ಮಳೆ ನಿಂತರೂ ನಿಲ್ಲದ ಆತಂಕ
857 ಕೋಟಿ ಹಾನಿ ಮಾಡಿದ ನಿರಂತರ ಮಳೆ
Team Udayavani, Oct 17, 2020, 1:02 PM IST
ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ತಗ್ಗಿದ್ದು, ಮಳೆ ನಿಂತರೂ ಜಿಲ್ಲೆಯ ಜನರಲ್ಲಿ ಆತಂಕ ದೂರಾಗಿಲ್ಲ. ಸತತ ನಾಲ್ಕು ದಿನಗಳ ಕಾಲ ಸುರಿದ ಮಳೆಯಿಂದ ಜಿಲ್ಲೆಯ ಮಣ್ಣು-ಕಲ್ಲಿನ ಮನೆಗಳು ಸಂಪೂರ್ಣ ನೆನೆದಿದ್ದು, ಮಳೆ ನಿಂತ ಮೇಲೆ ಬೀಳುತ್ತಿವೆ. ಜಿಲ್ಲೆಯಬನಹಟ್ಟಿಯಲ್ಲಿ ಮಳೆಯಿಂದ ತೀವ್ರವಾಗಿ ನೆನೆದಿದ್ದ ಮನೆಯೊಂದು ಬೀಳುತ್ತಿರುವ ವಿಡಿಯೋ, ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
6ನೇ ಬಾರಿ ಜಲಾವೃತ: ಜಿಲ್ಲೆಯ ಮುಧೋಳ ಹಾಗೂ ರಬಕವಿ-ಬನಹಟ್ಟಿತಾಲೂಕು ವ್ಯಾಪ್ತಿಯ ಮಹಾಲಿಂಗಪುರಸಮೀಪದ ಘಟಪ್ರಭಾ ನದಿ ತುಂಬಿಹರಿಯುತ್ತಿದ್ದು, ಆರು ಸೇತುವೆಗಳು ಈ ವರ್ಷ 6ನೇಬಾರಿ ಜಲಾವೃತಗೊಂಡಿವೆ. ಈ ಆರು ಸೇತುವೆಗಳು ಕೆಳ ಸೇತುವೆಗಳಾಗಿದ್ದು, ಘಟಪ್ರಭಾ ನದಿಗೆ 10ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರು ಬಂದರೆ, ನದಿ ನೀರಿನಲ್ಲಿ ಮುಳುಗುತ್ತವೆ. ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 2576 ಮನೆಗಳು ನೆಲಕ್ಕುರುಳಿವೆ.
ಅಲ್ಲದೇ ನಾಲ್ಕು ದಿನ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಮತ್ತೆ 34869 ಹೆಕ್ಟೇರ್ ಪ್ರದೇಶದ ಹಿಂಗಾರು ಬೆಳೆ ಸಂಪೂರ್ಣ ಹಾನಿಯಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಜನರಿಗೆ ಪ್ರವಾಹ, ಅತಿವೃಷ್ಟಿ ಕಾಡುತ್ತಿದ್ದು, ಬೆಳೆದ ಬೆಳೆಗೆ ಕೈಗೆ ಬರುತ್ತಿಲ್ಲ.ಹೀಗಾಗಿ ಈ ಬೇಸಿಗೆಯಲ್ಲಿ ಆಹಾರ ಧಾನ್ಯಗಳ ದರ ಗಗನಕ್ಕೇರುವ ಆತಂಕವೂ ಎದುರಾಗಿದೆ.
ಜಿಲ್ಲೆಯಲ್ಲಿ ನಿರಂತರ ಮಳೆಗೆ 23 ಕೈಮಗ್ಗಗಳು, ಗ್ರಾಮೀಣಾಭಿವೃದ್ಧಿ ಇಲಾಖೆಯ 999 ಕಿ.ಮೀ ರಸ್ತೆ, 19 ಕುಡಿಯುವ ನೀರಿನ ಯೋಜನೆಗಳು ಹಾಗೂ 32 ಸೇತುವೆ ಮತ್ತು ಬಾಂದಾರ, ಲೋಕೋಪೊಯೋಗಿ ಇಲಾಖೆ ವ್ಯಾಪ್ತಿಯ 94 ಕಿ.ಮೀ. ರಾಜ್ಯ ಹೆದ್ದಾರಿ, 308 ಕಿ.ಮೀ. ಜಿಲ್ಲಾ ಮುಖ್ಯರಸ್ತೆಗಳು ಹಾಗೂ54 ಸೇತುವೆಗಳು ಹಾನಿಯಾಗಿವೆ. 43 ಕೆನಾಲ್, 28 ಕೆರೆಗಳು, 15 ಏತನೀರಾವರಿ ಯೋಜನೆಗಳು ಹಾನಿಯಾಗಿವೆ. 1851 ಕಂಬಗಳು, 471 ಟಿ.ಸಿ.ಗಳು 69 ಕಿ.ಮೀ. ವಿದ್ಯುತ್ ಲೈನ್‌ಗಳು ಹಾನಿಯಾಗಿವೆ. ಒಟ್ಟು 857 ಕೋಟಿ ರೂ. ನಷ್ಟವಾಗಿದೆ ಎಂದು ಜಿಲ್ಲಾಡಳಿತ ಪ್ರಾಥಮಿಕ ಅಂದಾಜು ಮಾಡಿದೆ. ಮಳೆಯಿಂದ ಬಿದ್ದ ಮನೆಗಳು, ರಸ್ತೆ, ಬೆಳೆ ಹಾನಿಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಇನ್ನೂ ಕೆಲವು ಪ್ರದೇಶಗಳ ಭೂಮಿಯಲ್ಲಿ ಮಳೆಯ ನೀರು ನಿಂತಿದ್ದು ಸರ್ವೇ ನಡೆಸಲು ಆಗುತ್ತಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಸರ್ಕಾರದಿಂದ ಸಮರ್ಪಕ ಪರಿಹಾರ :
ಕೆರೂರ: ಈಚೆಗೆ ಸುರಿದ ಮಳೆ ನೀರು, ಕೆರೆಯ ಜವುಳಿನಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಿಕೊಡುವುದಾಗಿವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಭರವಸೆ ನೀಡಿದರು. ಕಲಬಂದಕೇರಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಈಚೆಗೆಸುರಿದ ಭಾರೀ ಮಳೆಯ ನೀರು, ಕೆರೆಯ ಜವುಳು ಗ್ರಾಮಕ್ಕೆ ನುಗ್ಗಿದಪರಿಣಾಮ ಅನೇಕ ಮಣ್ಣಿನ ಮನೆಗಳು ಜಲಾವೃತಗೊಂಡಿವೆ.
ಸುಮಾರು 20ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು ಅನೇಕ ಗ್ರಾಮಸ್ಥರುಇದರಿಂದ ಸಂತ್ರಸ್ತರಾಗಿದ್ದು ಅವರೆಲ್ಲರಿಗೂ ಸೂಕ್ತ ಪರಿಹಾರ, ಆಶ್ರಯ ನಿವೇಶನ ಮಂಜೂರು ಮಾಡಿ ಹೊಸ ಮನೆ ನಿರ್ಮಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತ್ರಿಶಂಕು ಸ್ಥಿತಿ: ಸುತ್ತ ಕೆರೆ ಹಾಗೂಗುಡ್ಡ ವ್ಯಾಪಿಸಿರುವ ಕಾರಣ ತೆಗ್ಗು ಪ್ರದೇಶದಲ್ಲಿನ ಕಲಬಂದ ಕೇರಿ ಗ್ರಾಮಸ್ಥರ ಸ್ಥಿತಿ ತ್ರಿಶಂಕು ಆಗಿದೆ. ಹೆಚ್ಚು ಮಳೆ ಮತ್ತು ಕೆರೆಯಲ್ಲಿ ನೀರು ಸಂಗ್ರಹಗೊಂಡರೆ ಗ್ರಾಮದ ಮನೆಗಳಿಗೆ ಕೆರೆಯ ಜವುಳು (ಅಂತರ್ಜಲ) ವ್ಯಾಪಿಸಿ ಮಣ್ಣಿನ ಮನೆಗಳು ಕುಸಿದು ಬೀಳುತ್ತವೆ. ಕಳೆದ ಒಂದು ವಾರದಿಂದ ಸ್ಥಳೀಯ ಗ್ರಾಮಸ್ಥರನ್ನು ತಲ್ಲಣಗೊಳಿಸಿದ್ದು ಅವರಿಗೆ ಶಾಶ್ವತ ಸ್ಥಳಾಂತರ ಇಲ್ಲವೇ ಸುರಕ್ಷಿತ ಸ್ಥಳಗಳಲ್ಲಿ ಮನೆ ನಿರ್ಮಾಣಕ್ಕೆ ವ್ಯವಸ್ಥೆಗೆ ಮುಂದಾಗುವಂತೆ ತಹಶೀಲ್ದಾರ್ ಸುಹಾಸ ಇಂಗಳೆ, ತಾಪಂ ಇಒ ಡಾ| ಪುನೀತ ಅವರಿಗೆಸೂಚಿಸಿದರು. ಜಿಪಂ ಸದಸ್ಯ ಹೂವಪ್ಪ ರಾಠೊಡ ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.