ಅಂಗಾರಕನಲ್ಲಿವೆ ಸರೋವರಗಳು; ಇಟಲಿಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಉಲ್ಲೇಖ
Team Udayavani, Oct 15, 2020, 5:47 AM IST
ಸಾಂದರ್ಭಿಕ ಚಿತ್ರ
ಲಂಡನ್: ಮಂಗಳ ಗ್ರಹದ ದಕ್ಷಿಣ ಧ್ರುವದ ಹಿಮಚಾದರದ ಕೆಳಗೆ ಸರೋವರವೊಂದು ಇರಬಹುದು ಎಂದು 2018ರಲ್ಲಿ ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ, ಪೂರಕ ದತ್ತಾಂಶಗಳ ಕೊರತೆಯಿಂದಾಗಿ ಈ ವಿಚಾರ ಅಸ್ಪಷ್ಟವಾಗಿಯೇ ಉಳಿದಿತ್ತು. ಈಗ ಇಟಲಿಯ ಸಂಶೋಧನ ವರದಿಯೊಂದು ಆ ಕೆಂಪುಗ್ರಹದಲ್ಲಿ ಬೃಹತ್ ಸರೋವರವಿದೆ ಎನ್ನುವುದಕ್ಕೆ ಪೂರಕ ಅಂಶಗಳನ್ನು ವೈಜ್ಞಾನಿಕ ವಲಯದೆದುರು ತೆರೆದಿಟ್ಟಿದೆ. ಅಷ್ಟೇ ಅಲ್ಲದೇ, ಆ ಸರೋವರದ ಸನಿಹದಲ್ಲೇ ಉಪ್ಪುನೀರಿನ ಮೂರು ಚಿಕ್ಕ ಕೊಳಗಳೂ ಇವೆ ಎನ್ನುತ್ತಿದೆ ಈ ವರದಿ.
ಮಂಗಳ ಗ್ರಹವು ಮಾನವನಿಗೆ ವಾಸ ಯೋಗ್ಯವೇ ಎನ್ನುವ ಕುರಿತು ದಶಕಗಳಿಂದ ವೈಜ್ಞಾನಿಕ ವಲಯ ಸಂಶೋಧನೆಯಲ್ಲಿ ತೊಡಗಿದ್ದು, ಈ ಕಾರಣದಿಂದಾಗಿಯೇ ಜಲಮೂಲಗಳನ್ನು ಪತ್ತೆ ಮಾಡುವುದು ಮಹತ್ವ ಪಡೆದಿದೆ. ಈಗಿನ ಸಂಶೋಧನಾ ವರದಿಯು ಇನ್ನು ಮುಂದೆ ವೈಜ್ಞಾನಿಕ ವಲಯವು ಮಂಗಳನ ದಕ್ಷಿಣ ಧ್ರುವದತ್ತ ದೃಷ್ಟಿ ಹರಿಸುವಂತೆ ಮಾಡಲಿದೆ.
ಮಂಗಳ ಗ್ರಹದ ದಕ್ಷಿಣ ಧ್ರುವವು ಅತ್ಯಂತ ಶೀತಲವಾಗಿರುವ ಕಾರಣ, ಹಿಮಚಾದರದ ಅಡಿಯಲ್ಲಿ ಮಡುಗಟ್ಟಿದ ನೀರು ಇರಲು ಸಾಧ್ಯವೇ ಎನ್ನುವ ಪ್ರಶ್ನೆ ಈ ಹಿಂದೆ ಉದ್ಭವವಾಗಿತ್ತು. ಈಗಿನ ಸಂಶೋಧನ ವರದಿಯು 2012-2019ರವರೆಗಿನ ದಕ್ಷಿಣ ಧ್ರುವದ ಮೇಲಿನ 134 ಅವಲೋಕನಗಳ ಬೃಹತ್ ದತ್ತಾಂಶವನ್ನು ಬಳಸಿ ಈ ನಿರ್ಣಯಕ್ಕೆ ಬಂದಿದೆ. 2018ರ ಅಧ್ಯಯನವು ಕೇವಲ 29 ಆಬ್ಸರ್ವೇಷನ್‌ಗಳನ್ನಷ್ಟೇ ಅವ ಲಂಬಿಸಿದ್ದ ಕಾರಣ, ಸ್ಪಷ್ಟತೆ ಮೂಡಿರಲಿಲ್ಲ.
2018ರಲ್ಲಿ ಈ ಬಗ್ಗೆ ಸಂದೇಹ ಇದ್ದರೂ ದಾಖಲೆಗಳಿರಲಿಲ್ಲ
ಜಲ ಮೂಲದ ಪತ್ತೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವದ್ದು
2012-2019ರ ವರೆಗಿನ ಮಾಹಿತಿಗಳ ಸತತ ಅಧ್ಯಯನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್ ಹೇಳಿದ್ದೇನು?
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.