ಪರೀಕ್ಷೆ ಅರ್ಧಕ್ಕೆ ಸ್ಥಗಿತ : ವಿದ್ಯಾರ್ಥಿಗಳು ಆತಂಕ

ಮೂರ್‍ನಾಲ್ಕು ಬಾರಿ ಮುಂದೂಡಿದ್ದ ಪಿಪಿಎ ಪರೀಕ್ಷೆ , ಬೆಂಗಳೂರು ವಿಶ್ವ ವಿದ್ಯಾಲಯದ ವಿರುದ್ಧ ಆಕ್ರೋಶ

Team Udayavani, Oct 13, 2020, 12:40 PM IST

ಪರೀಕ್ಷೆ ಅರ್ಧಕ್ಕೆ ಸ್ಥಗಿತ : ವಿದ್ಯಾರ್ಥಿಗಳು ಆತಂಕ

ನೆಲಮಂಗಲ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಿಂದ ಹೊರ ಬಂದ ವಿದ್ಯಾರ್ಥಿಗಳು.

ನೆಲಮಂಗಲ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ವಾಪಸ್‌ ಪಡೆದು ಪರೀಕ್ಷೆ ಮುಂದೂಡಲಾಗಿದೆ ಎಂದು ಶಾಕ್‌ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪಿಪಿಎ (ಪ್ರಿನ್ಸಿಪಾಲ್‌ ಮತ್ತು ಪ್ರಾಕ್ಟೀಸ್‌ ಆಫ್ ಆಡಿಟಿಂಗ್‌) ಪರೀಕ್ಷೆಯು ಆನ್‌ಲಾಕ್‌ ಆರಂಭವಾದ ನಂತರ ಮೂರ್‍ನಾಲ್ಕು ಬಾರಿ ಮುಂದೂಡಿ ಅಂತಿಮ ಪರೀಕ್ಷೆಯಾಗಿ ಅ.12 ಸೋಮವಾರ 2 ಗಂಟೆಗೆ ನಿಗದಿಯಾಗಿತ್ತು. ಅದರಂತೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ ಪರೀಕ್ಷೆ ಬರೆಯು ವಾಗ ಅರ್ಧದಲ್ಲಿ ಸ್ಥಗಿತಗೊಳಿಸಿದ್ದಾರೆ.

ಚೆಲ್ಲಾಟ: ಒಂದು ಪರೀಕ್ಷೆ ನಡೆಸಲು ಮೂರ್‍ನಾಲ್ಕು ಭಾರಿ ಮೂಂದೂಡಿ ಕೊನೆಯಲ್ಲಿ ಮೂಕ್ಕಾಲು ಭಾಗ ಪರೀಕ್ಷೆ ಬರೆದ ನಂತರ ಪರೀಕ್ಷೆ ಸ್ಥಗಿತಗೊಳಿಸಿ ಮುಂದೂಡಲಾಗಿದೆ ಎಂದು ಉತ್ತರ ಹಾಗೂ ಪ್ರಶ್ನೆ ಪತ್ರಿಕೆ ವಾಪಸ್‌ ಪಡೆದುಕೊಂಡಿದ್ದಾರೆ. ನಮ್ಮ ಪರಿಶ್ರಮ ಸಂಪೂರ್ಣ ವ್ಯರ್ಥವಾಗಿದ್ದು, ವಿದ್ಯಾರ್ಥಿಗಳ ಜತೆ ವಿವಿಚೆಲ್ಲಾಟವಾಡುತಿದೆ. ರಾಜ್ಯದ ಎಲ್ಲಾ ವಿವಿಗಳಲ್ಲಿ ಅಂತಿಮ ವರ್ಷದ ಪದವಿ ಪರೀಕ್ಷೆಗಳು ಮುಗಿದಿದ್ದು ಬೆಂಗಳೂರು ವಿವಿಯಲ್ಲಿ ಮಾತ್ರ ಬಾಕಿ ಇದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ತಡವಾಗಿ ಬಂದ ಪರಿ ವೀಕ್ಷಕ: ನೆಲಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ 178ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ 1 ಗಂಟೆಗಳ ಕಾಲ ಪರೀಕ್ಷೆ ಬರೆದ ನಂತರ3.15ರ ಸುಮಾರಿಗೆ ಬಂದ ಪರಿವೀಕ್ಷಕ ನರಸಿಂಹಮೂರ್ತಿ ಸೂಚನೆಯ ಮೇರೆಗೆ ಪಿಪಿಎ ಪರೀಕ್ಷೆ ಸ್ಥಗಿತ ಗೊಳಿಸಲಾಯಿತು ಎಂದು ಕಾಲೇಜಿನ ಅಧ್ಯಾಪಕರು ತಿಳಿಸಿದ್ದು, ಪರಿವೀಕ್ಷಕರು ತಡವಾಗಿ ಮಾಹಿತಿ ನೀಡಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಕಣ್ಣೀರಿಟ್ಟ ವಿದ್ಯಾರ್ಥಿಗಳು: ಕೋವಿಡ್ ಆತಂಕದಲ್ಲಿಯೂ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗೆ ತಯಾರಿ ಮಾಡಿಕೊಂಡು ಬಂದು ಪರೀಕ್ಷೆ ಬರೆಯುವಾಗ ಅರ್ಧಕ್ಕೆ ಉತ್ತರ ಪತ್ರಿಕೆ ಪಡೆದು ಪರೀಕ್ಷೆ ಮುಂದೂಡಲಾಗಿದೆ ಎಂದರೆ ನಮ್ಮ ಭವಿಷ್ಯದ ಗತಿ ಏನು. ಬೆಂಗಳೂರು ವಿವಿ ನಮ್ಮ ಭವಿಷ್ಯದ ಜತೆ ಚೆಲ್ಲಾಟವಾಡುತಿದೆ ಎಂದು ವಿದ್ಯಾರ್ಥಿಗಳು ಕಣ್ಣೀರಿಟ್ಟರು. ದಿನಾಂಕ ಪ್ರಕಟಿಸದ ವಿವಿ: ಪಿಪಿಎ ಪರೀಕ್ಷೆ ಅರ್ಧಕ್ಕೆ ಸ್ಥಗಿತಗೊಳಿಸಿದ ಬೆಂ.ವಿವಿ ಮುಂದಿನ ಪರೀಕ್ಷೆ ದಿನಾಂಕ ಪ್ರಕಟಗೊಳಿಸದ ಕಾರಣ ವಿದ್ಯಾರ್ಥಿಗಳಲ್ಲಿ ಆತಂಕದ ಜತೆ ಗೊಂದಲ ಹೆಚ್ಚಾಗಿದ್ದು ವಿವಿ ನಡೆಗೆ ವಿದ್ಯಾರ್ಥಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ಮುಂದೂಡಿರುವ ಬಗ್ಗೆ 2 ಗಂಟೆಗೆ ಮೊಬೈಲ್‌ಗೆ ಸಂದೇಶ ಕಳುಹಿಸಲಾಗಿದೆ. ಆದರೆ ಮೊಬೈಲ್‌ ಪರೀಕ್ಷಾ ಕೇಂದ್ರದ ಬಳಿ ತರುವುದಿಲ್ಲ. ನನಗೆ 3.15ರ ಸುಮಾರಿಗೆ ಮುಂದೂಡಿರುವ ಬಗ್ಗೆ ಮಾಹಿತಿ ತಿಳಿಯಿತು. ತಕ್ಷಣ ಪರೀಕ್ಷೆ ಸ್ಥಗಿತಗೊಳಿಸಲಾಯಿತು. ನರಸಿಂಹಮೂರ್ತಿ, ಪರೀಕ್ಷಾ ಕೇಂದ್ರದ ಪರಿ ವೀಕ್ಷಕ

ಪರೀಕ್ಷೆ ಮುಗಿಯಿತು ಫ‌ಲಿತಾಂಶ ಶೀಘ್ರದಲ್ಲಿ ಬರಲಿದೆ ಮುಂದಿನ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು ಎನ್ನುವಷ್ಟರಲ್ಲೇ ಪ್ರಶ್ನೆ ಹಾಗೂ ಉತ್ತರ ಪತ್ರಿಕೆ ಪಡೆದು ಪರೀಕ್ಷೆ ಸ್ಥಗಿತ ಎಂದು ಹೇಳಿ ನಮ್ಮ ಭವಿಷ್ಯದ ಜತೆ ಚೆಲ್ಲಾಟಆಡುತ್ತಿರುವ ವಿವಿ ನಡೆ ಸರಿಯಲ್ಲ. ಪರೀಕ್ಷೆಯಲ್ಲಿ ಎಲ್ಲರನ್ನು ಉತೀರ್ಣ ಮಾಡಿ ಫ‌ಲಿತಾಂಶ ನೀಡಲಿ. ರಾಜೇಶ್‌, ಪರೀಕ್ಷೆ ಬರೆದ ವಿದ್ಯಾರ್ಥಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

13

Bangalore: ಶಾಸಕ ಶಾಮನೂರು ಹೆಸರಿನಲ್ಲಿ ವಂಚನೆ: ಇಬ್ಬರ ಸೆರೆ

Untitled-5

Bangalore: ಇಬ್ಬರು ಮಕ್ಕಳನ್ನು ಕೊಂದ ಮಲತಂದೆಯ ಬಂಧನ

16-bng

Magadi: ಮದುವೆ ನಿಶ್ಚಯವಾಗಿದ್ದ ಯುವ ವಕೀಲೆ ಆತ್ಮಹತ್ಯೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.