ಕಾಂಪೌಂಡ್‌ ಕುಸಿದು ಒಂದು ವರ್ಷವಾದರೂ ದುರಸ್ತಿಯಾಗಿಲ್ಲ, ಶಾಲಾ ಕಟ್ಟಡವೂ ಕುಸಿತ ಭೀತಿ

ಹೆಬ್ರಿ: ಕೊಂಕಣಾರಬೆಟ್ಟು ಶಾಲೆ

Team Udayavani, Oct 15, 2020, 4:52 AM IST

ಕಾಂಪೌಂಡ್‌ ಕುಸಿದು ಒಂದು ವರ್ಷವಾದರೂ ದುರಸ್ತಿಯಾಗಿಲ್ಲ, ಶಾಲಾ ಕಟ್ಟಡವೂ ಕುಸಿತ ಭೀತಿ

ವರ್ಷದ ಹಿಂದೆ ಕುಸಿದು ಬಿದ್ದ ಕೊಂಕಣಾರಬೆಟ್ಟು ಶಾಲೆಯ ಕಾಂಪೌಂಡ್‌.

ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಕೊಂಕಣಾರಬೆಟ್ಟು ಶಾಲಾ ಕಾಂಪೌಂಡ್‌ ಕಳೆದ ವರ್ಷದ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದ್ದು ವರ್ಷ ಕಳೆದರೂ ಇನ್ನೂ ದುರಸ್ತಿಗೊಂಡಿಲ್ಲ . ಈಗ ಭಾರೀ ಮಳೆಯಿರುವುದರಿಂದ ಶಾಲಾ ಮೈದಾನದ ಮಣ್ಣು ಕುಸಿಯುತ್ತಿದ್ದು ಶಾಲಾ ಕಟ್ಟಡವೂ ಕುಸಿಯುವ ಭೀತಿ ಎದುರಾಗಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಶಾಲಾ ಕಾಂಪೌಂಡ್‌ ತಾಗಿ ಖಾಸಗಿ ಕಂಪೆನಿಯವರು ಪೈಪ್‌ಲೈನ್‌ ಅಳವಡಿಸಲು ಹೊಂಡ ತೋಡಿದ್ದು ಅದರ ಜತೆಗೆ ವಿಪರೀತ ಮಳೆಯ ಕಾರಣ ಕಾಂಪೌಂಡ್‌ ಸಂಪೂರ್ಣ ಕುಸಿದು ಬಿದ್ದಿತ್ತು. ಮಳೆಯ ನೀರು ಮೈದಾನದಲ್ಲಿ ರಭಸದಿಂದ ಹರಿದ ಪರಿಣಾಮ ಶಾಲಾ ಮೈದಾನ ಕೂಡ ಕುಸಿಯುವ ಹಂತಕ್ಕೆ ತಲುಪಿದ್ದು ಕಟ್ಟಡವೂ ಕುಸಿಯುವ ಭೀತಿ ಇದೆ. ಈ ಸ್ಥಳಕ್ಕೆ ಜಿಲ್ಲಾಧಿಕಾರಿಯವರು ಈ ಹಿಂದೆ ಭೇಟಿ ನೀಡಿ ಪ್ರಕೃತಿ ವಿಕೋಪ ನಿಧಿಯಲ್ಲಿ ದುರಸ್ತಿ ಮಾಡುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ದುರಸ್ತಿ ಕಾಣದಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸ್ಥಳೀಯಾಡಳಿತದವರಲ್ಲಿ ವಿಚಾರಿಸಿದಾಗ ಶಾಲಾ ಕಾಂಪೌಂಡ್‌ ದುರಸ್ತಿ ಮಾಡುವಷ್ಟು ಅನುದಾನ ನಮ್ಮ ಪಂಚಾಯತ್‌ನಲ್ಲಿ ಇಲ್ಲದ ಕಾರಣ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಮುದ್ರಾಡಿಯಿಂದ ಕಬ್ಬಿನಾಲೆಗೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು ಇದರ ಬದಿಯಲ್ಲಿಯೇ ಶಾಲಾ ಆವರಣ ಕುಸಿದು ಬಿದ್ದಿದ್ದು ಗೋಡೆಯ ಬದಿಯಲ್ಲಿ ದೊಡ್ಡ ಗಾತ್ರದ ಕಲ್ಲುಗಳ ರಾಶಿ ಇದ್ದು ಸಂಚರಿಸಲು ಆತಂಕವಾಗುತ್ತಿದೆ. ಇದೀಗ ಮಳೆ ಕೂಡ ಹೆಚ್ಚಾಗಿದ್ದು ಈ ಭಾಗ ದಲ್ಲಿ ವಾಹನ ಸಂಚಾರ, ಜನರ ಓಡಾಟ ಅಪಾಯ ದಿಂದ ಕೂಡಿದೆ ಎಂದು ಸ್ಥಳೀಯರು ದೂರಿದ್ದಾರೆ.

ಗ್ರಾಮಸ್ಥರಿಂದಲೇ ನಿರ್ಮಾಣ
ರಸ್ತೆಯ ಬದಿಯಲ್ಲಿ ಶಾಲೆ ಇರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಸುಮಾರು 20 ವರ್ಷಗಳ ಹಿಂದೆ ಸ್ಥಳೀಯರು ಸೇರಿ ಈ ಶಾಲೆಗೆ ವಿಸ್ತಾರವಾದ ಮೈದಾನ ಹಾಗೂ ಆವರಣ ಗೋಡೆಯನ್ನು ನಿರ್ಮಿಸಿದ್ದರು. ಆದರೆ ಶಾಲಾ ಆವರಣ ಗೋಡೆ ಮಳೆಗೆ ಕುಸಿದು ಬಿದ್ದು ವರ್ಷ ಕಳೆದರೂ ಅದನ್ನು ನಿರ್ಮಿಸಲು ಯಾವುದೇ ಕ್ರಮವನ್ನು ಇಲಾಖೆ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಹಲವಾರು ಬಾರಿ ಮನವಿ
ಈ ಬಗ್ಗೆ ಶಾಲಾ ಸಿಬಂದಿಗೆ, ಶಿಕ್ಷಣ ಇಲಾಖೆ, ಸ್ಥಳೀಯ ಜನಪ್ರತಿನಿಧಿ, ಸ್ಥಳೀಯ ಪಂಚಾಯತ್‌ಗೆ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆಯಾಗಲಿ, ಆಶ್ವಾಸನೆಯಾಗಲಿ ಬಂದಿಲ್ಲ, ಶಾಲಾ ಕಾಂಪೌಂಡ್‌ ಕುಸಿತದಿಂದ ಶಾಲಾ ಮೈದಾನದ ಮಣ್ಣು ರಸ್ತೆಗೆ ಆವರಿಸಿದ್ದು ವಾಹನ ಸಂಚಾರಕ್ಕೂ ತೊಂದರೆಯಾಗಿದೆ, ಆದಷ್ಟು ಬೇಗ ಸಂಬಂಧಪಟ್ಟವರು ಶಾಲಾ ಆವರಣ ಗೋಡೆಯನ್ನು ನಿರ್ಮಿಸಿಕೊಡಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಅಪಾಯ ತಪ್ಪಿದ್ದಲ್ಲ
ಶಾಲಾ ಕಾಂಪೌಂಡ್‌ ಸಂಪೂರ್ಣ ಕುಸಿದಿದ್ದು ಕಾಂಪೌಂಡ್‌ಗೆ ತಾಗಿದಂತೆ ಶಾಲಾ ಕಟ್ಟಡವಿದ್ದು ಪಕ್ಕದಲ್ಲಿರುವ ಶಾಲಾ ಮೈದಾನ ಕೂಡ ಮಳೆ ನೀರಿನ ಹರಿವಿನಿಂದ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅಲ್ಲದೆ ಕಳೆದ 3 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಶಾಲಾ ಕಟ್ಟಡ ಕೂಡಾ ಕುಸಿಯುವ ಭೀತಿ ಎದುರಾಗಿದೆ. ಕೂಡಲೇ ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶೀಘ್ರ ದುರಸ್ತಿ
ಕೊಂಕಣಾರಬೆಟ್ಟು ಸ.ಕಿ. ಪ್ರಾ. ಶಾಲೆಯ ಕಂಪೌಂಡ್‌ ದುರಸ್ತಿಗೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ 93 ಮೀ. ಉದ್ದದ ಕಂಪೌಂಡ್‌ ನಿರ್ಮಾಣಕ್ಕೆ 2ಲಕ್ಷ 95 ಸಾ.ರೂ. ಹಣ ಇಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಶೀಘ್ರವಾಗಿ ಶಾಲಾ ಕಾಂಪೌಂಡ್‌ ದುರಸ್ತಿ ಕಾರ್ಯ ನಡೆಯಲಿದೆ.
– ಶಶಿಧರ್‌ ಜಿ.ಎಸ್‌. ಕ್ಷೇತ್ರ ಶಿಕ್ಷಾಣಾಧಿಕಾರಿ, ಕಾರ್ಕಳ

ಅಪಾಯ ಖಂಡಿತ
ಶಾಲಾ ಕಾಂಪೌಂಡ್‌ ಇನ್ನೂ ದುರಸ್ತಿಯಾಗದಿರುವುದು ಬೇಸರದ ಸಂಗತಿ. ಕಾಂಪೌಂಡ್‌ನೊಂದಿಗೆ ಶಾಲಾ ಮೈದಾನ ಕೂಡ ಅಪಾಯದಲ್ಲಿದೆ. ಈ ಬಗ್ಗೆ ಸ್ಥಳೀಯಾಡಳಿತ, ಜಿಲ್ಲಾಡಳಿತ ಹಾಗೂ ಸರಕಾರ ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಅಪಾಯ ಖಂಡಿತ.
– ಶ್ರೀಕರ್‌ ಭಾರದ್ವಾಜ್‌, ಸಾಮಾಜಿಕ ಕಾರ್ಯಕರ್ತರು, ಕಬ್ಬಿನಾಲೆ

ಹೆಬ್ರಿ ಉದಯಕುಮಾರ್‌ ಶೆಟ್ಟಿ

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

bike

Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.