ಹೇಳಿ ಹೋಗು ಚಾರಣ

ಊರಿನ ಗಿಣಿಚೆಲುವ ನೋಡುತಾ...

Team Udayavani, Oct 13, 2020, 7:20 PM IST

josh-tdy-1

“ಸಂಡೂರಿನ ಬೆಟ್ಟಗಳ ಪೈಕಿ ಅತಿ ಎತ್ತರದ ಮತ್ತುಕೂಲ್‌ ತಾಣ ರಾಮಘಡ. ಈಗ ಅಲ್ಲಿ ಫ್ಲವರ್‌ ಸೀಜನ್‌. ಅಲ್ಲಿಗೆ ಟ್ರಕ್ಕಿಂಗ್‌…’ ಹಿರಿಯರಾದ ಚಾರಣ ಶ್ರೀನಿವಾಸ್‌ ಹೇಳಿದ್ದಕ್ಕೆ ರಾಮಘಡದ ಬುಡದವರೆಗೆಕಾರಲ್ಲಿ ಹೊರಟೆವು. ಅಬ್ಬೊà, ಅದು ನಾವು- ನೀವು ಕಂಡುಂಡ ರಸ್ತೆಯಲ್ಲ. ಅದಿರು ಸಾಗಾಣಿಕೆ ರಸ್ತೆ!. ಸೊಳ್ಳಂಬಳ್ಳ, ಏರು- ಇಳಿವು, ಮೊಣಕಾಲು ಮಟ ಗುಂಡಿಗಳು,ಕೆಸರು ಗದ್ದೆಯ ದಾರಿ!

ಬಯಲು ಸೀಮೆ ಬಳ್ಳಾರಿ ಜಿಲ್ಲೆಯ ಮಲೆನಾಡು ಸಂಡೂರು. ಗಣಿ ಧೂಳಿನಲ್ಲಿ ಮಿಂದಿದ್ದಕಾಡು ಈಗ ಮಳೆಯ ಮಜ್ಜನದಿಂದ ಭಾಗಶಃ ಸ್ವತ್ಛ-ಸುಂದರ ಆಗಿದೆ. ಬೆಟ್ಟಗಳನ್ನು ಸೀಳಿ ಹೋಗುವ ಥಾರ್‌ ರಸ್ತೆಗಳಲ್ಲಿ ಓಡಾಡಿದರೆ ಆ ಹಚ್ಚ ಹಸಿರು, ಹಕ್ಕಿಗಳ ಇಂಚರ, ತಂಗಾಳಿ, ಹರಿಯುವ ನೀರ ನಿನಾದ… ಮುದ ತರುತ್ತೆ. ಈ ಪ್ರಕೃತಿ ರಮ್ಯತೆಯಕಾಡಿನಲ್ಲಿ ವಿಹರಿಸಬೇಕೆಂಬುದು ಬಹುದಿನಗಳ ಅಲ್ಲ, ಬಹು ವರ್ಷಗಳ ಕನಸಾಗಿತ್ತು. ಅದುಕೈಗೂಡಿದ್ದು ಸಂಡೂರು ಸಮ್ಮಿಟರ್ಸ್‌ ತಂಡದಿಂದ. ಆ ತಂಡದ ಟಿ.ಎಂ. ವಿನಯ್‌ಕರೆ ಮಾಡಿ “ಟ್ರಕ್ಕಿಂಗ್‌ ಬರ್ತೀರಾ..?’ ಎಂದಿದ್ದಷ್ಟೆ. ನಿಗದಿತ ದಿನ, ಸಮಯಕ್ಕೆ ಸರಿಯಾಗಿ ಸಂಡೂರಿನ ವಿಜಯ್‌ ಸರ್ಕಲ್‌ನಲ್ಲಿದ್ದೆ.

ಕೆಸರು ಗದ್ದೆಯ ದಾರಿ! :

“ಸಂಡೂರಿನ ಬೆಟ್ಟಗಳ ಪೈಕಿ ಅತಿ ಎತ್ತರದ ಮತ್ತುಕೂಲ್‌ ತಾಣ ರಾಮಘಡ. ಈಗ ಅಲ್ಲಿ ಫ್ಲವರ್‌ ಸೀಜನ್‌. ಅಲ್ಲಿಗೆ ಟ್ರಕ್ಕಿಂಗ್‌…’ ಹಿರಿಯರಾದ ಚಾರಣ ಶ್ರೀನಿವಾಸ್‌ ಹೇಳಿದ್ದಕ್ಕೆ ರಾಮಘಡದ ಬುಡದವರೆಗೆಕಾರಲ್ಲಿ ಹೊರಟೆವು. ಅಬ್ಬೋ ಅದು ನಾವು- ನೀವು ಕಂಡುಂಡ ರಸ್ತೆಯಲ್ಲ. ಅದಿರು ಸಾಗಾಣಿಕೆ ರಸ್ತೆ!. ಸೊಳ್ಳಂಬಳ್ಳ, ಏರು- ಇಳಿವು, ಮೊಣಕಾಲು ಮಟ ಗುಂಡಿ ಗಳು,ಕೆಸರು ಗದ್ದೆಯ ದಾರಿ! ಪುಣ್ಯಕ್ಕೆ ಹದವಾದ ಮಳೆ ಬಿದ್ದಿದ್ದಕ್ಕೆ ಧೂಳು ಮೇಲೇಳಲಿಲ್ಲ. ಆದರೆ ತೆಗ್ಗುದಿನ್ನಿಗಳ ಮೆಟ್ಟಿಕಾರು ಚಲಿಸುತ್ತಿದ್ದರಿಂದ ನಮ್ಮನ್ನುಕುಳಿತಲ್ಲೇ ಡ್ಯಾನ್ಸ್ ಮಾಡಿಸಿತು! ಒಬ್ಬೊರಿಗೊಬ್ಬರು ಡಿಕ್ಕಿ ಹೊಡೆದುಕೊಳ್ಳುತ್ತಿದ್ದುದನ್ನು, ಆಗಾಗ್ಗೆ ಆಯತಪ್ಪಿಕಾರಿನಲ್ಲಿ ಬೀಳುತ್ತಿದ್ದುದನ್ನು ನೋಡಿ ರಸ್ತೆಕಿಸಕ್ಕನೆ ನಕ್ಕಂತೆ ಭಾಸ ಆಗುತ್ತಿತ್ತು! ಆ ಕಡೆ ಈ ಕಡೆ ಓಲಾಡಿ ಓಲಾಡಿ ಹೊಟ್ಟೆ ತೊಳೆಸಿದಂತೆ ಆಯಿತು. ಇಂತಹಕೆಟ್ಟ ರಸ್ತೆಯಲ್ಲಿ ವಾಹನದಲ್ಲಿ ಹೋಗುವ ದುಸ್ಸಾಹಸ ಬೇಡವೆಂದು ನಿರ್ಧರಿಸಿ, ಕಾರನ್ನು ಸೈಡ್‌ನ‌ಲ್ಲಿ ನಿಲ್ಲಿಸಿ ಟ್ರೆಕ್ಕಿಂಗ್‌ ಹೊರಟೆವು.

ಆ ಹಸಿರು ಸಿರಿಯಲಿ… :  ಇಲ್ಲಿ ಟ್ರೆಕ್ಕಿಂಗ್‌ಗೆ ಇದೇ ಎಂದು ನಿರ್ಧರಿಸಲಾದ ಫಿಕ್ಸ್ ರೂಟ್‌ ಇಲ್ಲ. ಟ್ರೆಕಿಂಗ್‌ನ ಅನುಭವವಿದ್ದ ಚಾರಣ ಶ್ರೀನಿವಾಸ್‌ ಅವರೇ ನಮಗೆ ದಿಕ್ಸೂಚಿ. ಚಾರಣದ ಉದ್ದಕ್ಕೂ ಹಸಿರಿನ ಸಿರಿ ದರ್ಶನ. ಗ್ರೀನ್‌ಕಾರ್ಪೆಟ್‌ ಹಾಸಿ, ಸುಗಂಧ ಬೀರುವ,ಕಲರ್‌ಕಲರ್‌ ಹೂಗಳ ಚೆಲ್ಲಿ, ನಮ್ಮನ್ನು ಸ್ವಾಗತಿಸಿದಂತೆ ಇತ್ತು ಪರಿಸರ! ಪ್ರತಿ ಹೂವಿನ ಜಾತಿ, ವಿನ್ಯಾಸ, ವಿಶೇಷತೆ… ಬಗ್ಗೆ ಜೀವ ರಸಾಯನ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಸಂತೋಷ್‌ಕುಮಾರ್‌ ವಿವರಿಸಿ ಹೇಳಿದರು. ಹಾದಿಯುದ್ದಕ್ಕೂ ಯಥೇಚ್ಚ ಆರ್ಕಿಡ್‌ಗಳಕಂಡಿದ್ದು ವಿಸ್ಮಯ ಹುಟ್ಟಿಸಿತು.

ಇನ್ನು ಪಕ್ಷಿಗಳಕಲರವ, ಜೇನ್ನೊಣಗಳ ಝೇಂಕಾರ, ಸಹಸ್ರಾರು ಡ್ರ್ಯಾಗನ್‌ ಫ್ಲೈಗಳ ಹಾರಾಟ, ಹದವಾದ ಬಿಸಿಲು, ತಂಗಾಳಿ… ಅದನ್ನೆಲ್ಲ ಕಂಡಾಗ, ಸ್ವರ್ಗ ಇಲ್ಲೇ ಇದೆ ಅನಿಸಿತು. ಇದೇ ನನ್ನಮೊದಲ ಟ್ರೆಕ್ಕಿಂಗ್‌ ಆಗಿದ್ದರಿಂದ ಚಾರಣಕ್ಕೆ ಸೂಕ್ತ ಡ್ರೆಸ್‌ ಹಾಕಿರಲಿಲ್ಲ. ಹಾಗಾಗಿ ಮುಳ್ಳಿನ ಗಿಡಗಂಟೆಗಳಿಂದ ಕೈಕಾಲು ತರಚಿತು. ಡಾಕ್ಟರ್‌ ವರದರಾಜು ಜಿಗಣೆ ತೋರಿಸಿದ್ದಕ್ಕೆ ಶ್ರೀನಿವಾಸ್ರು “ಕಳೆದೆರೆಡು ದಶಕದಿಂದ ಟ್ರೆಕ್ಕಿಂಗ್‌ ಬರುತ್ತಿರುವೆ. ಇದೇ ಮೊದಲು ನೋಡಿದ್ದು…’ ಎನ್ನುತ್ತಾ ಇವು ನಮ್ಮ ರಕ್ತ ಹೀರಿ ಬದುಕುತ್ತವೆ ಎಂದರು. ನಾನು ಭಯಭೀತನಾದೆ. ಆಮೇಲೆ ಟ್ರೆಕ್ಕಿಂಗ್‌ ಉದ್ದಕ್ಕೂಕಾಡು ನೋಡಿದ್ದಕ್ಕಿಂತಕೈಕಾಲುಗಳನ್ನು ನೋಡಿಕೊಂಡಿದ್ದೇ ಹೆಚ್ಚು! ಮುಂದೆಕಾಡಿನಲ್ಲಿ ಅವರವರಿಗೆ ರುಚಿಸಿದ್ದನ್ನು ನೋಡುತ್ತಾ ಚದುರಿದರು. ನಾನೂ ಕಾಡು ಹೂವೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಮೈಮರೆತಿದ್ದೆ. “ಅಬ್ಬೋ, ಎಂತಹ ಹಾವು ಗೊತ್ತಾ, ಸ್ವಲ್ಪದರಲ್ಲಿಯೇ ತುಳಿದುಬಿಡ್ತಿದ್ದೆ..’ ಎಂದು ಗಾಬರಿ ಆಗಿ ಕೂಗಿದ್ದಕ್ಕೆ, ಮಾರುತಿ ನನ್ನೆಡೆಗೆ ಓಡಿ ಬಂದ್ರು. ಬೆಚ್ಚಿಬಿದ್ದು ಅಲ್ಲಾಡದೇ ನಿಂತುಬಿಟ್ಟೆ. ಹಾವುಕಣ್ಮರೆ ಆದ್ರೂಕೈಕಾಲುಗಳ ನಡುಕ ನಿಲ್ಲಲಿಲ್ಲ. ಸಾವರಿಸಿಕೊಂಡು ಅಲ್ಲಿದ್ದ ಬ್ರಿಟಿಷರ ಸಮಾಧಿಗಳು, ತಾರಕುಟ್ಟೆ ಬಂಗಲೆ, ಬ್ಯಾರಕ್‌ಗಳು, ರಾಯಲ್‌ ಗೆಸ್ಟ್  ಹೌಸ್‌ ನೋಡಿದೆ. ಅವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದುದು ಬೇಸರ ತಂದಿತು.

ಟ್ರೆಕಿಂಗ್‌ನಲ್ಲಿ ತಮಟೆಯ ಸದ್ದು  : ಬೆಟ್ಟ ಹತ್ತಿಳಿದುಕೈಕಾಲುಗಳು ಸೋತಿದ್ದವು. ಆಯಾಸ ಹೇಳಿಕೊಳ್ಳುವ ಆಗಿರಲಿಲ್ಲ! ತಾಯಮ್ಮನ ಕೊಳ್ಳದ ಸಮೀಪ ರೈತರ ಹೊಲದಲ್ಲಿ ನಿಂತ ಮಳೆ ನೀರನ್ನು ದೂರದಿಂದ ನೋಡಿ ಹಿಗ್ಗಿದೆ. ಹತ್ತಿರ ಹೋಗಿ ನೋಡಿ ಹೌಹಾರಿದೆ. ಮುಖಕ್ಕೆ ತಂಪೆರೆಯಬೇಕಿದ್ದ ನೀರು ರೆಡ್‌ ಆಕ್ಸೆ„ಡ್‌ ಬೆರೆಸಿದ್ದಂತಿತ್ತು. ಇದು ಮೈನಿಂಗ್‌ ಫ‌ಲ! ತಾಯಮ್ಮನ ಗುಡಿ ಅಣತಿದೂರದಲ್ಲಿತ್ತು. “ಇಲ್ಲಿ ಚಿರತೆ ಐತಂತೆ..’ ಎಂದ ರಾಹುಲ್‌. ಇದಕ್ಕೆ ಇಂಬುಕೊಡುವಂತೆಕೋತಿಗಳ ಚಿರಾಟ ಕೇಳಿತು. ಎದೆಯಲ್ಲಿ ಢವ ಢವ! ಅಷ್ಟರಲ್ಲಿ ನಮ್ಮಿಂದೆ ಇದ್ದ ಮೇಘರಾಜ್‌, ರೈತರು ಬೆಳೆ ಕಾವಲಿಗೆ ಇಟ್ಟಿದ್ದ ತಮಟೆ ಬಡಿದರು! ನಿಧಾನಕ್ಕೆ ಒಂದೆರೆಡು ನಾಯಿಗಳೂ ಪ್ರತ್ಯಕ್ಷ ಆದವು. ನಿಟ್ಟುಸಿರು ಬಿಟ್ಟೆ. ಮನಸ್ಸು ಟ್ರಕ್ಕಿಂಗ್‌ನಿಂದ ಪ್ರಫ‌ುಲಗೊಂಡಿತ್ತು.

“ಈ ದಾರಿಯಲ್ಲಿ ಹೋಗೋಣ’ ಎಂದು ಸ್ಥೈರ್ಯ ಮಧುರವರುಕರೆದುಕೊಂಡು ಹೋಗಿ ಸೇರಿಸಿದ್ದು ಮೈನಿಂಗ್‌ ದಾರಿಗೆ! ಬೆಟ್ಟದ ನೆತ್ತಿಯಲ್ಲಿ ಮೈನ್ಸ್ ಲಾರಿಗಳು ಸ್ಪರ್ಧೆಗೆ ಬಿದ್ದಂತೆ ಯರ್ರಾಬಿರ್ರಿ ಓಡಾಡುತ್ತಿದ್ದವು. ಮುಂಜಾನೆ ಮಂಜು ತಬ್ಬಿಕೊಂಡ ಬೆಟ್ಟ ಸಂಜೆ ಹೊತ್ತಿಗೆ ಕೆಂಧೂಳುಮಯ!ಕೆಂಧೂಳು ನಮ್ಮತ್ತ ಹಾರಿ ಬಂದು ಮೈಗೆಲ್ಲ ಮೆತ್ತಿಕೊಳ್ಳುತ್ತಿತ್ತು! ಅಲ್ಲೂ ಮಾರ್ಕ್ ನೆರವಿಗೆ ಬಂತು!ಕಿರಿದಾದ ದಾರಿಯಲ್ಲಿ ಯಮ ಸ್ವರೂಪಿ ಲಾರಿಗಳ ಮಧ್ಯೆ ಪ್ರಯಾಸದಿಂದ ರಾಮಘಡ ಊರಿಗೆ ತಲುಪುವಷ್ಟರಲ್ಲಿ ಜೀವ ಅಂಗೈಗೆ ಬಂದಿತ್ತು. ಜೀವ ನೀರು ಬೇಡಿತು.ಕೊಂಡೊಯ್ದಿದ್ದ ಎರಡು ಲೀಟರ್‌ ನೀರು ಯಾವಾಗಲೋ ಖಾಲಿ ಆಗಿತ್ತು. ಶ್ರೀನಿವಾಸ್‌ ಅವರು “ಟ್ರಕ್ಕಿಂಗ್‌ ನಲ್ಲಿ ಮತ್ತೂಬ್ಬರಿಗೆ ನೀರುಕೊಡಬೇಡಿ..’ ಎಂದಿದ್ದು ಆಗ ಸ್ವಾರ್ಥತೆ ಎಂದುಕೊಂಡಿದ್ದ ನನಗೆ ಅದು ಸತ್ಯ ಅನಿಸಿತು. ಅಂತೂ ಟ್ರೆಕ್ಕಿಂಗ್‌ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ತೊಟ್ಟ ಶುಭ್ರ ಬಟ್ಟೆ, ಬ್ಯಾಗ್‌ ಮೈನ್ಸ್  ಬಣ್ಣಕ್ಕೆ ತಿರುಗಿತ್ತು! ಬಚ್ಚಲು ಮೋರಿಯ ನೀರು ಕೆಂಪಾಗಿತ್ತು. ಗಣಿಗಾರಿಕೆ, ಮೈನ್ಸ್ ಲಾರಿಗಳ ಅರ್ಭಟದ ಮೇಲೆ ಮನದಲ್ಲಿ ತಣ್ಣನೆಯ ಆಕ್ರೋಶ ಮಡುಗಟ್ಟಿತು. ­

ಅಲ್ನೋಡಿ ಕಾಮನಬಿಲ್ಲು! :  ನಾವೆಲ್ಲರೂ ಟ್ರೆಕ್ಕಿಂಗ್‌ ನೆಪದಲ್ಲಿ ವನಸಿರಿಯ ಮಧ್ಯೆ ಮೈ ಮರೆತಿದ್ದಾಗಲೇ, ಅಲ್ನೋಡಿ ರೇನ್ಬೋ’ ಅಂತ ಜಟ್ಟಿಂಗರಾಜ್‌ ಮಗ ಪ್ರಜ್ವಲ್‌ ತೋರಿಸಿದ್ದು ಆಗಸದೆಡೆಗೆ ಅಲ್ಲ. ದಾರಿ ಪಕ್ಕದಲ್ಲಿದ್ದ ನೀರಿನ ಗುಂಡಿಯತ್ತ! ಅರೆ, ಈಗ ಮಳೆಯೂ ಬಿದ್ದಿಲ್ಲ. ಹಾಗಿರುವಾಗ ಕಾಮನಬಿಲ್ಲುಕಾಣಿಸಿದ್ದು ಹೇಗೆ ಅಂದುಕೊಂಡೇ ನೋಡಿದರೆ- ಲಾರಿಗಳ ಡಿಸೇಲ್‌, ಆಯಿಲ್‌ ನೀರಿಗೆ ಸೇರಿ ಕಾಮನಬಿಲ್ಲಿನ ಬಣ್ಣಕ್ಕೆ ತಿರುಗಿತ್ತು!

 

 ಚಿತ್ರ- ಲೇಖನ: ಸ್ವರೂಪಾನಂದ ಎಂ. ಕೊಟ್ಟೂರು

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.