ಜಿಲ್ಲೆಯಲ್ಲಿ ಮೀನು ಅಗ್ಗ; ಕೋಳಿ ಮಾಂಸ- ಮೊಟ್ಟೆ ದುಬಾರಿ!

ರಫ್ತಿನ ಏರುಪೇರಿನಿಂದ ಭಾರೀ ಪ್ರಮಾಣದಲ್ಲಿ ಮೀನು ಸ್ಥಳೀಯ ಮಾರುಕಟ್ಟೆಗೆ

Team Udayavani, Oct 14, 2020, 5:53 AM IST

ಜಿಲ್ಲೆಯಲ್ಲಿ ಮೀನು ಅಗ್ಗ; ಕೋಳಿ ಮಾಂಸ- ಮೊಟ್ಟೆ ದುಬಾರಿ!

ಉಡುಪಿ: ಮಾರುಕಟ್ಟೆಯಲ್ಲಿ ಕೋಳಿ ಹಾಗೂ ಮೊಟ್ಟೆಯ ದರದಲ್ಲಿ ಮತ್ತೆ ಭಾರೀ ಏರಿಕೆ ಕಂಡಿದ್ದು ಮೀನು ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಮೀನಿನ ಋತು ಆರಂಭ ವಾಗಿದ್ದು ಭಾರೀ ಪ್ರಮಾಣದಲ್ಲಿ ಮೀನು ಲಭ್ಯವಾಗುತ್ತಿದೆ. ಇದರಿಂದಾಗಿ ಈ ಬಾರಿ ನವರಾತ್ರಿ ಹಬ್ಬದ ಮುನ್ನ ನಗರದಲ್ಲಿ ಮೀನಿನ ಬೆಲೆ ತೀವ್ರ ಕುಸಿತವಾಗಿದೆ.

ಮೀನಿನ ದರ
ಬಂಗುಡೆ ಕೆ.ಜಿ.ಗೆ 100 ರೂ., ಬೂತಾಯಿ ಕೆ.ಜಿ. 80 ರೂ., ಅಂಜಲ್‌ಗೆ 50 ರೂ. ಮಾರಾಟವಾಗುತ್ತಿದ್ದು, 300 ರೂ.ಯಷ್ಟು ಕುಸಿದಿದೆ. ಬಿಳಿ ಮೀನು (ಸಿಲ್ವರ್‌ ಫಿಶ್‌) ಕೆ.ಜಿ.ಗೆ 50 ರೂ.ಗೆ ಇಳಿಕೆಯಾಗಿದ್ದು, 100 ರೂ.ಗೆ ಮಾರಾಟವಾಗುತ್ತಿದೆ. ದೊಡ್ಡ ಮೀನುಗಳನ್ನು ಹೊರತು ಪಡಿಸಿ, ಉಳಿದ ಚಿಕ್ಕಪುಟ್ಟ ಮೀನು ಕೆ.ಜಿ.ಗೆ 50ರಿಂದ 100ರೂ. ಒಳಗೆ ಸಿಗುತ್ತಿದೆ.

ದರ ಇಳಿಕೆಗೆ ಕಾರಣ?
ಪ್ರಸ್ತುತ ಮಲ್ಪೆ ಬೋಟ್‌ಗಳಿಗೆ ಮೀನು ಹೇರಳವಾಗಿ ಲಭ್ಯವಾಗುತ್ತಿದೆ. ಜತೆಗೆ ಕೊರೊನಾ ಹಿನ್ನೆಲೆಯಲ್ಲಿ ರಫ್ತಿನಲ್ಲಿ ಏರುಪೇರಾದ ಕಾರಣ ಹೆಚ್ಚಿನ ಮೀನುಗಳು ಸ್ಥಳೀಯವಾಗಿ ಮಾರಾಟವಾಗುತ್ತಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಮೀನುಗಳು ಮಾರುಕಟ್ಟೆಗೆ ಬರುತ್ತಿವೆ.

ಕೋಳಿ-ಮೊಟ್ಟೆ ದುಬಾರಿ!
ಕೋವಿಡ್‌ ಆರಂಭದ ದಿನದಲ್ಲಿ ಕೋಳಿ ಮಾಂಸದ ಬೆಲೆ ಭಾರೀ ಇಳಿಕೆ ಯಾಗಿತ್ತು. ಅನ್‌ಲಾಕ್‌ ಆದ ಬಳಿಕ ಗ್ರಾಹಕರ
ಬೇಡಿಕೆಗೆ ತಕ್ಕಂತೆ ಕೋಳಿ, ಮೊಟ್ಟೆ ಪೂರೈಕೆ ಇಲ್ಲದ ಕಾರಣದಿಂದ ಬೆಲೆ ಹಂತ ಹಂತ ವಾಗಿ ಗಗನಕ್ಕೇರುತ್ತಿದೆ.. ಕೋಳಿಯ ಧಾರಣೆ ಒಂದು ಕೆ.ಜಿ. (ಸ್ಕಿನ್‌ ಸಹಿತ ಮಾಂಸದ ಕೋಳಿಗೆ) 160 ರೂ. ನಿಂದ 180 ರೂ., (ಸ್ಕಿ® ರಹಿತ ಮಾಂಸದ ಕೋಳಿಗೆ) 200ರಿಂದ 240 ರೂ.ಗೆ
ಏರಿಕೆಯಾಗಿದೆ. ಹೋಲ್‌ಸೇಲ್‌ನಲ್ಲಿ ಒಂದು ಮೊಟ್ಟೆಗೆ 6 ರೂ. ಇದ್ದರೆ ಅಂಗಡಿ ಗಳಲ್ಲಿ 6.50 ರೂ.ನಿಂದ 7 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಬೆಲೆ ಏರಿಕೆಗೆ ಕಾರಣವೇನು?
ಲಾಕ್‌ಡೌನ್‌ ಅವಧಿಯಲ್ಲಿ ಹಕ್ಕಿ ಜ್ವರ ಹಾಗೂ ಸುಳ್ಳು ಸುದ್ದಿಯಿಂದ ಕೋಳಿಗಳನ್ನು ಸಾಯಿಸಿದ ಪರಿಣಾಮ ಇದೀಗ ಬೇಡಿಕೆಗೆ ತಕ್ಕಷ್ಟು ಉತ್ಪಾದನೆಯಾಗುತ್ತಿಲ್ಲ. ಅನ್‌ಲಾಕ್‌ ಬಳಿಕ ಕೋಳಿ ಫಾರಂಗಳಿಗೆ ಫೀಡ್‌ (ಕೋಳಿ ಆಹಾರ) ಪೂರೈಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ಕೋಳಿ ಉತ್ಪಾದನೆ ಕಡಿಮೆಯಾಗಿದೆ. ಇದೀಗ ಫೀಡ್‌ ಪೂರೈಕೆ ಯಥಾಸ್ಥಿತಿಗೆ ಬಂದರೂ, ಕೋಳಿ ಉತ್ಪಾದನೆ ಸಹಜ ಸ್ಥಿತಿಗೆ ಬರಲು ಇನ್ನಷ್ಟು ಸಮಯ ಬೇಕು ಎಂದು ಕೋಳಿ ಫಾರಂ ಮಾಲಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವ್ಯಾಪಾರ ಕಡಿಮೆ
ಮೀನಿನ ಬೆಲೆಯಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ವ್ಯಾಪಾರ ತುಂಬಾ ಕಡಿಮೆ ಇದೆ. ನವರಾತ್ರಿ ಸಂದರ್ಭದಲ್ಲಿ ಇನ್ನೂ ಇಳಿಕೆಯಾಗುವ ಸಾಧ್ಯತೆ ಇದೆ.
-ಬೇಬಿ ಸಾಲಿಯಾನ್‌,  ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ, ಉಡುಪಿ ತಾಲೂಕು.

ಟಾಪ್ ನ್ಯೂಸ್

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts

Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.