪಟ್ಟು ಗಂಟೆಗೆ 2,400 ಕಿ.ಮೀ. ವೇಗದಲ್ಲಿ ಭೂಮಿಯ ಕಡೆ ನುಗ್ಗುತ್ತಿದೆ. ತೀರಾ ಹತ್ತಿರಕ್ಕೆ ಬಂದಾಗ ಅದನ್ನು ನಿಗ್ರಹಿಸುವ ಪರಿ ನಿರ್ಧರಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.