ಮೊರಾರ್ಜಿ ಶಾಲೆ ವಿದ್ಯಾರ್ಥಿಗಳ ಕಲಿಕೆಗೆ ಡಿಇಟಿ ನೆರವು

Team Udayavani, Oct 16, 2020, 3:54 PM IST

huballi-tdy-2

‌ಹುಬ್ಬಳ್ಳಿ: ದೇಶಪಾಂಡೆ ಪ್ರತಿಷ್ಠಾನದ ದೇಶಪಾಂಡೆ ಎಜ್ಯುಕೇಶನ್‌ ಟ್ರಸ್ಟ್‌ (ಡಿಇಟಿ)ಮೊರಾರ್ಜಿ ಶಾಲೆಗಳ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಬೋಧನೆ ಪ್ರಯೋಗ ಕೈಗೊಂಡಿದ್ದು, ವಾರದ ಐದು ದಿನ ವಿವಿಧ ವಿಷಯಗಳನ್ನು ಬೋಧಿಸಲಾಗುತ್ತಿದ್ದು,ಈ ಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ನಡೆಯುತ್ತಿಲ್ಲವಾಗಿವೆ. ವಿವಿಧ ಶಾಲೆಗಳು ಆನ್‌ ಲೈನ್‌ ಮೂಲಕ ಬೋಧನೆ ಆರಂಭಿಸಿವೆ. ವಿವಿಧಗ್ರಾಮಗಳಲ್ಲಿ ಇರುವ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಇಂತಹ ಸೌಲಭ್ಯ ದೊರೆತಿರಲಿಲ್ಲ. ಮೊರಾರ್ಜಿ ಶಾಲೆ ಮಕ್ಕಳಿಗೆ ಬೋಧನೆ ನಿಟ್ಟಿನಲ್ಲಿ ಡಿಇಟಿ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಡಿಇಟಿಯ ಐವರು ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಗಳಿಗೆ ಪೂರಕವಾಗಿ ಬೋಧಿಸುತ್ತಿದ್ದು, ಪ್ರತಿ ದಿನವೂ ಒಂದು ತಾಸು ಬೋಧಿಸಲಾಗುತ್ತಿದೆ.

400 ವಿದ್ಯಾರ್ಥಿಗಳಿಗೆ ಬೋಧನೆ: ದೇಶಪಾಂಡೆ ಎಜ್ಯುಕೇಶನ್‌ ಟ್ರಸ್ಟ್‌ ಧಾರವಾಡ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅನುಮತಿ ಯೊಂದಿಗೆ ಆನ್‌ಲೈನ್‌ ಮೂಲಕ ಬೋಧನೆಗೆ ಮುಂದಾಗಿದೆ. ಸುಮಾರು 400 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭ್ಯವಾಗುತ್ತಿದೆ. ವಿದ್ಯಾರ್ಥಿಗಳ ಆನ್‌ಲೈನ್‌ ಬೋಧನೆ, ಸ್ಕಿಲ್‌ ಇನ್‌ ವಿಲೇಜ್‌ ಯೋಜನೆ ಇನ್ನಿತರ ಬಳಕೆಗೆ ಝೂಮ್‌ ಆ್ಯಪ್‌ ಬಳಕೆ ಹಿನ್ನೆಲೆಯಲ್ಲಿ ದೇಶಪಾಂಡೆ ಪ್ರತಿಷ್ಠಾನ ಗೋಕುಲ ರಸ್ತೆಯಲ್ಲಿನ ದೇಶಪಾಂಡೆ ಎಜ್ಯುಕೇಶನ್‌ ಟ್ರಸ್ಟ್‌ ಕಟ್ಟಡದಲ್ಲಿಅತ್ಯಾಧುನಿಕ ಸ್ಟುಡಿಯೋ ಆರಂಭಿಸಿದ್ದು, ಅದರ ಮೂಲಕವೇ ಬೋಧನಾ ಕಾರ್ಯ ಕೈಗೊಳ್ಳಲಾಗುತ್ತಿದೆ.ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಜತೆಗೆ ವಿದ್ಯಾರ್ಥಿಗಳು ಪ್ರಶ್ನೆ ಕೇಳುವ, ಸಂದೇಹಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲೂ ಅವಕಾಶ ನೀಡಲಾಗಿದೆ. ಜತೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ, ಚಟುವಟಿಕೆ ಆಧಾರಿತ ಕಲಿಕೆ, ಮೌಲ್ಯಾಂಕನ ಕೈಗೊಳ್ಳಲಾಗುತ್ತಿದೆ. ಸೋಮವಾರ ಕನ್ನಡ ವಿಷಯ ಬೋಧಿಸಲಾಗುತ್ತಿದೆ. ಮಂಗಳವಾರ ಪರಿಸರ ವಿಜ್ಞಾನ, ಬುಧವಾರ ಗಣಿತ, ಗುರುವಾರ ಇಂಗ್ಲಿಷ್‌, ಶುಕ್ರವಾರ ಸಾಮಾನ್ಯ ಜ್ಞಾನ ಕುರಿತಾಗಿ ಬೋಧಿಸಲಾಗುತ್ತಿದೆ. ಪ್ರತಿ ದಿನ ಆಯಾ ವಿಷಯದ ಶಿಕ್ಷಕರು ನಿಗದಿಯಾದ ದಿನದಂದು ಬೆಳಿಗ್ಗೆ 11:00ರಿಂದ 12:00 ಗಂಟೆವರೆಗೆ ಬೋಧಿಸುತ್ತಿದ್ದಾರೆ.

ದೇಶಪಾಂಡೆ ಎಜ್ಯುಕೇಶನ್‌ ಟ್ರಸ್ಟ್‌ನ ಸ್ಟುಡಿಯೋದಿಂದ ಶಿಕ್ಷಕರು ಕೈಗೊಳ್ಳುವ ಬೋಧನೆ ಶಾಲೆಗಳಲ್ಲಿ ನಡೆಯುವ ಬೋಧನೆಯಂತೆಯೇ ಇರುತ್ತದೆ. ಶಿಕ್ಷಕರು ಬೋರ್ಡ್‌ ಮೇಲೆ ಬರೆ ಯುವ ಮೂಲಕ ವಿಷಯ ಮನನ ಕಾರ್ಯ ಮಾಡುತ್ತಿದ್ದು, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ವೀಕ್ಷಿಸಬಹುದಾಗಿದೆ.

ಧಾರವಾಡ ತಾಲೂಕಿನಲ್ಲಿ ಕೈಗೊಳ್ಳಲಾದ ಮೊರಾರ್ಜಿ ಶಾಲೆ ವಿದ್ಯಾರ್ಥಿಗಳಿಗೆ ಬೋಧನೆ ಪ್ರಯೋಗಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ. ಇತರೆಕಡೆಯ ಮೊರಾರ್ಜಿ ಶಾಲೆ ವಿದ್ಯಾರ್ಥಿಗಳು,ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಯಸಿದರೆಅಲ್ಲಿಗೂ ಬೋಧನೆ ಸೇವೆ ಒದಗಿಸಲು ದೇಶಪಾಂಡೆ ಎಜ್ಯುಕೇಶನ್‌ ಟ್ರಸ್ಟ್‌ ಸಿದ್ಧವಾಗಿದೆ. ನಾವು ಕೈಗೊಳ್ಳುವ ಆನ್‌ಲೈನ್‌ ಶಿಕ್ಷಣಕ್ಕೆ ಮೊರಾರ್ಜಿ ಶಾಲೆ ವಿದ್ಯಾರ್ಥಿಗಳು ಹೊಂದಿ ಕೊಂಡಿದ್ದು, ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕನ್ನಡ-ಆಂಗ್ಲ ಭಾಷೆಗಳ ವ್ಯಾಕರಣ ಮನನ ಮಾಡಲಾಗುತ್ತಿದೆ. ಬೋಧಿಸುವ ವಿಷಯದ ಮೇಲೆ ಏನಾದರೂ ಸಂಶಯ ಇದ್ದರೆ, ಪ್ರಶ್ನೆಗಳಿದ್ದರೆ ವಿದ್ಯಾರ್ಥಿಗಳು ಕೇಳುತ್ತಿದ್ದು ಅವುಗಳನ್ನು ಪರಿಹರಿಸಲಾಗುತ್ತಿದೆ ಎಂಬುದು ಶಿಕ್ಷಕಿಯರಾದ ಸಕ್ಕುಬಾಯಿ ಜೆ. ಹಾಗೂ ಅಫ್ಶಾನ್‌ ಖಾಜಿ ಅವರ ಅನಿಸಿಕೆ.

ಟಾಪ್ ನ್ಯೂಸ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.