ತಿಳಿನೀರಿನ ತೊರೆಯಂತಹ ಜೀವನ ನಮ್ಮದಾಗಲಿ
Team Udayavani, Oct 15, 2020, 6:25 AM IST
ಸಾಂದರ್ಭಿಕ ಚಿತ್ರ
ಕೆಲವು ದಶಕಗಳ ಹಿಂದೆ ನಮ್ಮ ಹಿರಿಯರ ಬದುಕು ಹೇಗಿತ್ತು ಎಂಬುದನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ಅವರದು ಮಂದಗತಿ ಯಿಂದ ಹರಿಯುವ ತೊರೆಯಂತಹ ಜೀವನವಾಗಿತ್ತು. ಯಾವುದರಲ್ಲೂ ಧಾವಂತ ಇಲ್ಲ. ಅವಸರ ಇಲ್ಲ. ಬೆಳಗ್ಗೆ ಬೇಗನೆ ಎದ್ದು ಅವರವರ ಮನೆಯ ಮಟ್ಟದ ಪೂಜೆ ಪುನಸ್ಕಾರ ಮುಗಿಸಿ ಉಪಾಹಾರ. ಬಳಿಕ ದುಡಿಮೆ. ಮಧ್ಯಾಹ್ನ ಊಟ. ಬಳಿಕ ವಿಶ್ರಾಂತಿ. ಆಮೇಲೆ ಮತ್ತೆ ಕೆಲಸ. ರಾತ್ರಿ ಬೇಗನೆ ಊಟ, ನಿದ್ದೆ. ಸಂಜೆಯ ಹೊತ್ತು ನೆರೆಕರೆಯವರೊಂದಿಗೆ ಪಟ್ಟಾಂಗ. ಅಗತ್ಯ ವಿದ್ದರೆ ಮಾತ್ರ ಹೊರಪ್ರಯಾಣ. ತುರ್ತು ಇದ್ದರೆ ಮಾತ್ರ ಹೊರಜಗತ್ತಿನ ಸಂಪರ್ಕ.
ಇದನ್ನು ಇಂದಿನ ನಮ್ಮ ಬದುಕಿನ ಜತೆಗೆ ಹೋಲಿಸಿ. ಅನುಕ್ಷಣವೂ ಧಾವಂತದ ಬದುಕು ನಮ್ಮದು. ದಿನವೂ ಪ್ರಯಾಣ, ಹೊರಜಗತ್ತಿನಲ್ಲಿ ಇರುವುದೇ ಹೆಚ್ಚು. ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಕಡೆ ಆ ಹಳೆಯ ಜೀವನ ಶೈಲಿ ಇದ್ದರೂ ಹೆಚ್ಚಿನೆಲ್ಲ ಕಡೆ ಬದುಕು ಫಾಸ್ಟ್ ಫಾರ್ವರ್ಡ್ ಆದಂತಿದೆ. ಇದರಿಂದ ನಾವು ಕಳೆದು ಕೊಳ್ಳುತ್ತಿರುವುದು ಏನು?
ಹಳೆಯ ಜೀವನ ಶೈಲಿ ಯಲ್ಲಿ ನಮ್ಮ ಬಗ್ಗೆ ನಮಗೆ ಚಿಂತಿಸಲು, ಅಂತರಂಗವನ್ನು ತಿಳಿದುಕೊಳ್ಳಲು, ಆತ್ಮ ವಿಮರ್ಶೆ ಮಾಡಿಕೊಳ್ಳಲು, ನಮ್ಮವರೊಂದಿಗೆ ಹೆಚ್ಚು ಕಾಲ ಕಳೆಯಲು ಅವಕಾಶ ಇತ್ತು. ಇಂದು ಅದು ಕಳೆದುಹೋಗಿದೆ. ನಮಗೆ ನಾವು ಕೊಟ್ಟುಕೊಳ್ಳುವ ಸಮಯ, ಆತ್ಮಾವಲೋಕನ ಬಹಳ ಮುಖ್ಯವಾದದ್ದು. ಭಾರತೀಯ ಅಥವಾ ಪೌರಾತ್ಯ ಜೀವನಶೈಲಿ, ಚಿಂತನಶೈಲಿ, ಅಧ್ಯಾತ್ಮ ದಾರಿಗಳ ಹೂರಣ ತನ್ನ ಒಳಗನ್ನು ತಾನು ನೋಡಿಕೊಳ್ಳುವುದು. ಆಧ್ಯಾತ್ಮಿಕ ಸಾಧನೆಗೆ ಮಾತ್ರವೇ ಅಲ್ಲ; ಸಚ್ಚಾರಿತ್ರ್ಯವುಳ್ಳ, ವಿವೇಕಯುತವಾದ, ಸಕಾರಾತ್ಮಕವಾದ, ಶೀಲವಂತ ಬದುಕಿಗೂ ಇದು ಅಗತ್ಯ.
ಬೌದ್ಧ ಚಿಂತನ ಮಾರ್ಗಗಳಲ್ಲಿ ಒಂದಾದ ತಾವೊದಲ್ಲಿ ಇದಕ್ಕೆ ಸಂಬಂಧಿಸಿದ ಒಂದು ಕತೆಯಿದೆ. ಒಂದು ದಿನ ಒಬ್ಟಾತನಿಗೆ ನಡೆಯುತ್ತಿರುವಾಗ ತನ್ನದೇ ನೆರಳು ಮತ್ತು ಹೆಜ್ಜೆಯ ಸಪ್ಪಳದ ಬಗ್ಗೆ ಬಹಳ ಅಂಜಿಕೆ ಹುಟ್ಟಿಕೊಂಡಿತು. ಭಯಗ್ರಸ್ತನಾದ ಆತ ಸ್ವಲ್ಪ ವೇಗವಾಗಿ ನಡೆಯಲಾರಂಭಿಸಿದ. ನೆರಳು ಕೂಡ ಅಷ್ಟೇ ವೇಗವಾಗಿ ಹಿಂಬಾಲಿಸಿತು, ಹೆಜ್ಜೆಯ ಸಪ್ಪಳವೂ. ಆತ ಓಡಲಾರಂಭಿಸಿದ. ನೆರಳು ಅಟ್ಟಿಸಿಕೊಂಡು ಬಂತು, ಹೆಜ್ಜೆಯ ಸದ್ದು ಜೋರಾಯಿತು. ಓಡಿ ಓಡಿ ಸುಸ್ತಾಗಿ ಆತ ಕುಸಿದುಬಿದ್ದು ಸತ್ತೇ ಹೋದ. ಆತ ಮರದ ಕೆಳಗೆ ಸುಮ್ಮನೆ ಕುಳಿತಿದ್ದರೆ ಏನೂ ಆಗುತ್ತಿರಲಿಲ್ಲ ಎನ್ನುತ್ತದೆ ತಾವೊ ಚಿಂತನ.
ಇನ್ನೂ ಒಂದು ಕಥೆಯಿದೆ. ಕಸಾಯಿ ಗಾರನೊಬ್ಬ ಮಾಂಸ ಕತ್ತರಿಸುತ್ತಿದ್ದ. ಗಿರಾಕಿ ಅವನಲ್ಲಿದ್ದ ಮಚ್ಚನ್ನು ನೋಡಿ, “ತುಂಬಾ ಹಳೆಯ ದಿರಬೇಕಲ್ಲವೆ! ಎಷ್ಟು ಬಾರಿ ಸಾಣೆಗೆ ಹಿಡಿಸಿದ್ದೀರಿ’ ಎಂದು ಪ್ರಶ್ನಿಸಿದ. ಅದಕ್ಕೆ ಕಸಾಯಿ ಗಾರನ ಉತ್ತರ ಮಾರ್ಮಿಕ ವಾಗಿತ್ತು, “ಕಳೆದ 25 ವರ್ಷ ಗಳಿಂದ ಇದನ್ನು ಬಳಸುತ್ತಿದ್ದೇನೆ. ಒಂದು ಬಾರಿಯೂ ಹರಿತಗೊಳಿಸಿಲ್ಲ. ಕತ್ತರಿಸುವಾಗ ಮಾಂಸದ ತುಂಡಿನ ನಡುವೆ ಅದರಷ್ಟಕ್ಕೆ ಅದು ದಾರಿ ಹುಡುಕಿಕೊಳ್ಳಲು ಬಿಡುತ್ತೇನೆ. ಗಟ್ಟಿ ಮಾಂಸ ಅಥವಾ ಎಲುಬಿನ ಭಾಗ ಸಿಕ್ಕಿದಾಗ ಒಂದಷ್ಟು ನಿಧಾನ ಮಾಡುತ್ತೇನೆ, ಕ್ಷಣಮಾತ್ರದಲ್ಲಿ ಮಾಂಸವೇ ಮಚ್ಚಿನ ಅಲಗಿನ ಮುಂದೆ ಹೋಳಾಗಿ ಬಿಡುತ್ತದೆ’.
ನಾಗಾಲೋಟದ ಬದುಕು ಬೇಗನೆ ಮುಗಿದುಹೋದೀತು. ದಿನದಲ್ಲಿ ಸ್ವಲ್ಪ ಕಾಲವಾದರೂ ನಮ್ಮ ಅಂತರಂಗದ ಪಿಸುನುಡಿಗೆ ಕಿವಿಗೊಡುವ, ನಮ್ಮೊಳಗನ್ನು ತಿಳಿಯುವ, ನಮ್ಮವರೊಂದಿಗೆ ಕಾಲ ಕಳೆಯುವ ವ್ಯವಧಾನ ಇರಲಿ. ಸುಂದರವಾದ ಬದುಕು ಅದರಷ್ಟಕ್ಕೆ ಅದು ಅರಳಿಕೊಳ್ಳಲಿ.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.