ಹುರಿಹಗ್ಗ ಉದ್ದಿಮೆ ವಲಯವನ್ನು ಮರಳಿ ಹಿಂದಿನ ವೈಭವದತ್ತ ಒಯ್ಯುವ ಯತ್ನ ಫಲಕಾಣುತ್ತಿದೆ
Team Udayavani, Oct 18, 2020, 12:18 AM IST
ಕಾಸರಗೋಡು: ಹುರಿಹಗ್ಗ ಉದ್ದಿಮೆ ವಲಯವನ್ನು ಮರಳಿ ಹಿಂದಿನ ವೈಭವದತ್ತ ಒಯ್ಯುವ ಯತ್ನ ಫಲಕಾಣುತ್ತಿದೆ ಎಂದು ಹಣಕಾಸು ಸಚಿವ ಡಾ| ಟಿ.ಎಂ. ಥಾಮಸ್ ಐಸಕ್ ಅಭಿಪ್ರಾಯಪಟ್ಟರು.
ಕಣ್ಣೂರು ಕಯರ್ ಪ್ರಾಜೆಕ್ಟ್ ವ್ಯಾಪ್ತಿಯ ಪಡನ್ನ ಕಡಪ್ಪುರಂ ಹುರಿಹಗ್ಗ ಉದ್ದಿಮೆ ಸಹಕಾರಿ ಸಂಘಕ್ಕೆ ರಾಜ್ಯ ಸರಕಾರ ವತಿಯಿಂದ ಕೊಡಮಾಡಿರುವ 10 ಆಟೋಮೆಟಿಕ್ ಸ್ಪಿನ್ನಿಂಗ್ ಮಿಷಿನ್‌ಗಳ ಚಟುವಟಿಕೆ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಈ ಬಾರಿಯ ರಾಜ್ಯ ಸರಕಾರ 2016ರಲ್ಲಿ ಅಧಿಕಾರಕ್ಕೇರಿದ ವೇಳೆ 7 ಸಾವಿರ ಟನ್ ಇದ್ದ ತೆಂಗಿನ ನಾರು ಉತ್ಪನ್ನಗಳು ಈಗ 20 ಸಾವಿರ ಟನ್ ಆಗಿ ಹೆಚ್ಚಳಗೊಂಡಿದೆ. ಕೋವಿಡ್ ಮುಗ್ಗಟ್ಟುಗಳನ್ನು ಎದುರಿಸಿ ನೂತನ ತಂತ್ರಜ್ಞಾನಗಳ ಬಳಕೆಯೊಂದಿಗೆ ಈ ಉದ್ದಿಮೆ ವಲಯ ಪುನಶ್ಚೇತನಗೊಳ್ಳಲಿದೆ ಎಂದವರು ತಿಳಿಸಿದರು.
ಕೋವಿಡ್ ಸಂಹಿತೆಗಳನ್ನು ಪಾಲಿಸುವ ಮೂಲಕ ನಡೆದ ಸಮಾರಂಭದಲ್ಲಿ ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಪಡನ್ನ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಸಿ.ಫೌಝಿಯಾ ಯಂತ್ರಗಳ ಸ್ವಿಚ್ ಆನ್ ನಡೆಸಿದರು. ಇಲಾಖೆಯ ವಿಶೇಷ ಕಾರ್ಯದರ್ಶಿ ಎನ್.ಪದ್ಮಕುಮಾರ್ ಪ್ರದಾನ ಭಾಷಣ ಮಾಡಿದರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.