ಭರವಸೆ ಮೂಡಿಸಿದ ಪ್ರೇಕ್ಷಕ

ರೀ ರಿಲೀಸ್‌ ಚಿತ್ರಗಳಿಗೆ ಪ್ರೇಕ್ಷಕ ಜೈ, ಶೀಘ್ರಚೇತರಿಕೆ ನಿರೀಕ್ಷೆಯಲ್ಲಿ ಕನ್ನಡ ಚಿತ್ರರಂಗ

Team Udayavani, Oct 16, 2020, 12:53 PM IST

suchitra-tdy-1

ಮೊದಲ ದಿನದ ಮೊದಲ ಪ್ರದರ್ಶನ ಹೇಗಿರುತ್ತದೆ, ಜನ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ, ಬರೋಬ್ಬರಿ ಏಳು ತಿಂಗಳ ನಂತರ ಚಿತ್ರಮಂದಿರಗಳು ತೆರೆಯುತ್ತಿವೆ, ಅದೂ ರೀ ರಿಲೀಸ್‌ ಸಿನಿಮಾದೊಂದಿಗೆ …. ಸಹಜವಾಗಿಯೇ ಸಿನಿಮಾ ಮಂದಿಗೆ ಒಂದುಕುತೂಹಲವಿತ್ತು. ಏಳು ತಿಂಗಳ ನಂತರ ಆರಂಭವಾಗಿರುವ ಸಿನಿಮಾ ಪ್ರದರ್ಶನಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು. ಆದರೆ, ಮೊದಲ ಅಂದರೆ ಗುರುವಾರ ಮಲ್ಟಿಪ್ಲೆಕ್ಸ್‌ಗಳಲ್ಲಿ ತೆರೆಕಂಡ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಮರುಬಿಡುಗಡೆ ಸಿನಿಮಾಗಳನ್ನು ಪ್ರೇಕ್ಷಕ ಮತ್ತೂಮ್ಮೆ ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳಲು ಉತ್ಸಾಹದಿಂದಲೇ ಚಿತ್ರ ಮಂದಿರಗಳಿಗೆ ಬಂದಿದ್ದಾನೆ. ಪರಿಣಾಮವಾಗಿ ಶೇ 30-40 ರಷ್ಟು ಸೀಟುಗಳು ಭರ್ತಿಯಾಗಿವೆ. ಸರ್ಕಾರ ಶೇ50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಕೊಟ್ಟಿದೆ. ಈ ನಿಟ್ಟಿನಲ್ಲಿ ಮೊದಲ ದಿನದ ಪ್ರದರ್ಶನಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿತ್ತೆಂದರೆ ತಪ್ಪಲ್ಲ. ಮುಖ್ಯವಾಗಿ ಹೊಸ ಸಿನಿಮಾಗಳಿಗಾದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಈಗ ರೀ ರಿಲೀಸ್‌ ಆಗಿರುವ ಸಿನಿಮಾಗಳು ಹಲವು ಬಾರಿ ಟಿವಿ, ಓಟಿಟಿಗಳಲ್ಲಿ ಪ್ರದರ್ಶನವಾಗಿವೆ. ಹಾಗಾಗಿ, ಮೊದಲ ದಿನದ ಮೊದಲ ಪ್ರತಿಕ್ರಿಯೆ ಚಿತ್ರೋದ್ಯಮಿಗಳಲ್ಲಿ ಭರವಸೆ ಮೂಡಿಸಿ ರೋದಂತೂ ಸುಳ್ಳಲ್ಲ.

ಮುಂದಿನ ದಿನಗಳಲ್ಲಿ ಹೊಸ ಸಿನಿಮಾ ಅಥವಾ ಸ್ಟಾರ್‌ ಸಿನಿಮಾ ರಿಲೀಸ್‌ ಆದರೆ, ಚಿತ್ರರಂಗ ಬೇಗನೇ ಚೇತರಿಸಿಕೊಳ್ಳ ಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.ಎರಡು ದಿನಗಳ ಹಿಂದೆಯೇ ಮಲ್ಟಿಪ್ಲೆಕ್ಸ್‌ಗಳ ವೆಬ್‌ ತಾಣಗಳಲ್ಲಿ ಆನ್‌ಲೈನ್‌ ಸಿನಿಮಾ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದ್ದು, ಅದರಂತೆ ಪ್ರೇಕ್ಷಕರು ಆನ್‌ಲೈನ್‌ ಮೂಲಕ ಟಿಕೆಟ್‌ಗಳನ್ನು ಖರೀದಿಸಿ ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ರಾಜ್ಯದ ಪ್ರಮುಖ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಗಳು ಅ.16ರ ಶುಕ್ರವಾರದಿಂದ ಸಿನಿಮಾಗಳ ಪ್ರದರ್ಶನಕ್ಕೆ ಅಣಿಯಾಗಿದ್ದರೆ, ಇನ್ನುಕೆಲವು ಥಿಯೇಟರ್‌ಗಳು ಒಂದು ವಾರದ ಬಳಿಕ ತೆರೆಯಲು ಸಿದ್ಧತೆ ಮಾಡಿಕೊಂಡಿವೆ.

ಐನಾಕ್ಸ್‌, ಪಿವಿಆರ್‌, ಸತ್ಯಂ ಸಿನಿಮಾಸ್‌ಮೊದಲಾದ ರಾಜ್ಯದ ಪ್ರಮುಖ ಮಲ್ಟಿಪ್ಲೆಕ್ಸ್‌ಚಿತ್ರಮಂದಿರಗಳಲ್ಲಿ ಮೊದಲ ದಿನವೇ ನಿರೀಕ್ಷೆಗಿಂತಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಿಗ್‌ ಸ್ಕ್ರೀನ್‌ಗಳತ್ತ ಮುಖ ಮಾಡಿದ್ದರಿಂದ ಮಲ್ಟಿಪ್ಲೆಕ್ಸ್‌ ಮಂದಿ ಕೂಡ ಖುಷಿಯಾಗಿದ್ದರು. “ಶಿವಾಜಿ ಸುರತ್ಕಲ್‌’, “ಕಾಣದಂತೆ ಮಾಯವಾದನು’, “ಲವ್‌ ಮಾಕ್ಟೇಲ್‌’ ಚಿತ್ರ ಹಾಗೂ ಪರಭಾಷೆಯಕೆಲವು ಚಿತ್ರಗಳು ಗುರುವಾರವೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಕಂಡಿವೆ. ಸಹಜವಾಗಿಯೇ ಬೆಳಗಿನ ಪ್ರದರ್ಶನಕ್ಕಿಂತ ಮಧ್ಯಾಹ್ನ, ಮಧ್ಯಾಹ್ನಕ್ಕಿಂತ ಸಂಜೆಯ ಪ್ರದರ್ಶನಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿತ್ತು.

 

ಈ ಬಗ್ಗೆ ಮಾತನಾಡಿದ ಐನಾಕ್ಸ್‌ನ ಪಿ.ಆರ್‌.ಓ ಜ್ಯೋತಿ ಕುಮಾರ್‌, “ಮೊದಲ ದಿನ ನಾವು ಅಂದುಕೊಂಡಿರುವುದಕ್ಕಿಂತ ಒಳ್ಳೆಯ ಓಪನಿಂಗ್‌ ಸಿಕ್ಕಿದೆ. ಈಗಾಗಲೇ ರಿಲೀಸ್‌ ಆಗಿರುವ ಸಿನಿಮಾಗಳನ್ನರೀ-ರಿಲೀಸ್‌ ಮಾಡಿದ್ದರೂ, ನಾವುನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಡಿಯನ್ಸ್‌ ಸಿನಿಮಾ ನೋಡುವುದಕ್ಕೆ ಬಂದಿದ್ದರು. ಮಾರ್ನಿಂಗ್‌ ಶೋಗಳಲ್ಲಿ ಆಡಿಯನ್ಸ್‌ಕೊರತೆಯಿದ್ದರೂ, ಆನಂತರದ ಶೋಗಳಲ್ಲಿ ಚೇತರಿಕೆ ಕಂಡುಬಂದಿತು.

ಸಂಜೆಯ ಹೊತ್ತಿಗೆ ನಮ್ಮ ಬಹುತೇಕ ಸ್ಕ್ರೀನ್‌ಗಳು ಶೇಕಡಾ40ರಷ್ಟು ಪ್ರೇಕ್ಷಕರಿಂದ ತುಂಬಿತ್ತು. ಮೊದಲ ದಿನ ಇಂಥದ್ದೊಂದು ಪ್ರತಿಕ್ರಿಯೆ ನೋಡಿದ್ರೆ, ಇನ್ನು ಒಂದೆರಡು ವಾರಗಳಲ್ಲಿ ಆಡಿಯನ್ಸ್‌ ಮೊದಲಿನಂತೆ ಬರಬಹುದು’ ಎಂದು ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಆದರೆ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ಮುಂದೆಕಂಡುಬಂದ ಈ ವಾತಾವರಣ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳ ಮುಂದೆ ಕಂಡು ಬಂದಿಲ್ಲ. ಯಾವುದೇ ಹೊಸ ಸಿನಿಮಾಗಳು, ಅದರಲ್ಲೂ ಸ್ಟಾರ್‌ ನಟರ ಯಾವುದೇ ಸಿನಿಮಾಗಳು ಬಿಡುಗಡೆಯಾಗದಿದ ªರಿಂದ, ಬಹುತೇಕ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಅ.15ರಂದು ತೆರೆಯಲಿಲ್ಲ. ಕೆಲವು ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ ದುರಸ್ತಿ ಮತ್ತು ಸ್ವತ್ಛತಾಕಾರ್ಯಗಳು ನಡೆಯುತ್ತಿದ್ದು, ಒಂದಷ್ಟು ಚಿತ್ರಮಂದಿರಗಳು ಇಂದು ಹಾಗೂಇನ್ನೊಂದಿಷ್ಟು ಚಿತ್ರಮಂದಿರಗಳಲ್ಲಿ ವಾರಾಂತ್ಯದಲ್ಲಿ ಪ್ರದರ್ಶನಗಳು ಪ್ರಾರಂಭವಾಗುವ ಸಾಧ್ಯತೆ ಇದೆ.

ಒಟ್ಟಾರೆ ಕಳೆದ ಮಾರ್ಚ್‌ ಎರಡನೇ ವಾರದಿಂದ ಸಂಪೂರ್ಣವಾಗಿ ಬಂದ್‌ ಆಗಿದ್ದ ಮಲ್ಟಿಪ್ಲೆಕ್ಸ್‌ ಮತ್ತು ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು, ಬರೋಬ್ಬರಿ ಏಳು ತಿಂಗಳ ಬಳಿಕ ಹೊಸ ಜೋಶ್‌ನಲ್ಲಿ ಸಿನಿಮಾಗಳು ಆರಂಭವಾಗುತ್ತಿದ್ದು, ಮುಂದೆ ಪ್ರೇಕ್ಷಕ ಪ್ರಭುಗಳು ನಿಧಾನವಾಗಿ ಮತ್ತೆ ಸಿಲ್ವರ್‌ ಸ್ಕ್ರೀನ್‌ಗಳತ್ತ ಮುಖ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದೆ ಚಿತ್ರರಂಗ. ­

ಒಬ್ಬ ವಿತರಕನಾಗಿ ನಾನುಖುಷಿಯಾಗಿದ್ದೇನೆ. ಏಳು ತಿಂಗಳ ನಂತರ ಚಿತ್ರಮಂದಿರಗಳು ತೆರೆಯುತ್ತಿವೆ. ಮೊದಲ ದಿನ ಮಲ್ಟಿಪ್ಲೆಕ್ಸ್‌ಗಳಲ್ಲಿನ ಪ್ರತಿಕ್ರಿಯೆ ನಿಜಕ್ಕು ಆಶಾದಾಯಕವಾಗಿದೆ. ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಚಿತ್ರಮಂದಿರದ ನೂರು ಸೀಟುಗಳಲ್ಲಿಕೇವಲ 50ಕ್ಕಷ್ಟೇ ಅವಕಾಶ ನೀಡಲಾಗಿತ್ತು. ಇದರಲ್ಲಿ 46 ಸೀಟುಗಳು ಭರ್ತಿಯಾಗಿದ್ದವು. ಬಿಡುಗಡೆಯಾದ “ಲವ್‌ ಮಾಕ್ಟೇಲ್‌’ ಸೇರಿದಂತೆ ಎಲ್ಲಾ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೀ ರಿಲೀಸ್‌ ಚಿತ್ರಗಳಿಗೆ ಸಿಕ್ಕ ಈ ಪ್ರತಿಕ್ರಿಯೆ ಮುಂದಿನ ದಿನದಲ್ಲಿ ಜನ ಚಿತ್ರಮಂದಿರಕ್ಕೆ ಬರುವ ಸೂಚನೆಯಾಗಿದೆ. ಜಾಕ್‌ ಮಂಜು, ವಿತರಕ

ಮೊದಲ ದಿನ ನಾವು ಅಂದುಕೊಂಡಿರುವುದಕ್ಕಿಂತ ಒಳ್ಳೆಯ ಓಪನಿಂಗ್‌ ಸಿಕ್ಕಿದೆ. ಈಗಾಗಲೇ ರಿಲೀಸ್‌ ಆಗಿರುವ ಸಿನಿಮಾಗಳನ್ನ ರೀ-ರಿಲೀಸ್‌ ಮಾಡಿದ್ದರೂ, ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಡಿಯನ್ಸ್‌ ಸಿನಿಮಾ ನೋಡುವುದಕ್ಕೆ ಬಂದಿದ್ದರು. ಮಾರ್ನಿಂಗ್‌ ಶೋಗಳಲ್ಲಿ ಆಡಿಯನ್ಸ್‌ ಕೊರತೆಯಿದ್ದರೂ, ಆನಂತರದ ಶೋಗಳಲ್ಲಿ ಚೇತರಿಕೆಕಂಡುಬಂದಿತು. ಪಿಆರ್‌ಓ, ಪಿವಿಆರ್‌

ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರ ನಿಗದಿಪಡಿಸಿದ್ದ ಸೀಟುಗಳ ಪೈಕಿ ಶೇಕಡಾ ಮೂವತ್ತರಷ್ಟು ಸೀಟುಗಳು ಭರ್ತಿಯಾಗಿದ್ದವು. ಮೊದಲ ದಿನ ಈಗಾಗಲೇ ರಿಲೀಸ್‌ ಆಗಿದ್ದಕನ್ನಡ, ತಮಿಳು, ಹಿಂದಿ ಸಿನಿಮಾಗಳನ್ನು ಪ್ರದರ್ಶಿಸಲಾಗಿದ್ದು, ರೀ-ರಿಲೀಸ್‌ ಸಿನಿಮಾಗಳನ್ನು ಆಡಿಯನ್ಸ್‌ ನೋಡಿ ಎಂಜಾಯ್‌ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಡಿಯನ್ಸ್‌ ಬರುತ್ತಾರೆಂಬ ವಿಶ್ವಾಸವಿದೆ. ಐನಾಕ್ಸ್‌ ವ್ಯವಸ್ಥಾಪಕರು, ಲಿಡೋ ಮಾಲ್‌

 

-ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.