ಶುರುವಾಗಿದೆ ಮತ್ತೂಂದು ಬೃಹತ್ ಟನೆಲ್
Team Udayavani, Oct 16, 2020, 5:45 AM IST
ಪ್ರಾತಿನಿಧಿಕ ಚಿತ್ರ
ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರ ಇರುವ ಅಟಲ್ ಟನೆಲ್ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಿದೆ. ಅದೇ ಮಾದರಿಯ ಮತ್ತೂಂದು ಸುರಂಗ ನಿರ್ಮಾಣ ಕಾರ್ಯ ಗುರುವಾರ ಶುರುವಾಗಿದೆ. ಶ್ರೀನಗರ ಕಣಿವೆಯಿಂದ ಲೇಹ್‌ಗೆ ವರ್ಷವಿಡೀ ಅಡೆ ತಡೆಯಲ್ಲದೆ ಸಂಪರ್ಕ ಸಾಧಿಸಲು ಈ ಯೋಜನೆ ನೆರವಾಗಲಿದೆ. ಇದರಿಂದ 3.5 ಗಂಟೆ ಬೇಕಾಗುತ್ತಿದ್ದ ಅವಧಿ 15 ನಿಮಿಷಗಳಿಗೆ ಇಳಿಯಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾಮಗಾರಿ ಉದ್ಘಾಟಿಸಿದ್ದಾರೆ. ಇದೇ ಮಾರ್ಗದಲ್ಲಿ ಝೆಡ್ ಮಾರ್ ಟನೆಲ್ ಕೂಡ 2,379 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, 2021 ಜೂನ್‌ಗೆ ಮುಕ್ತಾಯಗೊಳ್ಳಲಿದೆ.
ಎಲ್ಲಿಂದ ಶುರು ಮತ್ತು ಮುಕ್ತಾಯ?
ಟನೆಲ್ ಸೋನ್‌ಮಾರ್ಗ್‌ನಿಂದ ಶುರುವಾಗಿ ಕಾರ್ಗಿಲ್‌ನ ದ್ರಾಸ್ ಪಟ್ಟಣದಲ್ಲಿ ಮುಕ್ತಾಯ
ಏನು ಪ್ರಯೋಜನ?
ಶ್ರೀನಗರದಿಂದ ಲೇಹ್ ಮೂಲಕ ದ್ರಾಸ್, ಕಾರ್ಗಿಲ್‌ಗಳಿಗೆ ನಿರಂತರ ಸಂಪರ್ಕ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಬೆಸೆಯಲಿದೆ.
ಹಿಮಪಾತದಿಂದ ರಸ್ತೆ ಬಂದ್ ಆಗುವುದನ್ನು ತಪ್ಪಿಸಲಿದೆ.
ಲಡಾಖ್, ಗಿಲ್ಗಿಟ್, ಬಾಲಿಸ್ಥಾನ್‌ಗಳಲ್ಲಿನ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸೇನಾ ಪಡೆಗಳ ಸಂಚಾರಕ್ಕೂ ಅನುಕೂಲ.
ಸ್ಥಳೀಯರಿಗೆ ಹೆಚ್ಚಿನ ರೀತಿಯಲ್ಲಿ ಉದ್ಯೋಗಾವಕಾಶ
ಭದ್ರತಾ ವ್ಯವಸ್ಥೆಗಳು ಹೇಗೆ ಇರಲಿವೆ?
ಪ್ರತೀ 750 ಮೀಟರ್‌ಗೆ ಒಂದರಂತೆ ತುರ್ತು ರಸ್ತೆ.
ಪಾದಚಾರಿ ಮಾರ್ಗ ಮತ್ತು ತುರ್ತು ದೂರವಾಣಿ ವ್ಯವಸ್ಥೆ.
ವಿಶೇಷ ರೀತಿಯ ಸಂಚಾರ ನಿಯಂತ್ರಣ ಲೈಟಿಂಗ್ ವ್ಯವಸ್ಥೆ.
ಅಲ್ಲಲ್ಲಿ ಸಿಸಿಟಿವಿ ಕೆಮರಾಗಳ ಅಳವಡಿಕೆ.
ಬೆಂಕಿ ಮುನ್ನೆಚ್ಚರಿಕೆ ನೀಡುವ ಅಲರಾಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.