ಮಂಗಗಳ ಉಪಟಳ: ಜನರ ಕಳವಳ
ನಿರಂತರ ಹಾವಳಿಯಿಂದ ಜನತೆ ಕಂಗಾಲು
Team Udayavani, Oct 18, 2020, 7:51 PM IST
ಕೂಡ್ಲಿಗಿ: ಮನೆ ಕಾಂಪೌಂಡ ಮೇಲೆ ವಿಶ್ರಾಂತಿ ಪಡೆಯುತ್ತಿರುವ ವಾನರ ಸೈನ್ಯ.
ಕೂಡ್ಲಿಗಿ: ಪಟ್ಟಣದಲ್ಲೀಗ ಮಂಗಗಳದ್ದೇ ಕಾರುಬಾರು. ಮಂಗಗಳ ನಿರಂತರ ಹಾವಳಿಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಪಟ್ಟಣ ಸೇರಿದಂತೆ ಸುತ್ತಲಿನ ಹಲವು ವಾರ್ಡ್‌ಗಳಲ್ಲಿ ಇವುಗಳದ್ದೇ ಕಾರುಬಾರು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಬಹಳ ವರ್ಷದಿಂದ ಮಂಗಗಳ 3-4 ಗುಂಪು ಬೀಡು ಬಿಟ್ಟಿದ್ದು ದಿನ ಬೆಳಗಾದರೆ ಸಾಕು ಈ ಮಂಗಗಳು ನಾನಾ ಓಣಿಗಳಲ್ಲಿ, ಮನೆಗಳ ಮೇಲೆ ಹಿಂಡು ಹಿಂಡಾಗಿ ಜಿಗಿದು ಹೆಂಚುಗಳನ್ನು ಒಡೆದು
ಚೂರು ಚೂರು ಮಾಡುತ್ತಿವೆ. ಮನೆಗಳ ಸುತ್ತಲಲ್ಲಿನ ಪೇರಲ, ಹುಣಸೆ, ಪಪ್ಪಾಯಿ ಹಣ್ಣಿನ ಮತ್ತು ಹೂವಿನ ಗಿಡಗಳನ್ನು ಹಾಗೂ ತೆಂಗಿನ ಗಿಡಗಳನ್ನು ಹಾಳು ಮಾಡುತ್ತಿವೆ ಎನ್ನುತ್ತಾರೆ ಸಾರ್ವಜನಿಕರು. ಒಂದು ಮನೆಯಿಂದ ಮತ್ತೂಂದು ಮನೆಗೆ ಜಿಗಿಯುತ್ತ ಕೇಬಲ್ ನಾಶ ಮಾಡಿ ಟೆಲಿಫೋನ್, ವಿದ್ಯುತ್ ಕಂಬದ ತಂತಿ ಮೇಲೆ ಸರ್ಕಸ್ ಮಾಡುತ್ತವೆ. ಇದರಿಂದಾಗಿ ಒಮ್ಮೊಮ್ಮೆ ವಿದ್ಯುತ್ ಹರಿಯುವಿಕೆ ನಿಂತು ಹೋಗಿ ವಿದ್ಯುತ್‌ನಿಂದಲೇ ನಡೆಯುವ ಬಹುತೇಕ ಕಾರ್ಯಗಳು ನಿಂತು ಹೋಗುತ್ತಿವೆ. ಕುಡಿಯುವ ನೀರು ಬಾರದೆ, ಗಿರಣಿ ಆರಂಭವಾಗದೆ ಜನತೆ ಪರಿತಪಿಸುವಂತಾಗುತ್ತಿದೆ.
ಬೆಳೆ ಹಾಳು ಮಾಡುವ ಮಂಗಗಳು ಮನುಷ್ಯರನ್ನೂ ಕಾಡುತ್ತಿವೆ. ಒಬ್ಬಿಬ್ಬರು ಮಹಿಳೆಯರು, ಮಕ್ಕಳು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರೆ ಹಿಂದಿನಿಂದ ಹತ್ತಾರು ಮಂಗಗಳು ಮೈಮೇಲೆ ಬರುತ್ತಿವೆ. ರೈತರು ಕವಣೆ ಬೀಸಿದರೂ ಕಂಠ ಹರಿಯುವಂತೆ ಕೂಗಿದರೂ, ಪಟಾಕಿ ಸಿಡಿಸಿದರೂ ಕ್ಯಾರೆ ಎನ್ನದೆ ತಮ್ಮ ಚಲ್ಲಾಟ ಮುಂದುವರಿಸುತ್ತಿವೆ. ಇನ್ನಾದರೂ ಅರಣ್ಯ ಇಲಾಖೆ ಪಟ್ಟಣ ಪಂಚಾಯಿತಿ ಜಂಟಿಯಾಗಿ ವಿಶೇಷ ತಂಡ ರಚಿಸಿ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಮಂಗಗಳನ್ನು ಹಿಡಿದು ಕಾಡಿಗೆ ಕಳಿಸುವ ಕೆಲಸ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಸಾಲ ಮಾಡಿ ರೈತರು ಬೋರವೆಲ್ ನಲ್ಲಿದ್ದ ಅಲ್ಪ ಸ್ವಲ್ಪ ನೀರಿನಿಂದ ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಈಗ ಮಂಗಗಳಹಾವಳಿಯು ತರಕಾರಿ ತೋಟಗಳವರೆಗೆ ಹಬ್ಬಿದ್ದು, ಸವತೆ, ಹೀರೆ, ಬೆಂಡೆ, ಟೊಮೆಟೊ, ಬದನೆಕಾಯಿ, ಕುಂಬಳಕಾಯಿ ಇನ್ನಿತರ ಬೆಳೆಗಳನ್ನು ಮಂಗಗಳಿಂದ ರಕ್ಷಿಸುವುದು ರೈತರಿಗೆ ಸವಾಲಾಗಿದೆ. –ತಿಂದಪ್ಪ, ರೈತ
ಪಟ್ಟಣದ ವಾರ್ಡಿನ ನಿವಾಸಿಗಳಿಗೆ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಈಗಾಗಲೇ ಮಂಗಗಳ ಹಾವಳಿಗೆ ಜನರು ಹೈರಾಣಾಗಿದ್ದಾರೆ. ಆದಕಾರಣ ಪಪಂ ಇಲಾಖೆ ಮತ್ತು ಅರಣ್ಯ ಇಲಾಖೆ ಸಮನ್ವಯತೆ ಸಾಧಿ ಸಿ ಮಂಗಗಳ ಹಾವಳಿಗೆ ಮುಕ್ತಿ ಕಾಣಿಸಬೇಕಿದೆ. – ಶಿವರಾಜ್ ಪಾಲೂ¤ರ್, ಕೂಡ್ಲಿಗಿ ತಾಲೂಕು ಸ.ನೌ.ಸಂ ಅಧ್ಯಕ್ಷ
ಗಂಗಾವತಿಯಿಂದ ಮಂಗಗಳನ್ನು ಹಿಡಿಯುವ ತಜ್ಞರನ್ನು ಕೂಡ್ಲಿಗಿಗೆ ಕರೆಯಿಸುತ್ತೇವೆ. ಆ ವ್ಯಕ್ತಿಗಳ ಖರ್ಚು ವೆಚ್ಚವನ್ನು ಪಟ್ಟಣ ಪಂಚಾಯಿತಿ ಭರಿಸಬೇಕು. ಮಂಗಗಳನ್ನು ಹಿಡಿಯುವಾಗ ನಮ್ಮ ಇಲಾಖೆಯಿಂದ ಏನು ಸಹಕಾರ ಬೇಕು ನಾವು ಮಾಡುತ್ತೇವೆ. –ರೇಣುಕಮ್ಮ. ಎ, ವಲಯ ಅರಣ್ಯಾಧಿಕಾರಿಗಳು ಕೂಡ್ಲಿಗಿ
ಮಂಗಗಳ ಹಾವಳಿ ಬಗ್ಗೆ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಅರಣ್ಯ ಇಲಾಖೆಗೆ ಪತ್ರವನ್ನು ಬರೆದಿದ್ದೇನೆ. ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಹಾಗಾಗಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತೇವೆ. ಮಂಗಗಳ ಹಾವಳಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. –ಪಕೃದ್ದೀನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
-ಕೆ.ನಾಗರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್ ರಾಡಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.