42 ಬಾರಿ ಭಯೋತ್ಪಾದಕರಿಂದ ಹಲ್ಲೆಗೊಳಗಾದ ʼಶೌರ್ಯ ಚಕ್ರʼ ಪುರಸ್ಕೃತ ಬಲ್ವಿಂದರ್ ಸಿಂಗ್ ಹತ್ಯೆ
Team Udayavani, Oct 16, 2020, 4:51 PM IST
ಮಣಿಪಾಲ: ಶೌರ್ಯ ಚಕ್ರ ಪ್ರಶಸ್ತಿ ಪಡೆದ ಬಲ್ವಿಂದರ್ ಸಿಂಗ್ ಅವರನ್ನು ಪಂಜಾಬ್‌ನ ತಾರ್ನ್ ತರಣ್‌ನಲ್ಲಿ ಹತ್ಯೆ ಮಾಡಲಾಗಿದೆ.
ಬಲ್ವಿಂದರ್ ಸಿಂಗ್ ಪಂಜಾಬ್‌ನಲ್ಲಿ ಖಲಿಸ್ತಾನಿ ಭಯೋತ್ಪಾದನೆ ಹೆಚ್ಚಾಗಿದ್ದ ಸಂದರ್ಭ ಭಯೋತ್ಪಾದಕರ ವಿರುದ್ಧ ಸತತವಾಗಿ ಹೋರಾಡಿದ್ದರು. ಇವರ ಮೇಲೆ ಬರೊಬ್ಬರಿ 42 ಬಾರಿ ಭಯೋತ್ಪಾದಕರು ಹಲ್ಲೆ ಮಾಡಿದ್ದರು. ಈ ಕಾರಣಕ್ಕಾಗಿ ಇವರಿಗೆ ಶೌರ್ಯ ಚಕ್ರ ಗೌರವನ್ನು ನೀಡಲಾಗಿತ್ತು. ಶೌರ್ಯ ಚಕ್ರವು ಶಾಂತಿಗೋಸ್ಕರ ನೀಡಲ್ಪಡುವ ಅತ್ಯುನ್ನತ ಧೀರ ಪದಕವಾಗಿದೆ.
ಬಲ್ವಿಂದರ್ ಅವರ ಮನೆ ಭಿಖಿವಿಂದ್ ಪಟ್ಟಣದಲ್ಲಿದೆ. ಬಲ್ವಿಂದರ್ ಸಿಂಗ್ ಅವರು ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಯಲ್ಲಿದ್ದರು, ಇದ್ದಕ್ಕಿದ್ದಂತೆ ಕೆಲವರು ಅವರ ಮನೆಗೆ ಪ್ರವೇಶಿಸಿ ಗುಂಡುಗಳನ್ನು ಹಾರಿಸಲು ಪ್ರಾರಂಭಿಸಿದರು. ಇದರಿಂದ ಗಂಭೀರ ಗಾಯಗೊಂಡ ಬಲ್ವಿಂದರ್ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಈ ದಾಳಿಯ ಹಿಂದೆ ಭಯೋತ್ಪಾದಕರ ಕೈವಾಡ ಇರಬಹುದು ಎಂದು ಬಲ್ವಿಂದರ್ ಸಹೋದರ ರಂಜಿತ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗಳು ಘಟನೆಯ ಕುರಿತೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಪೊಲೀಸರ ಮೇಲೂ ಆರೋಪವಿದೆ ಎಂದು ಕುಟುಂಬ ಹೇಳಿದೆ. ದಾಳಿಯ ಬಗ್ಗೆ ಮಾಹಿತಿ ನೀಡಿದ ಅರ್ಧ ಘಂಟೆಯ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಬಲ್ವಿಂದರ್ ಅವರ ಮನೆ ಪೊಲೀಸ್ ಠಾಣೆ ಸಮೀಪದಲ್ಲಿದೆ.
ಬಲ್ವಿಂದರ್ ಅವರ ಭದ್ರತೆಯನ್ನು ಕೆಲವು ತಿಂಗಳ ಹಿಂದೆ ಹಿಂಪಡೆಯಲಾಗಿತ್ತು. ಪಂಜಾಬ್ ಸರಕಾರದ ಈ ಕ್ರಮವನ್ನು ಬಲ್ವಿಂದರ್ ವಿರೋಧಿಸಿದ್ದರು. 2017 ರಲ್ಲಿ, ಕೆಲವು ಅಪರಿಚಿತ ಹಲ್ಲೆಕೋರರು ಮನೆಯ ಕಡೆ ಗುಂಡಿನ ಮಳೆಗೈದಿದ್ದರು. ಆದರೆ ಇದರಲ್ಲಿ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ.
42 ಬಾರಿ ಹಲ್ಲೆ
ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚು ಇದ್ದ ಸಂದರ್ಭ ಬಲ್ವಿಂದರ್ ಸಿಂಗ್ ಅವರ ಮೇಲೆ 42 ಬಾರಿ ಹ್ಯಾಂಡ್ ಗ್ರೆನೇಡ್ ಮತ್ತು ರಾಕೆಟ್ ಲಾಂಚರ್‌ಗಳಿಂದ ದಾಳಿ ಮಾಡಲಾಗಿತ್ತು. ಪ್ರತಿ ಬಾರಿಯೂ ಬಲ್ವಿಂದರ್ ಭಯೋತ್ಪಾದಕರನ್ನು ಎದುರು ಹಾಕಿಕೊಂಡು ಅನೇಕ ಭಯೋತ್ಪಾದಕರನ್ನು ಕೊಂದಿದ್ದರು.
ಇದರ ಬಳಿಕ 1993ರಲ್ಲಿ ಅಧ್ಯಕ್ಷ ಶಂಕರ್ ದಯಾಳ್ ಶರ್ಮಾ ಅವರು ಬಲ್ವಿಂದರ್ ಅವರಿಗೆ ಶೌರ್ಯ ಚಕ್ರವನ್ನು ನೀಡಿದರು. ಬಲ್ವಿಂದರ್ ಅವರ ಜೀವನದ ಬಗ್ಗೆ ದೂರದರ್ಶನದಲ್ಲಿ ಪ್ರಸಾರವಾದ ‘ಪಂಜಾಬ್ ಏಕ್ ಯಾತ್ರೆ’ ಮತ್ತು ಇನ್ನೂ ಅನೇಕ ಟೆಲಿಫಿಲ್ಮ್‌ಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.