ಮಂಗಗಳೂ ಆನ್‌ಲೈನ್ ಪಾಠ ಕೇಳುತ್ತಾ !
Team Udayavani, Oct 13, 2020, 9:30 PM IST
ಕೋವಿಡ್-19 ಪರಿಣಾಮದಿಂದಾಗಿ ಕಲಿಕೆಯ ರೀತಿಯೇ ಬದಲಾಗಿದೆ ಎಂದರೆ ತಪ್ಪಾಗಲಾರದು. ಮಕ್ಕಳನ್ನು ಕೋವಿಡ್ ಸೋಕಿನಿಂದ ರಕ್ಷಿಸಲು ಆನಲೈನ್ ಮೂಲಕವೇ ಶಿಕ್ಷಣ, ತರಗತಿಗಳನ್ನು ನಡೆಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಇದರಿರಂದಾಗಿ ಇಂದು ಚಿಕ್ಕ ಮಕ್ಕಳೂ ಕೂಡ ಸ್ಮಾರ್ಟ್ ಫೋನ್ ಮೂಲಕ ಆನ್‌ಲೈನ್ ಪಾಠವನ್ನು ಕೇಳುವತ್ತ ಹೊಂದಿಕೊಳ್ಳುತ್ತಿವೆ. ಹಳ್ಳಿಗಳಲ್ಲಿ ಆನ್‌ಲೈನ್ ತರಗತಿಗೆ ಹಾಜರಾಗಲು ಮಕ್ಕಳು ಪಡುವ ಪರಿಪಾಟಲಂತೂ ಹೇಳ ತೀರದು.
ಈ ರೀತಿಯ ಆನಲೈನ್ ಪಾಠದಿಂದ ಆಗುವ ಪರಿಣಾಮಗಳು ಏನೇ ಇದ್ದರೂ ಸದ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯ. ಇಂದು ಮಕ್ಕಳು ಒಂದು ಮೇಜಿನ ಮುಂದೆ ಕೈಯಲ್ಲೋಂದು ಪುಸ್ತಕ, ಪೆನ್ಸಿಲ್, ಪೆನ್ನು, ಇತರೆ ಪರಿಕರಗಳೊಂದಿಗೆ ಎದುರಿಗೆ ಒಂದು ದೊಡ್ಡ ಸ್ಮಾರ್ಟ್ ಫೋನ್ ಇಟ್ಟುಕೊಂಡು ಕುಳಿತಿರುವ ದೃಶ್ಯ ಎಲ್ಲ ಮನೆಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಆನ್‌ಲೈನ್ ಪಾಠದ ಪ್ರಭಾವ ಎಷ್ಟಿದೆ ಎಂದರೆ ಮಕ್ಕಳು ಮಾತ್ರವಲ್ಲದೇ ಮಂಗಗಳೂ ಕೂಡ ಇದಕ್ಕೆ ಮನ ಸೋತಿವೆ. ಮಂಗಗಳು ಪಾಠ ಕೇಳುತ್ತವಾ ಎಂದು ಆಶ್ಚರ್ಯ ಆಯಿತಾ ! , ಹೌದು ಮಗುವೊಂದು ಆನ್‌ಲೈನ್ ಪಾಠ ಕೇಳುತ್ತಿದ್ದು, ಹಿಂಬದಿ ಕಿಟಿಕಿಯಿಂದ ಮೂರು ಮಂಗಗಳು ಪಾಠವನ್ನು ವೀಕ್ಷಿಸುತ್ತಿರುವ ಫೋಟೋ ಈಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ @nileshtrivedi ಎನ್ನುವ ವ್ಯಕ್ತಿ ಇದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಇದನ್ನು ಅವನೀಶ್ ಶರ್ಮ ಎನ್ನುವ ಐಎಎಸ್ ಅಧಿಕಾರೊಯೋರ್ವರು ರೀಟ್ವಿಟ್ ಮಾಡಿದ್ದು, ಹೆಚ್ಚು ವೈರಲ್ ಆಗಿದೆ. ಹಲವಾರು ಪ್ರತಿಕ್ರಿಯೆ ಪಡೆದುಕೊಂಡಿದೆ. 3,200ಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, 400ಕ್ಕೂ ಹೆಚ್ಚಚು ಜನ ರೀಟ್ವಿಟ್ ಮಾಡಿದ್ದಾರೆ. ಕೆಲವರು ಮಕ್ಕಳ ಬಗೆಗಿನ ಕಾಳಜಿ, ಇನ್ನು ಕೆಲವರು ಆಶ್ಚರ್ಯ ಚಕಿತವಾಗಿರುವುದಾಗಿ ಕಮೆಂಟ್ ಮಾಡಿದದ್ದಾರೆ.
What a fascinating picture! (Source: unknown) pic.twitter.com/NQUrXvmTax
— nilesh.trivedi.pw (@nileshtrivedi) October 12, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.