ದಲಿತರ ಸಮಸ್ಯೆ ಪರಿಹರಿಸಲು ಒತ್ತಾಯ
Team Udayavani, Oct 14, 2020, 4:13 PM IST
ಮಧುಗಿರಿ: ತಾಲೂಕಿನಲ್ಲಿ ದಲಿತರ ಸಮಸ್ಯೆಗಳು ಸಾಕಷ್ಟಿದ್ದು, ಅಧಿಕಾರಿ ವರ್ಗಈ ಬಗ್ಗೆ ನಿರ್ಲಕ್ಷ್ಯ ತೋರದೆ ಹೆಚ್ಚಿನ ಗಮನ ಹರಿಸುವಂತೆ ತಾಲೂಕು ದಲಿತ ಸಂಘಟನೆಗಳು ಒತ್ತಾಯಿಸಿದವು. ಪಟ್ಟಣದ ತಾಪಂನಲ್ಲಿ ತಾಲೂಕು ಆಡಳಿತ ಕರೆದಿದ್ದ ದಲಿತರ ಕುಂದು-ಕೊರತೆ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂದಿದ್ದು, ಅಗತ್ಯ ಮೂಲ ಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಆಗ್ರಹಿಸಲಾಯಿತು.
ಸಭೆಗೆ ಕೆಲ ಅಧಿಕಾರಿಗಳು ತಡವಾಗಿ ಆಗಮಿಸಿದಕಾರಣಅಸಮಾಧಾನಗೊಂಡ ತಹಶೀಲ್ದಾರರು ಸಭೆಗೆಈರೀತಿ ತಡವಾಗಿ ಬಂದಿರುವುದು ಸರಿಯಲ್ಲ ಎಂದುಸಭೆಯಿಂದ ಅವರನ್ನು ಹೊರಗೆ ಕಳಿಸಲಾಗಿತ್ತು. ನಂತರ ಸಂಘಟನೆ ಮುಖ್ಯಸ್ಥಟಿ.ಡಿ.ಸಂಜೀವಮೂರ್ತಿ ಮಾತನಾಡಿ, ಕೋವಿಡ್ ನೆಪದಲ್ಲಿ 3 ತಿಂಗಳಿಗೊಮ್ಮೆ ಕರೆಯುವ ಸಭೆಯನ್ನು ವರ್ಷವಾದರೂ ಕರೆದಿಲ್ಲ ಎಂದು ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಪುರಸಭೆಯ 87 ಅಂಗಡಿಗಳನ್ನು ಮರು ಹರಾಜು ಮಾಡುವಂತೆ ಕೋರ್ಟ್ ನಿರ್ದೇಶನ ನೀಡಿದರೂ ಮುಖ್ಯಾಧಿಕಾರಿ ಇತ್ತ ಗಮನ ಹರಿಸಿಲ್ಲ. ಬಡವರು ಮನೆ ನಿರ್ಮಿಸಿಕೊಂಡರೆಕಾನೂನು ಕ್ರಮಕ್ಕೆ ಮುಂದಾಗುವ ನೀವು ಪಟ್ಟಣದಲ್ಲಿ ಶ್ರೀಮಂತರು ಒತ್ತುವರಿ ಮಾಡಿಕೊಂಡಿರುವ ಪುರಸಭೆ ಜಾಗವನ್ನು ತೆರವುಗೊಳಿಸಲು ಯಾಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿ, ಈ ಬಗ್ಗೆ ಮೊದಲು ಶ್ರೀಮಂತರ ಮೇಲೆ ಕ್ರಮ ಜರುಗಿಸಿಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ವೈ.ಶಿವಕುಮಾರ್ ಕಿಡಿಕಾರಿದ್ದು, ಅಂಗಡಿ ಮಳಿಗೆಗಳ ಮರು ಹರಾಜು ನಡೆಸದಿದ್ದರೆ ಇದೇ ಅ.15 ರಿಂದ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಧರ ಣಿ ನಡೆಸುವುದಾಗಿ ಎಚ್ಚರಿಸಿದರು.
ವಸತಿ ವಂಚಿತರ ಹಾಗೂ ಸಾರ್ವಜನಿಕರುದ್ರ ಭೂಮಿಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಿದ್ದು, ಇದಕ್ಕೆ ಪ್ರತ್ರಿಯಿಸಿದ ತಹಶೀಲ್ದಾರ್ ಡಾ.ವಿಶ್ವನಾಥ್, ತಾಲೂಕಿ ನಲ್ಲಿ 199 ಜನ ವಸತಿ ಗ್ರಾಮಗಳಿದ್ದು, ಅಗತ್ಯತೆಗೆ ಅನುಗುಣವಾಗಿ ರುದ್ರಭೂಮಿ ಬೇಕಿದೆ. ಅದಕ್ಕಾಗಿ ಸರ್ಕಾರ ಎಕರೆಗೆ 9 ಲಕ್ಷದ ತನಕ ಖರೀದಿ ಮೊತ್ತ ನೀಡಲು ಸಿದ್ಧವಿದೆ. ಮುಂದೆ ಸಾರ್ವಜನಿಕರು ದ್ರಭೂಮಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಸಿಪಿಐ ಸರ್ದಾರ್, ಪಿಎಸ್‌ಐ ಕಾಂತರಾಜು, ಸಮಾಜ ಕಲ್ಯಾಣ ಇಲಾಖೆಯ ಚಿಕ್ಕರಗಪ್ಪ, ದಲಿತಮುಖಂಡರಾದ ಮಹರಾಜು, ತುಂಡೋಟಿ ರಾಮಾಂಜಿ, ದೊಡ್ಡೇರಿ ಕಣಿಮಯ್ಯ, ಸಿದ್ದಾಪುರ ರಂಗಶಾಮಣ್ಣ, ದಿಲೀಪ್, ನರಸಿಂಹ ಮೂರ್ತಿ,ಕೋಟೆಕಲ್ಲಪ್ಪ,ದೃವಕುಮಾರ್, ಗರಣಿ ಗಿರೀಶ್, ಸಿದ್ದಗಂಗಮ್ಮ, ವಿಕ್ಕಮ್ಮ, ಜೀವಿಕ ಮಂಜುನಾಥ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.