ಪಾಕ್ ಸೇನಾಧಿಕಾರಿ ಸ್ಮಾರಕ ದುರಸ್ತಿ ಮಾಡಿದ ಭಾರತೀಯ ಯೋಧರು
1972ರ ಮೇ 5ರಂದು ಇಳಿ ಹಗಲು 4.30ಕ್ಕೆ ನಡೆದ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದರು
Team Udayavani, Oct 17, 2020, 11:24 AM IST
ಶ್ರೀನಗರ: ಪಾಕಿಸ್ಥಾನದ ಯೋಧರು ಭಾರತದ ಸೈನಿಕರ ವಿರುದ್ಧ ಮನಬಂದಂತೆ ಗುಂಡು ಹಾರಿಸುತ್ತಾರೆ. ಬಂಧನಕ್ಕೊಳಕಾದ ಯೋಧರನ್ನು ಚಿತ್ರಹಿಂಸೆ ಕೊಟ್ಟು ಕೊಂದ ಘಟನೆಗಳು ನಡೆದಿವೆ. ಆದರೆ 1972ರಲ್ಲಿ ಶ್ರೀನಗರದಲ್ಲಿ ಅಸುನೀಗಿದ್ದ ಪಾಕಿಸ್ಥಾನ ಸೇನಾಧಿಕಾರಿಯ ಸಮಾಧಿ ಹಾಳಾಗಿದ್ದು ದನ್ನು ಮತ್ತೆ ದುರಸ್ತಿ ಮಾಡಿದೆ.
ಶ್ರೀನಗರ ದಲ್ಲಿರುವ ಚಿನಾರ್ ಕಾರ್ಪ್ಸ್ ನ ಅಧಿಕಾರಿ ಗಳು ಮತ್ತು ಸಿಬಂದಿ ಈ ಶ್ವಾಘನೀಯ ಕಾರ್ಯ ಮಾಡಿದ್ದಾರೆ. “ಮೇ| ಮೊಹಮ್ಮದ್ ಶಬೀರ್ ಖಾನ್ ಸ್ಮರಣಾರ್ಥ ವಾಗಿ ಈ ಸಮಾಧಿ ನಿರ್ಮಿಸಲಾಗಿದೆ. 1972ರ ಮೇ 5ರಂದು ಇಳಿ ಹಗಲು 4.30ಕ್ಕೆ ನಡೆದ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದರು’ ಎಂದು ಸಮಾಧಿಯ ಮೇಲೆ ಬರೆದಿರುವ ವಾಕ್ಯಗಳನ್ನು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.
ಮತ್ತೊಂದು ರಾಷ್ಟ್ರದ ಯೋಧನನ್ನು ಗೌರವಿಸುವ ನಮ್ಮ ಸಂಪ್ರದಾಯದಂತೆ ಹಾಳಾಗಿದ್ದ ಸಮಾಧಿ ದುರಸ್ತಿ ಮಾಡ ಲಾಗಿದೆ. ನೌಗಾಂವ್ ವಲಯದಲ್ಲಿ ನಡೆದಿದ್ದ ದಾಳಿ ವೇಳೆ ಪಾಕ್ ಸೇನಾಧಿಕಾರಿ ಕೊಲ್ಲಲ್ಪಟ್ಟಿದ್ದರು. “ದೇಶ ಯಾವುದೇ ಆಗಿರಲಿ ಯೋಧ ಅಸುನೀಗಿದ ಬಳಿಕ ಅಂತ್ಯಸಂಸ್ಕಾರದ ವೇಳೆ ಗೌರವ ಸಿಗಬೇಕು’ ಎನ್ನುವುದೇ ನಮ್ಮ ಆಶಯ ಎಂದು ಸೇನೆ ಹೇಳಿಕೊಂಡಿದೆ.
ಅಫ್ಘಾನ್‌ನ ಹೆಲ್ಮಂಡ್ ಪ್ರಾಂತ್ಯದಲ್ಲೂ ಲಷ್ಕರ್,ಜೈಶ್‌ನ ಕರಾಳ ಹಸ್ತ
ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ತ ಹರಿಸುವ ಲಷ್ಕರ್-ಎ-ತೊಯ್ಯಬಾ, ಜೈಷ್ -ಎ- ಮೊಹಮ್ಮದ್ ಉಗ್ರ ಸಂಘಟನೆಗಳು ಅಫ್ಘಾನಿಸ್ಥಾನದ ಹೆಲ್ಮಂಡ್ ಪ್ರಾಂತ್ಯದಲ್ಲಿಯೂ ಕರಾಳ ಹಸ್ತ ಚಾಚುತ್ತಿವೆ. ಆ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರ ಸಂಘಟನೆ ನಡೆಸುತ್ತಿರುವ ಹಿಂಸಾತ್ಮಕ ಕುಕೃತ್ಯಗಳಿಗೆ ಬೆಂಬಲ ನೀಡುತ್ತಿವೆ.
ಈ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ಒಂದು ವಾರದ ಅವಧಿಯಲ್ಲಿ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು- ಅಫ್ಘಾನಿಸ್ಥಾನ ಸೇನಾ ಪಡೆಗಳ ನಡುವೆ ಭೀಕರ ಸಂಘರ್ಷ ನಡೆದು 35 ಸಾವಿರಕ್ಕೂ ಅಧಿಕ ಮಂದಿ ತೊಂದರೆ ಗೀಡಾಗಿದ್ದಾರೆ.
ಪ್ರಾಂತ್ಯದ ಗವರ್ನರ್ ಯಾಸಿನ್ ಖಾನ್ ಮಾತನಾಡಿ ತಾಲಿಬಾನ್ ಉಗ್ರರಿಗೆ ಲಷ್ಕರ್, ಜೈಶ್ ಮತ್ತು ಅಲ್‌ಕಾಯಿದಾ ಸಂಘಟನೆಗಳ ಬೆಂಬಲ ಈಗ ಲಭ್ಯವಾಗುತ್ತಿದೆ. ಹಿಂದಿನಿಂದಲೂ ಈ ಮೂರು ಸಂಘಟನೆಗಳಿಂದ ಬೆಂಬಲ ನಿರಂತರವಾಗಿದೆ. “ಟೋಲೋ ನ್ಯೂಸ್’ ಜತೆಗೆ ಮಾತನಾಡಿದ ತಾಲಿಬಾನ್ ವಕ್ತಾರ ಗವರ್ನರ್ ಆರೋಪ ತಿರಸ್ಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ
Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.