ಕಾಳಗಿ ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಕಸರತ್ತು

ಚುನಾವಣೆಗೂ ಮೊದಲೇ ಮೀಸಲಾತಿ ಪ್ರಕಟ

Team Udayavani, Oct 13, 2020, 4:34 PM IST

gb-tdy-2

ಕಾಳಗಿ: ನೂತನ ತಾಲೂಕು ಕೇಂದ್ರವಾಗಿರುವ ಕಾಳಗಿ ಪಟ್ಟಣವು ಗ್ರಾಪಂನಿಂದ ಮೇಲ್ದರ್ಜೆಗೇರಿ ನೂತನ ಪಪಂ ಕಚೇರಿ ಪ್ರಾರಂಭವಾಗಿದೆ. ಪಟ್ಟಣ ಪಂಚಾಯತ ಸದಸ್ಯರ ಚುನಾವಣೆಗೂ ಮೊದಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆಯ ಕಾವು ಜೋರಾಗುತ್ತಿದ್ದು ಬಿಜೆಪಿ,  ಕಾಂಗ್ರೆಸ್‌ ಮುಖಂಡರ ಕಣ್ಣು ನೇರವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೇಲೆ ನಾಟುವಂತಾಗಿದೆ.

ನೂತನ ಕಾಳಗಿ ಪಪಂ ಅಧ್ಯಕ್ಷ ಸ್ಥಾನಕ್ಕೆ ಸಾಮನ್ಯ ಮಹಿಳಾ ಮೀಸಲು, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮೀಸಲಾತಿ ಪ್ರಕಟವಾಗಿದೆ. ಕಾಳಗಿ ಗ್ರಾಪಂಯೂ ಜು.29, 2019 ರಂದು ಪಪಂ ಆಗಿ ಮೇಲ್ದರ್ಜೆಗೇರಿತು. ಜೂ. 5, 2015ರಲ್ಲಿ ಗ್ರಾಪಂಗೆ ಚುನಾಯಿತರಾಗಿದ್ದ 26 ಸದಸ್ಯರು, ಸಾಮಾನ್ಯ ಮಹಿಳಾ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷರ ಅಧಿಕಾರಾವಧಿ  ಜ.28, 2020ಕ್ಕೆ ಮುಕ್ತಾಯವಾಗಿದೆ. ನೂತನ ಪಪಂನ ಸದಸ್ಯರ ಚುನಾವಣೆಗೂ ಮೊದಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿರುವುದು ಜನಪ್ರತಿನಿಧಿ ಗಳಿಗೆ ಈಗಿನಿಂದಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ತೆರೆ ಮರೆಯಲ್ಲಿ ಲೆಕ್ಕಾಚಾರ ಜೋರಾಗಿಯೇ ನಡೆದಿದ್ದು, ಚುನಾವಣೆ ಕಾವು ಏರತೊಡಗಿದೆ.

ಈ ಮೊದಲು ಕಾಳಗಿ ಗ್ರಾಪಂ ವ್ಯಾಪ್ತಿಯು ಕಾಳಗಿ ಪಟ್ಟಣ ಸೇರಿ ದೇವಿಕಲ್‌ ತಾಂಡಾ, ಕರಿಕಲ್‌ ತಾಂಡಾ, ಕಿಂಡಿ ತಾಂಡಾ, ನಾಮುನಾಯಕ ತಾಂಡಾ, ಸುಬ್ಬುನಾಯಕ ತಾಂಡಾ, ಲಕ್ಷ ¾ಣ ನಾಯಕ ತಾಂಡಾ ಹಾಗೂ ಡೋಣ್ಣೂರ ಗ್ರಾಮವು ಸೇರಿದಂತೆ 8 ವಾರ್ಡ್‌ ಹಾಗೂ 26 ಜನ ಸದಸ್ಯರು ಹೊಂದಿದ್ದರು. ನೂತನ ಪಪಂ ವ್ಯಾಪ್ತಿಯೂ ಕಾಳಗಿ ಪಟ್ಟಣ ಸೇರಿದಂತೆ ಆರು ತಾಂಡಾಗಳು ಒಳಗೊಂಡಿದ್ದು ಹನ್ನೊಂದು ವಾರ್ಡ್‌ಗಳಾಗಿವೆ ಇನ್ನೂ ಅಂತಿಮ ಪ್ರಕಟಣೆಯಾಗಿಲ್ಲ. ಈ ಹನ್ನೊಂದು ವಾರ್ಡ್‌ಗಳಿಗೆ ಇನ್ನೂ ಯಾವುದೇ ಮೀಸಲಾತಿ ಹಾಗೂ ಚುನಾವಣೆ ದಿನಾಂಕ ಪ್ರಕಟಣೆಗೊಂಡಿಲ್ಲ. ಪಪಂ ಸದಸ್ಯರ ಚುನಾವಣೆಗೂ ಮೊದಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿರುವುದು. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮನ್ಯ ಮಹಿಳಾ ಮೀಸಲು ಹಾಗೂ ಹಿಂದುಳಿದ ವರ್ಗದವರಲ್ಲಿ ಚುನಾವಣೆಯ ಕಾವು ಜೋರಾಗಿಯೇ ಕಂಡು ಬರುತ್ತಿದೆ.

ಪಪಂನ ಹನ್ನೊಂದು ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಇನ್ನೂ ಸರ್ಕಾರದಿಂದ ಅಂತಿಮ ಪ್ರಕಟಣೆಗೊಂಡಿಲ್ಲ. ಸರ್ಕಾರದಿಂದ ವಾರ್ಡ್‌ಗಳ ಅಂತಿಮ ಆದೇಶ ಬಂದ ಮೇಲೆ ವಾರ್ಡ್‌ವಾರು ಮೀಸಲಾತಿ ಮತ್ತು ಚುನಾವಣೆ ದಿನಾಂಕ ಪ್ರಕಟಣೆಗೊಳ್ಳಲಿದೆ. ವೆಂಕಟೇಶ ತೆಲಾಂಗ್‌, ಮುಖ್ಯಾಧಿಕಾರಿ, ಪಪಂ.

 

-ಭೀಮರಾಯ ಕುಡ್ಡಳ್ಳಿ

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.