ಸಿಟಿ ಬಸ್‌ಗಳಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ ; ಪ್ರಯಾಣಿಕರಿಗೆ ಚಲೋ ಸೂಪರ್ ಸೇವರ್ ಪ್ಲಾನ್
Team Udayavani, Oct 16, 2020, 10:10 PM IST
ನಗರದ ಪತ್ರಿಕಾಭವನದಲ್ಲಿ ಚಲೋ ಕಾರ್ಡ್ ಅನಾವರಣಗೊಳಿಸಲಾಯಿತು.
ಮಹಾನಗರ: ಮಂಗಳೂರಿನಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಚಲೋ ಸೂಪರ್ ಸೇವರ್ ಪ್ಲಾನ್ ಎಂಬ ಸಾಪ್ತಾಹಿಕ, ಮಾಸಿಕ ಬಸ್ ಪಾಸ್ ಯೋಜನೆಯನ್ನು ಆರಂಭಿಸಲಾಗಿದೆ. ಪ್ರಯಾಣಿಕರಿಗೆ ಪ್ರತಿ ಟ್ರಿಪ್‌ಗೆ ಸರಾಸರಿ 3.99 ರೂ. ವೆಚ್ಚದಲ್ಲಿ ಪ್ರಯಾಣಿಸಲು ಅವಕಾಶ ನೀಡಿದಂತಾಗುತ್ತದೆ ಎಂದು ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಎಲ್ಲ ಸಿಟಿ ಬಸ್‌ಗಳಲ್ಲಿ ಕಾರ್ಡ್ ಮಾನ್ಯವಿರುತ್ತದೆ ಎಂದರು. ದೈನಂದಿನ ಪ್ರಯಾಣಿಕರು ಒಂದು ಟ್ರಿಪ್‌ಗೆ 10 ರೂ. ಪಾವತಿ ಮಾಡುತ್ತಾರೆ. ಸೂಪರ್ ಸೇವರ್ 399 ಯೋಜನೆಯ ಕಾರ್ಡ್‌ನೊಂದಿಗೆ ಅವರು 28 ದಿನಗಳಲ್ಲಿ 100 ಟ್ರಿಪ್ ಪ್ರಯಾಣಿಸಲು ಅವಕಾಶವಿದೆ. ಅವರು ಪ್ರತಿ ಟ್ರಿಪ್‌ಗೆ ಕೇವಲ 3.99 ರೂ. ನೀಡಿದಂತಾಗುತ್ತದೆ. ಈ ಪ್ಲಾನ್‌ಗಳನ್ನು 1 ದಿನದಲ್ಲಿ ಗರಿಷ್ಠ 4 ಟ್ರಿಪ್‌ಗ್ಳಿಗೆ ಉಪಯೋಗಿಸಲು ಅವಕಾಶವಿದೆ ಎಂದು ಅವರು ಹೇಳಿದರು.
ಚಲೋ ಸೂಪರ್ ಸೇವರ್ ಯೋಜನೆ ಗಳನ್ನು ಪಡೆಯಲು ಪ್ರಯಾಣಿಕರು ಆಧಾರ್ ಕಾರ್ಡ್ ಅಥವಾ ಪಾನ್‌ಕಾರ್ಡ್ ಜೆರಾಕ್ಸ್ ಪ್ರತಿ ನೀಡಬೇಕು. ಹಂಪನಕಟ್ಟೆಯ ಮಿಲಾಗ್ರಿಸ್ ಕಟ್ಟಡದಲ್ಲಿರುವ ದ.ಕ. ಬಸ್ ಮಾಲಕರ ಸಂಘದ ಕಚೇರಿ, ಸ್ಟೇಟ್‌ಬ್ಯಾಂಕ್ ಎದುರಿನ ಸಿಟಿ ಟವರ್ ಬಿಲ್ಡಿಂಗ್‌ನಲ್ಲಿರುವ ಚಲೋ ಕಚೇರಿ, ಬಲ್ಮಠ ರಸ್ತೆಯಲ್ಲಿನ ಮಾಂಡೊವಿ ಮೋಟರ್ಸ್ ಎದುರಿನ ಸಾಗರ್ ಟೂರಿಸ್ಟ್ ನಲ್ಲಿ ಪಡೆಯಬಹುದು. ಅಲ್ಲದೆ ಬಸ್ ನಿರ್ವಾಹಕರಿಂದಲೂ ಪಡೆಯಬಹುದು. ಶೀಘ್ರದಲ್ಲಿ ಚಲೋ ಆ್ಯಪ್‌ನಲ್ಲಿಯೂ ಖರೀದಿಗೆ ಅವಕಾಶ ನೀಡಲಾಗುವುದು. ಸದ್ಯ ನಗರದಲ್ಲಿ 4,000 ಚಲೋ ಕಾರ್ಡ್ ಮಾರಾಟವಾಗಿದೆ. ಸದ್ಯ ಶೇ.90ರಷ್ಟು ಸಿಟಿ ಬಸ್‌ಗಳು ಕಾರ್ಯಾಚರಿಸುತ್ತಿವೆ. ಅಕ್ಟೋಬರ್ ಅಂತ್ಯದೊಳಗೆ ಶೇ.100ರಷ್ಟು ಬಸ್ ಸಂಚರಿಸುವ ವಿಶ್ವಾಸವಿದೆ ಎಂದು ದಿಲ್‌ರಾಜ್ ಆಳ್ವ ಹೇಳಿದರು.
ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ
ಶಾಲಾ-ಕಾಲೇಜುಗಳು ಆರಂಭದ ಬಳಿಕ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಪಾಸ್ ವ್ಯವಸ್ಥೆ ಜಾರಿಗೊಳಿಸುತ್ತೇವೆ. ನ. 14ರಂದು ಈ ವ್ಯವಸ್ಥೆಗೆ ಚಾಲನೆ ನೀಡಲಿದ್ದು, ಶೈಕ್ಷಣಿಕ ಅವಧಿಗೆ ಅನುಗುಣವಾಗಿ ಯೋಜನೆ ರೂಪಿಸುತ್ತೇವೆ. ಒಂದನೇ ತರಗತಿಯಿಂದ ಪಿಯುಸಿವರಗೆ ಮತ್ತು ಪದವಿ ವಿಭಾಗವಾಗಿ ವಿಂಗಡಿಸುತ್ತೇವೆ ಎಂದರು.
ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಖಜಾಂಚಿ ಸುಶೀತ್ ಶೆಟ್ಟಿ, ಚಲೋ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಸಂತೋಷ್ ದೇಶ್‌ಪಾಂಡೆ ಉಪಸ್ಥಿತರಿದ್ದರು.
ಕಾರ್ಡ್ ಆಫರ್ ಏನಿದೆ?
20 ರೂ. ಮೌಲ್ಯದ ಹೊಸ ಚಲೋ ಕಾರ್ಡನ್ನು ಪಡೆದು ಯಾವುದೇ ಮೊತ್ತಕ್ಕೆ ರೀಚಾರ್ಜ್ ಮಾಡಬಹುದು. 50 ರೂ. ಮೌಲ್ಯದ ಹೊಸ ಚಲೋ ಕಾರ್ಡ ಅನ್ನು ಪಡೆದು ವಾಲೆಟ್‌ನಲ್ಲಿ 30 ರೂ. ಬ್ಯಾಲೆನ್ಸ್ ಪಡೆಯಬಹುದಾಗಿದೆ. 100 ರೂ. ಮೌಲ್ಯದ ಕಾರ್ಡ್‌ನಲ್ಲಿ 80 ರೂ., 200 ರೂ. ರೀಚಾರ್ಚ್‌ನಲ್ಲಿ 210 ರೂ., 500 ರೂ. ರೀಚಾರ್ಚ್‌ನಲ್ಲಿ 550 ರೂ., 1,000 ರೂ. ರೀಚಾರ್ಚ್‌ನಲ್ಲಿ 1100 ರೂ. ಪಡೆಯಬಹುದಾಗಿದೆ ಎಂದು ದಿಲ್‌ರಾಜ್ ಆಳ್ವ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.