ಅತ್ಯಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್ ಯಾವುದು ? ಇಲ್ಲಿದೆ ಮಾಹಿತಿ
Team Udayavani, Oct 18, 2020, 6:35 PM IST
ನವದೆಹಲಿ: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಈ ಇ -ಕಾಮರ್ಸ್ ಕಂಪೆನಿ HDFC ಬ್ಯಾಂಕಿನ ಸಹಭಾಗಿತ್ವದೊಂದಿಗೆ 10% ಡಿಸ್ಕೌಂಟ್ ಕೂಡ ನೀಡುತ್ತಿದೆ. ಮಾತ್ರವಲ್ಲದೆ ಸ್ವತಃ ಟಿವಿ, ಎಲೆಕ್ಟ್ರಾನಿಕ್ಸ್, ಹೋಮ್ ಅಂಡ್ ಕಿಚನ್ ಪ್ರೋಡಕ್ಟ್, ಫ್ಯಾಶನ್ ಮತ್ತು ಬ್ಯೂಟಿ ವಿಭಾಗದಲ್ಲಿ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ.
ಸ್ಮಾರ್ಟ್ ಪೋನ್ ಗಳು ಕೂಡ ಡಿಸ್ಕೌಂಟ್ ದರದಲ್ಲಿ ದೊರಕುತ್ತಿದ್ದು, ಗ್ರಾಹಕರಿಗೆ ತಮ್ಮ ನೆಚ್ಚಿನ ಫೋನ್ ಗಳನ್ನು ಕೊಳ್ಳಲು ಇದು ಒಳ್ಳೆಯ ಸಮಯ. ಯಾವೆಲ್ಲಾ ಸ್ಮಾರ್ಟ್ ಪೋನ್ ಗಳು ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಇಬ್ಬರು ಯುವಕರು ನೀರು ಪಾಲು : ಓರ್ವನ ದೇಹ ಪತ್ತೆ
ಶಿಯೋಮಿ ರೆಡ್ಮಿ ನೋಟ್ 8: ಅಮೆಜಾನ್ ಇಂಡಿಯಾದಲ್ಲಿ ಈ ಸ್ಮಾರ್ಟ್ ಫೋನ್ 11,499 ರೂ. ಗಳಿಗೆ ಮಾರಾಟಕ್ಕಿದೆ. ಇದು 4ಜಿಬಿ RAM, ಹಾಗೂ 64 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಮಾತ್ರವಲ್ಲದೆ ಹಲವು ಪ್ರಮುಖ ಫೀಚರ್ ಗಳನ್ನು ಒಳಗೊಂಡಿದ್ದು, ಕ್ಯಾಲ್ ಕಾಂ ಸ್ನ್ಯಾಪ್ ಡ್ರ್ಯಾಗನ್ 665 ಪ್ರೊಸೆಸ್ಸರ್ ಹಾಗೂ 18 W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ.
Redmi 8A Dual : ಈ ಸ್ಮಾರ್ಟ್ ಫೋನ್ ಕೇವಲ 7,299ಕ್ಕೆ ದೊರಕುತ್ತಿದ್ದು ನಿಗದಿತ ದಿನದ ಆಫರ್ ಹೊಂದಿದೆ. ಇದರಲ್ಲಿ ಡ್ಯುಯಲ್ ರೇರ್ AI ಕ್ಯಾಮೆರಾವಿದ್ದು , ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸ್ಸರ್ ಹೊಂದಿದೆ.
ಆ್ಯಪಲ್ ಐಫೊನ್- 7: ಐಷಾರಾಮಿ ಆ್ಯಪಲ್ ಸಂಸ್ಥೆಯ ಫೋನ್ ಕೊಳ್ಳಬೇಕೆಂದು ಬಯಸುವವರಿಗೆ ಐಪೋನ್ -7 24,999ಕ್ಕೆ ದೊರಕುತ್ತಿದೆ. ಇದು 4.7 ಇಂಚಿನ ರೆಟಿನಾ HD LCD ಮತ್ತು 12 ಎಂಪಿ ವೈಡ್ ಆ್ಯಂಗಲ್ ಕ್ಯಾಮೆರಾವನ್ನು ಹೊಂದಿದೆ. ಇತ್ತೀಚಿನ ಐಫೋನ್ ಖರೀದಿಸಬೇಕೆಂದುಕೊಂಡರೇ ಐಫೊನ್ SE 64GB 29,999ಕ್ಕೆ ಫ್ಲಿಫ್ ಕಾರ್ಟ್ ನಲ್ಲಿ ಲಭ್ಯವಿದೆ.
ಇದನ್ನೂ ಓದಿ: ಅಪ್ಪು ಪ್ಲೀಸ್… ಒಮ್ಮೆ ಭೇಟಿಯಾಗಿ: ಪವರ್ ಸ್ಟಾರ್ ಆಗಮನದ ನಿರೀಕ್ಷೆಯಲ್ಲಿ ಅಂಧ ಸಹೋದರಿಯರು !
ಒಪ್ಪೋ A5 2020: ಅಮೇಜಾನ್ ಇಂಡಿಯಾದಲ್ಲಿ ಒಪ್ಪೋ ಎ5 2020 ಕೂಡ 9,990 ರೂ. ಗಳಿಗೆ ರಿಯಾಯಿತಿ ದರದಲ್ಲಿ ದೊರಕುತ್ತಿದೆ. ಇದರ ಮೂಲ ಬೆಲೆ 14,990. ಈ ಸ್ಮಾರ್ಟ್ ಪೋನ್ ಅತ್ಯುತ್ತಮ ಫೀಚರ್ ಗಳನ್ನು ಒಳಗೊಂಡಿದ್ದು ಇದರಲ್ಲಿ ಕ್ಯಾಡ್ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ S10 ಪ್ಲಸ್: 79 ಸಾವಿರ ಮೂಲ ಬೆಲೆ ಹೊಂದಿರುವ ಗ್ಯಾಲಕ್ಸಿ ಎಸ್ 10 ಪ್ಲಸ್ 44,990ಕ್ಕೆ ದೊರಕುತ್ತಿದೆ. ಇದರಲ್ಲಿ 6.4 ಇಂಚಿನ ಕ್ವಾಡ್ HD+ ಅಮೋಲ್ಡ್ ಡಿಸ್ ಪ್ಲೇ ಹೊಂದಿದೆ. ಎಕ್ಸಿನೋಸ್ 9820 ಪ್ರೊಸೆಸ್ಸರ್ ಇದ್ದು 12 ಜಿಬಿ ವರೆಗೂ ವಿಸ್ತರಿಸಬಹುದಾದ ರ್ಯಾಮ್ ಹಾಗೂ 1ಟಿಬಿ ಇನ್ ಬಿಲ್ಟ್ ಸ್ಟೋರೇಜ್ ಒಳಗೊಂಡಿದೆ. ಇದರ ಬ್ಯಾಟರಿ ಸಾಮರ್ಥ್ಯ 4,100mAh
ಇದನ್ನೂ ಓದಿ: ಪತ್ನಿಯ ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆಯ ಬಾಗಿಲಿನಲ್ಲಿಟ್ಟ ಪತಿ: ಬೆಚ್ಚಿಬೀಳುವ ಘಟನೆ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.