ಮಹಾಲಿಂಗಪುರದಲ್ಲಿ ಕತ್ತೆಗಳ ಹಾವಳಿ

ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿ

Team Udayavani, Oct 16, 2020, 4:01 PM IST

bk-tdy-1

ಮಹಾಲಿಂಗಪುರ: ಪಟ್ಟಣದಲ್ಲಿ ಬಿಡಾಡಿ ಕತ್ತೆಗಳ ಹಾವಳಿ ಹೆಚ್ಚಾಗಿದ್ದು,ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಕತ್ತೆಗಳ ಹಾವಳಿ ಹೆಚ್ಚಾಗಿದ್ದರೂ ಸಹ ಪುರಸಭೆ ಅಧಿ ಕಾರಿಗಳು ಗಮನಹರಿಸದಿರುವುದು ಸಾರ್ವಜನಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಚನ್ನಮ್ಮ ವೃತ್ತ, ಅಷ್ಟಗಿ ಚಿತ್ರಮಂದಿರ, ಗಾಂಧಿ ವೃತ್ತ, ಅಂಬೇಡ್ಕರ್‌ ವೃತ್ತ, ಜವಳಿ ಬಜಾರ, ಡಬಲ್‌ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೇ ಕತ್ತೆಗಳ ಆವಾಸ ತಾಣವಾಗಿದೆ. ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಮಧ್ಯದಲ್ಲೇ ಬಿಡಾಡಿ ಕತ್ತೆಗಳು ನಿಲ್ಲುತ್ತಿರುವುದು ಹಾಗೂ ಮಲಗಿಕೊಳ್ಳುತ್ತಿರುವದರಿಂದಗಿ ದ್ವಿಚಕ್ರ ವಾಹನ ಸೇರಿದಂತೆ ಪ್ರತಿಯೊಂದು ಬೃಹತ್‌ ವಾಹನ ಸವಾರರಿಗೂ ಕಿರಿಕಿರಿಯುಂಟು ಮಾಡುತ್ತಿವೆ. ಜತೆಗೆ ರಸ್ತೆಯ ತಿರುವುಗಳಲ್ಲಿ ಬರುವ ವಾಹನ ಸವಾರರು, ಎಲ್ಲಿ ಕತ್ತೆಗಳು ಅಡ್ಡ ಬರುತ್ತವೆಯೋ ಎಂಬ ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಈ ಕತ್ತೆಗಳು ನೆರೆಯ ಚಿಮ್ಮಡ ಗ್ರಾಮ ಮತ್ತು ರಬಕವಿ-ಬನಹಟ್ಟಿ ನಗರಗಳ ಖಾಸಗಿ ವ್ಯಕ್ತಿಗಳಿಗೆ ಸೇರಿವೆ. ಕತ್ತೆಗಳ ಮಾಲೀಕರು ಪ್ರತಿವರ್ಷ ರಬಕವಿ-ಬನಹಟ್ಟಿ ಭಾಗಗಳಲ್ಲಿನ ಇಟ್ಟಿಗೆ ತಯಾರಿಕೆಯ ಭಟ್ಟಿಗಳಲ್ಲಿ ಮತ್ತು ರಬಕವಿ-ಬನಹಟ್ಟಿ, ರಾಮಪುರ ಭಾಗದಲ್ಲಿನ ಇಕ್ಕಾಟದ ಪ್ರದೇಶಗಳಲ್ಲಿ ಇಟ್ಟಿಗೆ, ಉಸುಕು, ಕಲ್ಲು ಸಾಗಾಣಿಕೆಗೆ ಕತ್ತೆ ಬಳಸುತ್ತಾರೆ. ಕೆಲಸದ ಒತ್ತಡಗಳು ಕಡಿಮೆ ಇದ್ದಾಗ ಕತ್ತೆಗಳನ್ನು ಪಟ್ಟಣಕ್ಕೆ ತಂದು ಬಿಡುತ್ತಾರೆ ಎನ್ನಲಾಗಿದೆ. ಕತ್ತೆಗಳನ್ನು ವರ್ಷವಿಡಿ ದುಡಿಸಿಕೊಳ್ಳುವ ಮಾಲೀಕರು ಬೇಕಾಬಿಟ್ಟಿಯಾಗಿ ಬಿಟ್ಟಿರುವ ಕಾರಣ, ಕತ್ತೆಗಳು ಪಟ್ಟಣದ ಸುತ್ತಮುತ್ತಲಿನ ರೈತರ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಜತೆಗೆ ಪಟ್ಟಣದ ಪ್ರಮುಖ ರಸ್ತೆಯ ಉದ್ದಗಲಕ್ಕೂ ಕತ್ತೆಗಳ ಕಾಟ ಮಿತಿ ಮಿರಿದೆ. ಪ್ರಮುಖ ವೃತ್ತ ಮತ್ತು ರಸ್ತೆಗಳ ಮಧ್ಯೆಯೇ ಕತ್ತೆಗಳು ಮಲಗುವ ಪರಿಣಾಮ, ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.

ಪ್ರತಿವರ್ಷ ತಪ್ಪದ ಕತ್ತೆಗಳ ಹಾವಳಿ: ಪಟ್ಟಣದಲ್ಲಿ ವರ್ಷದ ಎರಡು ಅಥವಾ ಮೂರು ತಿಂಗಳು ಕತ್ತೆಗಳ ಕಾಟ ತಪ್ಪಿದಲ್ಲ. ಆದ ಕಾರಣ ಪುರಸಭೆಯವರು ಸಂಬಂಧಿಸಿದ ಕತ್ತೆಗಳ ಮಾಲೀಕರಿಗೆ ಕಟ್ಟೆಚ್ಚರ ನೀಡುವ ಮೂಲಕ ಪಟ್ಟಣದ ಪ್ರಮುಖ ರಸ್ತೆಗಿಳಿಯುತ್ತಿರುವಬಿಡಾಡಿ ಕತ್ತೆಗಳ ಹಾವಳಿ ಕಡಿವಾಣ ಹಾಕಬೇಕಾಗಿದೆ. ಅಧಿಕಾರಿಗಳು ತಕ್ಷಣ ಸಂಬಂಧಿಸಿದ ಕತ್ತೆಗಳ ಮಾಲೀಕರನ್ನು ಸಂಪರ್ಕಿಸಿ, ಅವುಗಳನ್ನು ಪಟ್ಟಣದಿಂದ ಹೊರಹಾಕಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿನ ಕತ್ತೆಗಳ ಹಾವಳಿಯಿರುವುದು ಗಮಕ್ಕೆ ಬಂದಿದೆ. ಚಿಮ್ಮಡ ಗ್ರಾಮ ಮತ್ತು ರಬಕವಿ-ಬನಹಟ್ಟಿ ನಗರಗಳಲ್ಲಿನ ಸಂಬಂಧಿಸಿದಕತ್ತೆಗಳ ಮಾಲೀಕರನ್ನು ಪತ್ತೆಹಚ್ಚಿ, ಅವರಿಗೆ ನೋಟಿಸ್‌ ನೀಡಲು ಕಿರಿಯ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದ್ದೇನೆ. ನಿಗದಿತ ದಿನದೊಳಗೆ ಸಂಬಂ ಧಿಸಿದ ಮಾಲೀಕರು ಕತ್ತೆಗಳನ್ನು ತೆಗೆದುಕೊಂಡು ಹೋಗದಿದ್ದಲ್ಲಿ, ಪುರಸಭೆಯಿಂದಲೇ ಕತ್ತೆಗಳನ್ನು ಬೇರೆ ಕಡೆಗೆ ಸಾಗಿಸುವ ವ್ಯವಸ್ಥೆ ಮಾಡುತ್ತೇವೆ.ಎಚ್‌.ಎಸ್‌.ಚಿತ್ತರಗಿ. ಮುಖ್ಯಾಧಿಕಾರಿಗಳು. ಪುರಸಭೆ.

 

-ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.