ಪಿಂಪ್ರಿ-ಚಿಂಚ್ವಾಡ್‌ ಕನ್ನಡ ಸಂಘದಿಂದ ಸೇವಾಕಾರ್ಯ


Team Udayavani, Oct 16, 2020, 8:26 PM IST

mumbai-tdy-1

ಪುಣೆ, ಅ. 15: ಸಾಂಸ್ಕೃತಿಕ ನಗರಿ ಪುಣೆಯಲ್ಲಿ ಲಕ್ಷಾಂತರ ತುಳು, ಕನ್ನಡಿಗರು ನೆಲೆಸಿದ್ದು ಒಗ್ಗಟ್ಟಿನ ಸಂಕೇತವಾಗಿ ಕನ್ನಡಪರ ಮತ್ತು ಸಮುದಾಯ ಸಂಘಟನೆಗಳನ್ನು ಕಟ್ಟಿಕೊಂಡು ಸಮಾಜ ಬಾಂಧವರ ಜತೆಗೆ ನಾಡು-ನುಡಿ ಸಂಸ್ಕೃತಿಯ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ಒಂದು ಕಡೆ ಜಾತೀಯ ಸಂಘಟನೆಗಳು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಿದ್ದರೆ, ಇನ್ನೊಂದೆಡೆ ಕನ್ನಡಪರ ಸಂಘಟನೆಗಳು ಸದ್ದುಗದ್ದಲವಿಲ್ಲದೆ ಆರ್ಥಿಕವಾಗಿ ಹಿಂದುಳಿದವರ ಸೇವೆಗೆ ಮುಂದಾಗಿದ್ದವು. ಇಂತಹ ಸಂಘಟನೆಗಳಲ್ಲಿ ಪಿಂಪ್ರಿ-ಚಿಂಚ್ವಾಡ್‌ ಕನ್ನಡ ಸಂಘವೂ ಒಂದು.

ಪುಣೆಯ ಕೈಗಾರಿಕಾ ವಲಯದಲ್ಲಿ  ಪಿಂಪ್ರಿ- ಚಿಂಚ್ವಾಡ್‌ಗೆ ಪ್ರಥಮ ಆದ್ಯತೆಯಿದೆ. ಇಲ್ಲಿ ಸಣ್ಣ ಕೈಗಾರಿಕೆಗಳಿಂದ ಹಿಡಿದು ಬೃಹತ್‌ ಪ್ರಮಾಣದ ಕೈಗಾರಿಕೆಗಳು ಬೀಡುಬಿಟ್ಟಿವೆ. ಈ ಪರಿಸರದಲ್ಲಿ ವಿವಿಧ ರಾಜ್ಯಗಳ, ಆರ್ಥಿಕವಾಗಿ ಹಿಂದುಳಿದ ಜನರು ಲಕ್ಷಾಂತರ ಸಂಖ್ಯೆಯಲ್ಲಿ ನೆಲೆಸಿದ್ದು, ದಿನಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಕನ್ನಡಿಗರ ಸಂಖ್ಯೆಯೂ ಬಹಳಷ್ಟಿದೆ. ಇಲ್ಲಿ ಕನ್ನಡಿಗ ಕೈಗಾರಿಕೋದ್ಯಮಿಗಳಿಂದ ಹಿಡಿದು ಹೊಟೇಲಿಗರು  ಕೈಗಾರಿಕೆಗಳಿಗೆ ಪೂರಕವಾಗಿ ಬಿಡಿ ಭಾಗಗಳನ್ನು ಒದಗಿಸುವ ಸಣ್ಣಪುಟ್ಟ ಉದ್ದಿಮೆಗಳನ್ನು ಹೊಂದಿದ್ದಾರೆ. ಇವರ ಕಂಪೆನಿ ಮತ್ತು ಇತರ ಉದ್ಯಮಗಳಲ್ಲಿ ದೊಡ್ಡ ಹುದ್ದೆಯಿಂದ ಹಿಡಿದು ಸಣ್ಣ ಹುದ್ದೆಗಳಲ್ಲಿ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಪರಿಣಾಮ ಜಾರಿ ಮಾಡಲಾದ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ನೂರಾರು ಬಡ ಕನ್ನಡಿಗರ ಸಮಸ್ಯೆಗಳನ್ನು ಅರಿತ ಕನ್ನಡ ಸಂಘ ಪಿಂಪ್ರಿ- ಚಿಂಚ್ವಾಡ್‌  ಪರಿಸರದಲ್ಲಿರುವ ಬಡ ಕನ್ನಡಿಗರ ನೆರವಿಗೆ ಧಾವಿಸಿದೆ.

ಕನ್ನಡ ಕಾರ್ಯಕ್ರಮ ರದ್ದುಗೊಳಿಸಿ ಸಹಾಯಕ್ಕೆ ನಿಂತ ಸಂಘ : ಕನ್ನಡ ಸಂಘವು ಮಾರ್ಚ್‌ ತಿಂಗಳಲ್ಲಿ ಅದ್ದೂರಿ ಕಾರ್ಯಕ್ರಮವೊಂದನ್ನು ಆಯೋಜಿಸುವ ಹುರುಪಿನಲ್ಲಿತ್ತು. ಅದಕ್ಕೆ ಬೇಕಾಗುವ ಎಲ್ಲ ರೀತಿಯ ಪೂರ್ವ ತಯಾರಿಯನ್ನು ನಡೆಸಿತ್ತು. ಆದರೆ ಬರಸಿಡಿಲಿನಂತೆ ಬಂದೆರಗಿದ ಕೋವಿಡ್ ಸೋಂಕಿನಿಂದಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಿ, ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಯಿತು. ಸಂಘದ ಅಧ್ಯಕ್ಷರು ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದು ಲಾಕ್‌ಡೌನ್‌ನಿಂದ ಎದುರಾದ ಸಮಸ್ಯೆಗಳಿಗೆ ತುತ್ತಾದ ತುಳು, ಕನ್ನಡಿಗರ ಮಾಹಿತಿಯನ್ನು ಕಲೆ ಹಾಕಿದರು.

ದಿನಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ  :   ಪಿಂಪ್ರಿ- ಚಿಂಚ್ವಾಡ್‌ ಪರಿಸರದಲ್ಲಿ ದಿನಕೂಲಿ ಕಾರ್ಮಿಕರಾಗಿ ಉತ್ತರ ಕರ್ನಾಟಕ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ಇವರು ಇತ್ತ ಇಲ್ಲೂ ನಿಲ್ಲಲಾರದೆ, ಅತ್ತ ಊರಿಗೂ ಹೋಗಲಾರದೆ ಸಂಕಷ್ಟವನ್ನು ಎದುರಿಸುತ್ತಿದ್ದರು. ಇದನ್ನು ಅರಿತ ಸಂಘದ ಸದಸ್ಯರು ಒಂದಾಗಿ ಸೇವಾ ಕಾರ್ಯಗಳ ರೂಪರೇಖೆಯನ್ನು ಸಿದ್ಧಗೊಳಿಸಿದರು. ಪರಿಸರದಲ್ಲಿರುವ ಬಡವರು ಮತ್ತು ದಿನಕೂಲಿ ಕಾರ್ಮಿಕರು ಮತ್ತು ಹಸಿವಿನಿಂದ ಪರದಾಡುತ್ತಿರುವ ಇನ್ನಿತರರಿಗೆ ದಿನನಿತ್ಯ ಊಟದ ವ್ಯವಸ್ಥೆಯನ್ನು ಸಂಘದ ಮುಖಾಂತರ ಮಾಡಿದರು.

43 ದಿನಗಳ ಕಾಲ ಸೇವೆ  : ಸುಮಾರು 43 ದಿನಗಳ ಪರ್ಯಂತ ನಡೆದ ಊಟದ ವ್ಯವಸ್ಥೆಯನ್ನು ಜಾತಿ, ಮತ, ಧರ್ಮವನ್ನು ಮರೆತು ಎಲ್ಲ ಭಾಷಿಕರ ಕುಟುಂಬಗಳಿಗೂ ತಲುಪಿಸುವಲ್ಲಿ ಸದಸ್ಯರು ಮುಂದಾದರು. ಕೆಲವು ಅಂಧ ಕುಟುಂಬಗಳಿಗೆ ಕಿಟ್‌ಗಳ ಜತೆಯಲ್ಲಿ ಊಟೋಪಚಾರದ ವ್ಯವಸ್ಥೆಯನ್ನು  ಮಾಡಿದ್ದರು. ಪ್ರತೀ ದಿನ ಮೂರು ಕೇಂದ್ರಗಳಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಕರ್ನಾಟಕದಲ್ಲಿರುವ ಕೆಲವು ಸದಸ್ಯರು ಕನ್ನಡ ಸಂಘದ ಕಾರ್ಯವನ್ನು ಕೇಳಿ ತಮ್ಮ ಪುಣೆಯ ಕುಟುಂಬಿಕರ ಕಷ್ಟಗಳನ್ನು ಸಂಘದೊಂದಿಗೆ ಹಂಚಿಕೊಂಡಿದ್ದು, ತತ್‌ಕ್ಷಣವೇ ಸದಸ್ಯರು ಅವರ ನೆರವಿಗೆ ಧಾವಿಸಿದ್ದಾರೆ.

ಸರಕಾರಿ ಅಧಿಕಾರಿಗಳಿಂದ ಪ್ರಶಂಸಾ ಪತ್ರ : ಲಾಕ್‌ಡೌನ್‌ನ ಸಂದರ್ಭದಲ್ಲಿ ಕನ್ನಡ ಸಂಘ ಪಿಂಪ್ರಿ- ಚಿಂಚ್ವಾಡ್‌, ಮಾಡಿದ ಜನ ಸೇವಾ ಕಾರ್ಯಗಳಿಗೆ ಮಹಾರಾಷ್ಟ್ರ ಸರಕಾರದ ಸ್ಥಳೀಯ ಅ ಧಿಕಾರಿಗಳು ಸಂಘದ ಕಾರ್ಯವನ್ನು ಶ್ಲಾಘಿಸಿ ಸಂಘದ ಸದಸ್ಯರನ್ನು ಬರಮಾಡಿಕೊಂಡು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಸಂಘದ ಅಧ್ಯಕ್ಷ ಧ್ರುವ ಕುಲಕರ್ಣಿ ಮುಂಚೂಣಿ ಕಾರ್ಯಕರ್ತರಾದ ಸುಧೀರ್‌ ಕಲಶೆಟ್ಟಿ, ಗಂಗಾಧರ ಬೆನ್ನೂರ, ಸಂಜಯ್‌ ರೋಡಗಿ, ರಾಜ್‌ಕುಮಾರ್‌  ಬಿರಾದಾರ್‌, ಸಂತೋಷ್‌, ರಮೇಶ್‌, ಮುರಳೀಧರ, ಸಿದ್ದು ಮೊದಲಾದವರು ಹಗಲು-ರಾತ್ರಿ ಎನ್ನದೆ ಸಂಕಷ್ಟದಲ್ಲಿದ್ದವರಿಗೆ ಸಹಕರಿಸಿದ್ದಾರೆ.

ಸಹಾಯ ಹಸ್ತ  : ಸಂಘದ ಸದಸ್ಯರು ಕೋವಿಡ್ ಮಾರ್ಗಸೂಚಿ ಗಳನ್ನು ಕಟ್ಟನಿಟ್ಟಾಗಿ ಪಾಲಿಸಿಕೊಂಡು ಸ್ಥಳೀಯ ಪೊಲೀಸ್‌ ಠಾಣೆಗಳ ಸಿಬಂದಿಗೂ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಇವರ ಸೇವೆಯಲ್ಲಿ ಪೊಲೀಸ್‌ ಸಿಬಂದಿಯೂ ಕೈಜೋಡಿಸಿ ಹಲವಾರು ಕುಟುಂಬಗಳಿಗೆ ದಿನೋಪಯೋಗಿ ವಸ್ತುಗಳನ್ನೊ ಳಗೊಂಡ ಕಿಟ್‌ಗಳನ್ನು ಹಸ್ತಾಂತರಿಸಿದ್ದಾರೆ.ಕೋವಿಡ್ ಪೀಡಿತ ಕುಟುಂಬಗಳಿಗೆ ಮಾನಸಿಕವಾಗಿ ಧೈರ್ಯ ತುಂಬಿ ಅವರು ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸಿ ಕೋವಿಡ್ ತಡೆಗಟ್ಟುವಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಂಸ್ಥೆಯ ಸದಸ್ಯರು ತೊಡಗಿದ್ದರು.

ಕನ್ನಡ ಸಂಘ ಪಿಂಪ್ರಿ- ಚಿಂಚ್ವಾಡ್‌ ಎಂದರೆ ಅದು ನಮ್ಮಲ್ಲರ ಸಂಸ್ಥೆಯಾಗಿದೆ. ಕನ್ನಡಿಗರ ಸೇವೆಗಾಗಿ ಸದಾ ಸಿದ್ಧವಾಗಿರುವ ಸಂಘವು ಕನ್ನಡಿಗರ  ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದೆ. ಅತ್ಯಂತ ಸಂಕಷ್ಟದಲ್ಲಿರುವವರಿಗೆ ಕೂಡಲೇ ಸ್ಪಂದಿಸಿ ನಮ್ಮಿಂದಾಗುವ ಸೇವಾ ಕಾರ್ಯವನ್ನು ಮಾಡುತ್ತೇವೆ. ಈ ಬಾರಿ ಅನಿರೀಕ್ಷಿತವಾಗಿ ಬಂದೊದಗಿದ ಕೋವಿಡ್ ಸಾಂಕ್ರಾಮಿಕದಿಂದಾಗಿ ಲಾಕ್‌ಡೌನ್‌ ಆದಾಗ ಕನ್ನಡಿಗರಿಗೆ ಬಹಳ ತೊಂದರೆಯಾಗಿದೆ. ನಮ್ಮ ಸಂಘದಿಂದ ಸಹಾಯ ಹಸ್ತ ನೀಡಲು ನಾವು ಮುಂದಾದೆವು. ನಮ್ಮ ಈ  ಕಾರ್ಯಕ್ಕೆ ಸಹಕರಿಸಿದ ಎಲ್ಲ ದಾನಿಗಳ ಸಹಕಾರವನ್ನು ಮರೆಯುವಂತಿಲ್ಲ. ಕಾರ್ಯಕರ್ತರ ನಿರಂತರ ಸೇವೆಯಿಂದ ಅದೆಷ್ಟೋ ಹಸಿದವರ ಹೊಟ್ಟೆ ತುಂಬಿಸಿದ ಸಂತೃಪ್ತಿ ನಮಗಿದೆ. ಕಷ್ಟದಲ್ಲಿರುವವರಿಗೆ ಸಂಘದ ಸಹಾಯ, ಸಹಕಾರ ಸದಾ ಇರಲಿದೆ. -ಧ್ರುವ ಕುಲಕರ್ಣಿ ಅಧ್ಯಕ್ಷರು,  ಕನ್ನಡ ಸಂಘ ಪಿಂಪ್ರಿ- ಚಿಂಚ್ವಾಡ್‌

ಆಹಾರದ ಕಿಟ್‌ ವಿತರಣೆ   :  ಕೋವಿಡ್ ಸಂಕಷ್ಟದ ಸಮಯದಲ್ಲಿ  ಸಂಘದ ಸದಸ್ಯರು ಆರಂಭದಲ್ಲಿ ಸ್ವಂತ ಹಣದಿಂದಲೇ ಬಡವರಿಗಾಗಿ ಊಟದ ವ್ಯವಸ್ಥೆ ಮತ್ತು ಆಹಾರದ ಕಿಟ್‌ಗಳನ್ನು ವಿತರಿಸಿದರು. ಬಳಿಕ ದಾನಿಗಳಿಂದ ನಿಧಿ ಸಂಗ್ರಹಣೆ ಮಾಡಿ ಅದರಿಂದ ದಿನಂಪ್ರತಿ ಸುಮಾರು 450ರಿಂದ 500 ಜನರಿಗೆ ಊಟದ  ವ್ಯವಸ್ಥೆ ಮಾಡುವ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಅಲ್ಲದೆ ದವಸ-ಧಾನ್ಯ, ಅಕ್ಕಿ, ಹಿಟ್ಟು ಇನ್ನಿತರ ದಿನೋಪಯೋಗಿ ಆಹಾರ ವಸ್ತುಗಳ ಕಿಟ್‌ಗಳನ್ನು ನೂರಾರು ಬಡ ಕುಟುಂಬಗಳಿಗೆ ಸಂಘದ ವತಿಯಿಂದ ವಿತರಿಸಲಾಯಿತು.

ಟಾಪ್ ನ್ಯೂಸ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.