ಗ್ರಾಪಂ ಚುನಾವಣೆಯಲ್ಲಿ ನಿಷ್ಠವಂತರಿಗೆ ಟಿಕೆಟ್
Team Udayavani, Oct 14, 2020, 3:19 PM IST
ಮಳವಳ್ಳಿ: ಮುಂದಿನ ದಿನಗಳಲ್ಲಿ ನಡೆಯುವ ಗ್ರಾಪಂ ಚುನಾವಣೆಗೆ ಪಕ್ಷ ನಿಷ್ಠೆರನ್ನು ಗುರುತಿಸಿ,ಟಿಕೆಟ್ ನೀಡುವ ಮೂಲಕ ಪಕವ Ò ನ್ನು ತಳಮಟ್ಟ ದಿಂದ ಸದೃಢವಾಗಿ ಕಟ್ಟಲು ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಬಿಜೆಪಿ ಉಸ್ತುವಾರಿ ಎ.ಮಂಜು ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಆತ್ಮನಿರ್ಭರ ಭಾರತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಪ್ರಸ್ತುತ ರಾಜಕಾರಣಿಗಳು ಮತದಾರರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುವ ಸಾಧ್ಯತೆ ಇದೆ.ಇದರಿಂದಪಕ್ಷದ ತತ್ವ ಸಿದ್ಧಾಂತದಂತೆ ಕಾರ್ಯನಿರ್ವಹಿಸಿ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಕಾರ್ಯಕರ್ತರನ್ನು ಗುರುತಿಸಿ ಪಂಚಾಯ್ತಿ ಆಯ್ಕೆ ಮಾಡಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ, ಜಿಲ್ಲೆ ಮತ್ತು ತಾಲೂಕಿನಲ್ಲಿ ಪಕ್ಷದ ಮತ್ತಷ್ಟು ಸದೃಢವಾಗುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವಕ್ಕೆ ಶಕ್ತಿ ಕೊಟ್ಟವರು ಡಾ.ಬಿ.ಆರ್ ಅಂಬೇಡ್ಕರ್ ಅವರು, ರಾಜಕೀಯದಲ್ಲಿ ಮೇಲ್ಮಟ್ಟ, ಕೆಳ ಮಟ್ಟ ಎಂದುಕೊಳ್ಳಬಾರದು, ಜನ ಸೇವೆ ಮಾಡಲು ಯಾವುದಾದರೂ ಒಂದು ಅಧಿಕಾರ ಇದ್ದರೆ ಸಾಕು ಎಂದರು.
ಜೆಡಿಎಸ್ ವಿರುದ್ಧ ವಾಗ್ಧಾಳಿ: ಕಳೆದ ಚುನಾವಣೆಯಲ್ಲಿ ಸಮುದಾಯ ಹೆಸರಿನಲ್ಲಿ, ಸಾಲಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಜನರಿಗೆ ಸುಳ್ಳು ಭರವಸೆ ನೀಡಿ ವಂಚಿಸಿ ನನ್ನ ಹಾಗೂ ಇನ್ನೂ ಹಲವಾರು ನಾಯಕರ ಸೋಲಿಗೆ ಕೆಲವರು ಕಾರಣರಾದರು. ಆದರೆ, ಜನರು ಮಾತ್ರ ಅವರಿಗೆ ಕೊಟ್ಟಿದ್ದುಬರೀ40 ಸ್ಥಾನ ಮಾತ್ರ. ಅಂತಹ ಸುಳ್ಳು ಹೇಳುವ ನಾಯಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ದೇಶದ ಆರ್ಥಿಕತೆಗೆ ಉತ್ತೇಜನ: ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ನಮ್ಮ ದೇಶದ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳಲಾಗದೇ ವಿದೇಶಕ್ಕೆ ಕಳುಹಿಸಲಾಗುತ್ತಿತ್ತು. 55 ವರ್ಷಗಳ ಕಾಂಗ್ರೆಸ್‌ಆಡಳಿತ ಮಾಡಿದ್ದು, ನಮ್ಮಲ್ಲಿನ ಯುವಕರ ಶಕ್ತಿ, ಕೌಶಲ್ಯತೆ, ಸಂಪತ್ತುನ್ನು ಉಪಯೋಗಿಸಿಕೊಳ್ಳಲು ವಿಫಲವಾಯಿತು. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಗುರುತಿಸಿ ದೇಶದ ಆರ್ಥಿಕ ಸ್ಥಿತಿಯ ಉತ್ತೇಜನಕ್ಕೆ ಮುಂದಾಗಿದ್ದಾರೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ಕುಮಾರ್, ಮೈಸೂರು ವಿಭಾಗದ ಕಾರ್ಯದರ್ಶಿ ಕುಮಾರ ಸ್ವಾಮಿ, ಮುಖಂಡ ಡಾ.ಸಿದ್ದರಾಮಯ್ಯ, ತಾಲೂಕುಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಣಿ ಬಸವರಾಜು, ಸುರೇಶ್, ಪ್ರಧಾನಕಾರ್ಯದರ್ಶಿ ಕೆ.ಸಿ.ನಾಗೇಗೌಡ,ಅಶೋಕ್‌ಕುಮಾರ್, ಯುವ ಘಟಕ ಅಧ್ಯಕ್ಷ ಕೆ.ಪಿ.ಮೋಹನ್‌ಕುಮಾರ್ ಹಾಜರಿದ್ದರು.
ಗ್ರಾಪಂ ಚುನಾವಣೆಗಾಗಿ ಕಾರ್ಯಕ್ರಮ ರೂಪಿಸಿ :
ಶ್ರೀರಂಗಪಟ್ಟಣ: ಜಿಲ್ಲೆಯ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿ, ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಗ್ರಾಪಂ ಚುನಾವಣೆಗಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ಮಾಜಿ ಸಚಿವಹಾಗೂ ಜಿಲ್ಲಾ ಬಿಜೆಪಿ ಉಸ್ತುವಾರಿ ಎ. ಮಂಜು ಹೇಳಿದರು.
ಪಟ್ಟಣದ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಬಿಜೆಪಿಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿಹಳ್ಳಿಗಳಲ್ಲೂ ಪಕ್ಷ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕು. ಸರ್ಕಾರದ ಅಭಿವೃದ್ಧಿಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿಅಲ್ಲಿನ ಮುಖಂಡರು, ಸ್ಥಳೀಯ ಜನರಿಗೆ ಮುಟ್ಟಿಸಬೇಕು. ಪ್ರತಿ ಬೂತ್ ಮಟ್ಟದಲ್ಲೂ ಪಕ್ಷ ಸಂಘಟನೆಯಾಗಿ, ಮುಂದಿನ ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸಲು ಪೂರ್ವಯೋಜಿತಕಾರ್ಯಕ್ರಮಗಳನ್ನು ರೂಪಿಸಬೇಕು. ಸಂಘಟನೆ ವಿಚಾರದಲ್ಲಿ ಪ್ರತಿ ಗ್ರಾಮಗಳ ಕಾರ್ಯಕ್ರಮಕ್ಕೆ ನಾವು ಬರುತ್ತೇವೆ. ಕಾರ್ಯಕರ್ತರು ಬಲವರ್ಧನೆಗೆ ಹಿಂಜರಿಯಬಾರದು ಎಂದು ತಿಳಿಸಿದರು.
ಕಾರ್ಯಕ್ರಮ ರೂಪಿಸಿ:ಮೈಸೂರು ವಿಭಾಗೀಯ ಮಟ್ಟದ ಸಂಘಟನಾಕಾರ್ಯದರ್ಶಿ ಕೆ.ಟಿ.ಕುಮಾರಸ್ವಾಮಿಮಾತನಾಡಿ, ಪಕ್ಷದಲ್ಲಿಕಾರ್ಯಕರ್ತರುಹಾಗೂ ಮುಖಂಡರ ನಡುವೆ ಹೊಂದಾಣಿಕೆ ಮಾಡಿಕೊಂಡು ಪದಾಧಿಕಾರಿಗಳು ಕಾರ್ಯಕ್ರಮ ರೂಪಿಸಬೇಕು. ಆಗ ಎಲ್ಲರಿಗೂ ಪರಸ್ಪರಸಂಪರ್ಕ ಬೆಳೆಯುತ್ತದೆ. ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಡಾ.ಸಿದ್ದರಾಮಯ್ಯ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್‌ನಂಜುಂಡೇಗೌಡ, ಮಂಡ್ಯ ಜಿಲ್ಲಾ ಆಧ್ಯಕ್ಷ ವಿಜಯಕುಮಾರ್, ಜಿಲ್ಲಾ ಉಪಾಧ್ಯಕ್ಷಟಿ.ಶ್ರೀಧರ್,ಜಿಲ್ಲಾಮಹಿಳಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಉಮೇಶ್, ತಾಲೂಕು ಕಾರ್ಯದರ್ಶಿ ಇಂದ್ರಕುಮಾರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.