ವಚನ-ಸಂವಿಧಾನಕ್ಕಿಲ್ಲ ವ್ಯತ್ಯಾಸ
Team Udayavani, Oct 14, 2020, 5:23 PM IST
ದಾವಣಗೆರೆ: ಜೀವನದ ವಾಸ್ತವ ತಿಳಿಸುವ ಬಸವಣ್ಣನವರ ವಚನಗಳು ಕೇಳಲು ಸ್ಪಲ್ಪ ಕರ್ಕಶ ಎನಿಸಿದರೂ ಅವುಗಳನ್ನುಹೃದಯಕ್ಕೆ ಹತ್ತಿರವಾಗಿಸಿಕೊಂಡು ಕೇಳಿದರೆ ಬೆಲ್ಲ ಸವಿದಸಿಹಿ ಅನುಭವ ನೀಡುತ್ತವೆ ಎಂದು ಜಾಗತಿಕ ಲಿಂಗಾಯತಮಹಾಸಭಾ ರಾಜ್ಯ ಕಾರ್ಯದರ್ಶಿ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕವುನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಸಂಜೆಏರ್ಪಡಿಸಿದ್ದ ಬಸವ ಬೆಳಗು ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅಂಬೇಡ್ಕರ್ ಬರೆದ ನಮ್ಮ ದೇಶದ ಸಂವಿಧಾನಕ್ಕೂ ಬಸವಣ್ಣನವರ ವಚನಗಳಿಗೂ ಹೆಚ್ಚಿನ ವ್ಯತ್ಯಾಸಗಳಿಲ್ಲ.ಬಸವಣ್ಣನವರ ಎಲ್ಲ ವಿಚಾರಗಳೂ ಸಂವಿಧಾನದಲ್ಲಿ ಅಡಗಿವೆ.ಬಸವಣ್ಣನವರ ವಚನಗಳು 21ನೇ ಶತಮಾನಕ್ಕೆ ಮಾತ್ರವಲ್ಲ,ಯುಗ ಯುಗಕ್ಕೂ ಪ್ರಸ್ತುತ ಎನಿಸುವಂಥವುಗಳಾಗಿವೆ ಎಂದರು.
ಬಸವಣ್ಣನವರ ವಚನದ ಒಂದು ಸಾಲನ್ನು ಬಿಟ್ಟು ಕೂಡ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಬಸವಣ್ಣನವರವಚನದಲ್ಲಿರುವಷ್ಟು ಸರಳವಾಗಿ ಅರ್ಥೈಸುವ ಜೀವನ ಸಾರ ಪ್ರಪಂಚದ ಬೇರೆ ಯಾವ ಭಾಷೆಯಲ್ಲಿಯೂ ಇಲ್ಲ.ಬಸವೇಶ್ವರರ ಸರಳ ವ್ಯಕ್ತಿತ್ವ ಈ ವಿಶ್ವದಲ್ಲಿ ಮತ್ತೆ ಕಾಣಲುಸಾಧ್ಯವೇ ಇಲ್ಲ. ಬಸವಣ್ಣ ಎಂದರೆ ಎತ್ತಲ್ಲ ಅವರು ವಿಶ್ವಮಾನವ.ಅವರ ವಿಶೇಷವಾದ ತತ್ವ, ಸಂದೇಶಗಳು ಇಡೀ ವಿಶ್ವವನ್ನೇಆಕರ್ಷಿಸಿವೆ. ಹೀಗಾಗಿ ಅಮೇರಿಕಾ ಸೇರಿದಂತೆ ವಿವಿಧದೇಶಗಳಲ್ಲಿ ಅವರ ಮೂರ್ತಿಗಳು ರಾರಾಜಿಸುತ್ತಿವೆ. ಆದರೆ,ಕನ್ನಡ ನಾಡಿನ ಎಲ್ಲ ಮನೆ ಮನೆಗಳಲ್ಲಿ ಇನ್ನೂ ಬಸವಣ್ಣನಮೂರ್ತಿಗಳು ರಾರಾಜಿಸದಿರುವುದು ವಿಷಾದನೀಯ ಎಂದರು.
ಮಹಾಸಭಾ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ, ಯಾರು ತಮ್ಮ ಕಾಯಕವನ್ನು ನಿಷ್ಠೆ, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಮಾಡುತ್ತಾರೊ ಅವರೇ ಬಸವಣ್ಣನವರ ನಿಜವಾದ ಅನುಯಾಯಿ ಎನಿಸಿಕೊಳ್ಳುತ್ತಾರೆ.ಪ್ರಾಮಾಣಿಕತೆ, ಶ್ರದ್ಧೆ ಮರೆತು, ಉಪಕಾರ ಗುಣ ಇಲ್ಲದೇಇದ್ದರೆ ಅದು ಕೇವಲ ಬೂಟಾಟಿಕೆ ಎನಿಸಿಕೊಳ್ಳುತ್ತದೆ.ಪ್ರತಿಯೊಬ್ಬರೂ ಬಸವಣ್ಣನವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖೀ ಕೆಲಸಗಳನ್ನು ಮಾಡಬೇಕು ಎಂದರು.
ಇನ್ನೋರ್ವ ಸನ್ಮಾನಿತ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಸ್.ಕೆ. ಚಂದ್ರಣ್ಣ ಮಾತನಾಡಿ, ಬಸವಣ್ಣನವರ ವಚನ ಸಂದೇಶದಂತೆ ಎಲ್ಲರೂ ತಮ್ಮಕಾಯಕದಲ್ಲಿ ದೇವರನ್ನು ಕಾಣಬೇಕು. ಪ್ರತಿ ಯೊಂದುವೃತ್ತಿಯನ್ನು ಒಳ್ಳೆಯ ಉದ್ದೇಶ, ಒಳ್ಳೆಯ ಮನಸ್ಸಿನಿಂದ ಮಾಡಬೇಕು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರುಳಸಿದ್ದಯ್ಯ ಬಸವನಾಳು, ಪ್ರಮುಖರಾದ ವೀಣಾ ಮಂಜುನಾಥ್, ಸಿದ್ದರಾಮಣ್ಣ, ಬಸವಕಲಾ ಲೋಕದ ಶಶಿಧರ ಬಸಾಪುರ, ಸಿದ್ದೇಶ್ವರ್, ವಿನಯ್ ಇನ್ನಿತರರು ಕಾರ್ಯಕ್ರಮದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.