ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿಗೆ 5 ವಿಕೆಟ್‌ಗಳ ರೋಚಕ ಗೆಲುವು
Team Udayavani, Oct 17, 2020, 11:56 PM IST
ಶಾರ್ಜಾ: ಆರಂಭಿಕ ಶಿಖರ್ ಧವನ್ ಅವರ ಆಕರ್ಷಕ ಶತಕ (101 ಔಟಾಗದೇ) ಮತ್ತು ಅಂತಿಮ ಓವರಿನಲ್ಲಿ ಅಕ್ಷರ್ ಪಟೇಲ್ ಸಿಡಿಸಿದ ಮೂರು ಭರ್ಜರಿ ಸಿಕ್ಸರ್‌ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶನಿವಾರದ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.
ಅಂತಿಮ ಓವರಿನಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ರವೀಂದ್ರ ಜಡೇಜ ಎಸೆದ ಈ ಓವರನ್ನು ಆರಂಭದಲ್ಲಿ ಧವನ್ ಎದುರಿಸಿದ್ದರು. ಮೊದಲ ಎಸೆತ ವೈಡ್ ಆಗಿದ್ದರೆ ಎರಡನೇ ಎಸೆತದಲ್ಲಿ ಧವನ್ ಒಂಟಿ ರನ್ ತೆಗೆದರು. ಮತ್ತಿನೆರಡು ಎಸೆತಗಳಲ್ಲಿ ಅಕ್ಷರ್ ಸಿಕ್ಸರ್ ಬಾರಿಸಿ ರೋಮಾಂಚನಗೊಳಿಸಿದರು. ನಾಲ್ಕನೇ ಎಸೆತದಲ್ಲಿ ಎರಡು ರನ್ ಬಂದರೆ ಐದನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಬಾರಿಸಿದ ಅಕ್ಷರ್ ಡೆಲ್ಲಿಗೆ ಸ್ಮರಣೀಯ ಗೆಲುವು ತಂದುಕೊಟ್ಟರು. ಈ ಗೆಲುವಿನಿಂದ ಡೆಲ್ಲಿ ತಂಡ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಫಾ ಡು ಪ್ಲೆಸಿಸ್ ಅವರ ಅಮೋಘ ಅರ್ಧಶತಕ ಮತ್ತು ಮಧ್ಯಮ ಕ್ರಮಾಂಕದಲ್ಲಿ ರಾಯುಡು, ಜಡೇಜ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟಿಗೆ 179 ರನ್‌ಗಳ ಸವಾಲಿನ ಮೊತ್ತ ಪೇರಿಸಿ ಸವಾಲೊಡ್ಡಿತು. ಗುರಿ ಬೆನ್ನತ್ತಿದ ಡೆಲ್ಲಿ 19.5 ಓವರ್‌ಗಳಲ್ಲಿ 5 ವಿಕೆಟಿಗೆ 185 ರನ್ ಪೇರಿಸಿ ಜಯಭೇರಿ ಬಾರಿಸಿತು.
ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ ಕಳೆದ ಪಂದ್ಯದಲ್ಲಿ ಆರಂಭಿಕನಾಗಿ ಭಡ್ತಿ ಹೊಂದಿ ಮಿಂಚಿದ್ದ ಸ್ಯಾಮ್ ಕರನ್ ಬ್ಯಾಟಿಂಗ್ ಅಬ್ಬರ ಈ ಪಂದ್ಯದಲ್ಲಿ ನಡೆಯಲ್ಲಿಲ್ಲ ತಂಡದ ಖಾತೆ ತರೆಯುವ ಮುನ್ನವೇ ಶೂನ್ಯಕ್ಕೆ ಔಟಾಗಿ ನಿರಾಶೆ ಮೂಡಿಸಿದರು. ಆದರೆ ದ್ವಿತೀಯ ವಿಕೆಟಿಗೆ ಆಡಲಿಳಿದ ಫಾ ಡು ಪ್ಲೆಸಿಸ್ ಮತ್ತು ವಾಟ್ಸನ್ ತಂಡಕ್ಕೆ ಹಿನ್ನೆಡೆಯಾಗದ ರೀತಿಯಲ್ಲಿ ಆಡಲಾರಂಭಿಸಿದರು. ಈ ಜೋಡಿ ಎರಡನೇ ವಿಕೆಟಿಗೆ 87 ರನ್‌ಗಳ ಭರ್ಜರಿ ಜತೆಯಾಟವಾಡಿತು.
ವಾಟ್ಸನ್ 28 ಎಸೆತ ಎದುರಿಸಿ ಆರು ಬೌಂಡರಿ ಒಳಗೊಂಡಂತೆ 36 ರನ್ ಬಾರಿಸಿದರು. ಶಿಖರ್ ಧವನ್ ಅವರಿಂದ ಒಂದು ಜೀವದಾನ ಪಡೆದ ಫಾ ಡು ಪ್ಲೆಸಿಸ್ ಮತ್ತೆ ಧವನ್ ಅವರೀಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಧೋನಿ ಮತ್ತೆ ವಿಫಲ
ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ನಾಯಕ ಧೋನಿ ಈ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಅನ್ರಿಚ್ ನೋರ್ಜೆ ಈ ವಿಕೆಟ್ ಉರುಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ರಾಯುಡು ಮತ್ತು ಜಡೇಜ ಸಿಡಿದು ನಿಂತು ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಈ ಜೋಡಿ 21 ಎಸೆತಗಳಿಂದ 50 ರನ್ ಸೂರಗೈದಿತು. ರಾಯುಡು ಅಜೇಯ 25 ಎಸೆತಗಳಿಂದ 45 ರನ್ ಗಳಿಸಿದರೆ ಜಡೇಜ 13 ಎಸೆತಗಳಿಂದ 33 ರನ್ ಬಾರಿಸಿ ಅಜೇಯರಾಗಿ ಉಳಿದರು. 18 ಓವರ್ ತನಕ ಬೌಲಿಂಗ್ ಹಿಡಿತ ಸಾಧಿಸಿದ ಡೆಲ್ಲಿ ಬೌಲರ್‌ಗಳು ಅಂತಿಮ ಎರಡು ಓವರ್‌ನಲ್ಲಿ 32 ರನ್ ಬಿಟ್ಟುಕೊಟ್ಟು ಹಳಿ ತಪ್ಪಿದವರಂತೆ ಗೋಚರಿಸಿದರು.
ಸಂಕ್ಷಿಪ್ತ ಸ್ಕೋರ್: ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟಿಗೆ 179 (ಫಾ ಡು ಪ್ಲೆಸಿಸ್ 58, ರಾಯುಡು ಅಜೇಯ 45, ವಾಟ್ಸನ್ 36, ಜಡೇಜ ಅಜೇಯ 33, ನೋರ್ಜೆ 44ಕ್ಕೆ 2)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್ ಒತ್ತಡ
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.