ಅಯ್ಯರ್ – ಧವನ್ ಅರ್ಧ ಶತಕದ ಆಟ : ರಾಯಲ್ಸ್ ಗೆಲುವಿಗೆ 162 ರ ಸವಾಲು
Team Udayavani, Oct 14, 2020, 9:11 PM IST
ದುಬೈ : ಟಾಸ್ ಗೆದ್ದು ಬ್ಯಾಟಿಂಗ್ ಬೀಸಿದ ಶ್ರೇಯಸ್ ಪಡೆ ನಿಗದಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿ 162 ರ ಸವಾಲನ್ನು ರಾಜಸ್ಥಾನ್ ತಂಡಕ್ಕೆ ನೀಡಿದೆ.
ಡೆಲ್ಲಿ ಆರಂಭಿಕರಾಗಿ ಬಂದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಜೊತೆಯಾಟ ನೀಡದೆ, ಪೃಥ್ವಿ ಶಾ ಪ್ರಾರಂಭಿಕ ಎಸೆತದಲ್ಲೇ ಆರ್ಚರ್ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲದೆ 2 ರನ್ ಗಳಿಸಿ ಅರ್ಚರ್ ಎಸೆತಕ್ಕೆ ರಾಬಿನ್ ಉತ್ತಪ್ಪ ಕೈಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ತಂಡವನ್ನು ನಾಯಕ ಶ್ರೇಯಸ್ ಹಾಗೂ ಧವನ್ ಜೊತೆಯಾಟದಿಂದ ಸ್ಕೋರ್ ಮುನ್ನಡೆಗೆ ನೆರವಾದರು.
ಶಿಖರ್ ಧವನ್ 6 ಬೌಂಡರಿಯೊಂದಿಗೆ 2 ಸಿಕ್ಸರ್ ದಾಖಲಿಸಿ 57 ರನ್ ಗಳಿಸಿ ಕಾರ್ತಿಕ್ ತ್ಯಾಗಿ ಎಸೆತಕ್ಕೆ ಗೋಪಾಲ್ ಕೈಗೆ ಕ್ಯಾಚ್ ಕೊಟ್ಟು ಔಟ್ ಆದರು, ಬಳಿಕ ಶ್ರೇಯಸ್ ಅಯ್ಯರ್ ಬಿರುಸಿನಿಂದ ಬ್ಯಾಟ್ ಬೀಸುತ್ತಲೇ 3 ಬೌಂಡರಿ 2 ಸಿಕ್ಸರ್ ದಾಖಲಿಸಿ 53 ರನ್ ಮಾಡಿ ತ್ಯಾಗಿ ಎಸೆತಕ್ಕೆ ಅರ್ಚರ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಸಾಗಿದರು.
ಮಾರ್ಕಸ್ ಸ್ಟೋನಿಸ್ ಹಾಗೂ ಅಲೆಕ್ಸ್ ಕ್ಯಾರಿ ಅಂತಿಮ ಓವರ್ ನಲ್ಲಿ ಬಿರುಸಿನಿಂದ ಬ್ಯಾಟ್ ಬೀಸಿ ಸ್ಕೋರ್ ಬೋರ್ಡ್ ಮುಂದುವರೆಸಿದರು. ಡೆಲ್ಲಿ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 161 ಮೊತ್ತ ಪೇರಿಸಿ, 162 ರ ಗುರಿಯನ್ನು ಬಿಟ್ಟು ಕೊಟ್ಟಿದೆ.
ರಾಜಸ್ಥಾನ್ ಪರ ಉತ್ತಮವಾಗಿ ಬೌಲ್ ಮಾಡಿದ ಅರ್ಚರ್ 4 ಓವರ್ ನಲ್ಲಿ 19 ರನ್ ಕೊಟ್ಟು 3 ಪ್ರಮುಖ ವಿಕೆಟ್ ಗಳನ್ನು ಪಡೆದು ಮಿಂಚಿದರು ಜಯದೇವ್ ಉನಾದ್ಕಟ್ 2 ವಿಕೆಟ್ ಗಳನ್ನು ಪಡೆದು ಮಿಂಚಿದರು. ಕಾರ್ತಿಕ್ ತ್ಯಾಗಿ, ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.