ಡ್ರಗ್ಸ್ ಪ್ರಕರಣದಲ್ಲಿ ಯಾರೇ ಇದ್ದರೂ ಶಿಕ್ಷೆಯಾಗಬೇಕು : ಪವರ್ ಸ್ಟಾರ್ ಪುನೀತ್ ರಾಜಕುಮಾರ್
Team Udayavani, Oct 17, 2020, 7:38 PM IST
ಗಂಗಾವತಿ: ಡ್ರಗ್ಸ್ ದಂಧೆಯಲ್ಲಿ ಎಂತಹ ಪ್ರಭಾವಶಾಲಿ ಇದ್ದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕೆಂದು ಚಿತ್ರ ನಟ ಪುನೀತ್ ರಾಜ್ ಕುಮಾರ್ ಹೇಳಿದರು.
ಅವರು ಗಂಗಾವತಿಗೆ ಚಿತ್ರೀಕರಣಕ್ಕೆ ಆಗಮಿಸಿದ್ದ ವೇಳೆ ಉದಯವಾಣಿ ಜೊತೆ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ತನ್ನದೇ ಆಗಿರುವ ಇತಿಹಾಸವಿದೆ. ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಅಂಬ್ರೇಶ್, ಶಂಕರನಾಗ್ ಸೇರಿದಂತೆ ಕನ್ನಡ ಭಾಷೆ ನೆಲ, ಜಲದ ಬಗ್ಗೆ ಅಪಾರ ಗೌರವ ಹೊಂದಿದ ಕಲಾವಿದರಿಂದ ಇಡೀ ಭಾರತವೇ ಪ್ರೀತಿಸುವಂತೆ ನಡೆದುಕೊಂಡಿದ್ದಾರೆ. ಈಗ ಕೆಲ ಸಿನೆಮಾ ಕಲಾವಿದರು ಡ್ರಗ್ಸ್ ದಂಧೆಯಲ್ಲಿರುವುದನ್ನು ಕಂಡರೆ ನೋವಾಗುತ್ತದೆ. ಸಿನೆಮಾಗಳಿಂದ ಯುವಜನರು ಪಾಠ ಕಲಿಯುತ್ತಾರೆ.
ಕೋರೊನಾದಂತಹ ಸಂದರ್ಭದಲ್ಲಿ ಸಿನೆಮಾ ನಟನಟಿಯರಿಗೆ ಇದೆಲ್ಲ ಬೇಕಿತ್ತಾ ? ಇಡಿ ಜಗತ್ತು ಕೊರೊನಾ ರೋಗದಿಂದ ನರಳುವಾಗ ಡ್ರಗ್ಸ್ ನಂತಹ ಸಮಾಜ ವಿದ್ರೋಹಿ ಘಟನೆಯಿಂದ ಚಿತ್ರತಂಡ ತಲೆ ತಗ್ಗಿಸುವಂತಾಗಿದೆ.
ಇದನ್ನೂ ಓದಿ:ಎಬಿಡಿ ಸ್ಪೋಟಕ ಅರ್ಧಶತಕ: ರಾಜಸ್ಥಾನ್ ವಿರುದ್ಧ ಗೆದ್ದು ಬೀಗಿದ ಆರ್ ಸಿಬಿ
ಕಳೆದ 7 ತಿಂಗಳಿಂದ ಕೊರೊನಾ ರೋಗದ ಪರಿಣಾಮ ಚಿತ್ರಕಲಾವಿದರು, ತಂತ್ರಜ್ಞರು ಕೆಲಸವಿಲ್ಲದೆ ಬಹಳ ಕಷ್ಟ ಅನುಭವಿಸಿದ್ದಾರೆ. ಇದೀಗ ಕೇಂದ್ರ ರಾಜ್ಯ ಸರಕಾರಗಳ ಮಾರ್ಗಸೂಚಿಯಂತೆ ಚಿತ್ರೀಕರಣ ಮತ್ತು ಸಿನೆಮಾ ಪ್ರದರ್ಶನಕ್ಕೆ ಅವಕಾಶ ದೊರಕಿದ್ದು ಕಲಾವಿದರಿಗೆ ನೆರವಾಗಿದೆ.
ಸಾಮಾಜಿಕ ಅಂತರ ಕೋವಿಡ್ ಸುರಕ್ಷತಾ ನಿಯಮಪಾಲನೆ ಮೂಲಕ ಚಿತ್ರೀಕರಣ ನಡೆಸಲಾಗುತ್ತಿದೆ. ಅಭಿಮಾನಿಗಳು ಪೊಟೊ ಹಾಗೂ ಕೈ ಕುಲುಕಲು ಆಸೆಯಿಂದ ಬರುತ್ತಿದ್ದು ಅವರ ಜತೆ ಬೆರೆಯಲು ಆಗುತ್ತಿಲ್ಲ. ಅಭಿಮಾನಿಗಳು ನಮ್ಮೊಂದಿಗೆ ಸಹಕರಿಸುವಂತೆ ಪುನೀತ್ ರಾಜ್ ಕುಮಾರ್ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.