ಭೀಮಾ ಪ್ರವಾಹಕ್ಕೆ ಬದುಕು ಮೂರಾಬಟ್ಟೆ
ಮನೆ-ಶಾಲೆ-ದೇವಸ್ಥಾನ ಮುಳುಗಡೆ,ಕೈಗೆ ಬಂದ ಬೆಳೆ ಹಾಳು
Team Udayavani, Oct 19, 2020, 5:08 PM IST
ಜೇವರ್ಗಿ: ತಾಲೂಕಿನ ಜನರ ಜೀವನಾಡಿಯಾಗಿದ್ದಭೀಮಾ ನದಿಯ ಪ್ರವಾಹದಿಂದ ರೈತರ, ಬಡವರ ಜೀವನ ಜೊತೆ ಚೆಲ್ಲಾಡವಾಡುತ್ತಿದ್ದು, ತಾಲೂಕಿನ ಜನರ ಬದುಕನ್ನು ಮೂರಾಬಟ್ಟೆಗೊಳಿಸಿದೆ.
ಸತತ ಬರಗಾಲ ಎದುರಿಸಿ ಆಗೊಮ್ಮೆ ಈಗೊಮ್ಮೆ ಬೀಳುವ ಅಲ್ಪಸ್ವಲ್ಪ ಮಳೆ ನಂಬಿ ಬಿತ್ತನೆ ಮಾಡಿ ಬೆಳೆ ಬೆಳೆಯುವ ರೈತರಿಗೆ ಪ್ರಸಕ್ತವರ್ಷ ಭೀಕರ ಪ್ರವಾಹ ಬರಗಾಲಕ್ಕಿಂತ ಅತ್ಯಂತ ಕೆಟ್ಟ ಅನುಭವ ನೀಡಿದೆ. ಸತತ ಸುರಿಯುತ್ತಿರುವಮಳೆ ಹಾಗೂ ಹಿಂದೆಂದೂ ಕಾಣದ ಕೇಳರಿಯದ ನೆರೆ ಹಾವಳಿಯಿಂದ ಈ ಭಾಗದ ಜನರು,ರೈತರು ತತ್ತರಿಸಿ ಹೋಗಿದ್ದಾರೆ. ತಾಲೂಕಿನ 37 ಹಳ್ಳಿಗಳ ಜನರು ಗ್ರಾಮಗಳನ್ನು ತೊರೆದುಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಜಾನುವಾರುಗಳೊಂದಿಗೆ, ಅಗತ್ಯ ವಸ್ತುಗಳ ಜೊತೆ ಮನೆ ತೊರೆದು ನಿರಾಶ್ರಿತರಿಗೆ ದಿಕ್ಕು ತೋಚದಂತೆ ಮಾಡಿದೆ ನೆರೆಹಾವಳಿ.
ಸತತ ಬರಗಾಲ ಕಂಡ ಈ ಭಾಗದ ಜನ ಕಳೆದ 50 ವರ್ಷಗಳಲ್ಲಿ ಇಂತಹ ಪ್ರವಾಹ ಕಂಡಿಲ್ಲ.ಮಹಾರಾಷ್ಟ್ರದಿಂದ 8 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಭೀಮಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ತಾಲೂಕಿಗೆ ಸಂಪರ್ಕ ಕಲ್ಪಿಸುವ ಇಟಗಾ-ಗಾಣಗಾಪುರ ಸೇತುವೆ, ಕಲ್ಲೂರ-ಚಿನಮಳ್ಳಿ ಬ್ರಿಡ್ಜ್ ಕಂಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದ್ದು, ಕಟ್ಟಿಸಂಗಾವಿ ಹೊಸ ಹಾಗೂ ಹಳೆ ಸೇತುವೆಗೆ ತಾಗಿ ನೀರು ರಭಸವಾಗಿ ಹರಿಯುತ್ತಿದೆ. ಇದರಿಂದ ನದಿ ತೀರದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಏಪ್ರಿಲ್, ಮೇ ತಿಂಗಳಲ್ಲಿ ಕೋವಿಡ್ ಹಾವಳಿಯಿಂದ ರೈತರ ಬೆಳೆಗಳು ಮಾರಾಟ ಮಾಡದೇ ಸಂಕಷ್ಟ ಅನುಭವಿಸಿದ ನಂತರ ಈ ನೆರೆ ಹಾವಳಿ ಹಾಗೂ ಸತತ ಸುರಿಯುತ್ತಿರುವಧಾರಾಕಾರ ಮಳೆಯಿಂದ ಅನ್ನದಾತ ಕಣ್ಣೀರಲ್ಲಿಕೈತೊಳೆಯುವಂತಾಗಿದೆ. ಈ ಭಾಗದ ವಾಣಿಜ್ಯ ಬೆಳೆಗಳಾದ ತೊಗರಿ, ಹತ್ತಿ ಹೂ ಬಿಡುವ ಹಂತದಲ್ಲಿದ್ದಾಗ ಕೊಳೆತು ಹಾಳಾಗಿವೆ. ಬಿಟ್ಟು ಬಿಡದೇ ಸುರಿದ ಮಳೆಯಿಂದ ಹೆಸರು ರಾಶಿ ಮಾಡಲಾಗದೇ ನೆಲಪಾಲು ಮಾಡಲಾಯಿತು.
ಭೀಮಾನದಿ ಪ್ರವಾಹದಿಂದ ಹಾಗೂ ಮಳೆಯಿಂದ ತಾಲೂಕಿನಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಇದರ ಜೊತೆಗೆಲಕ್ಷಾಂತರ ಹೆಕ್ಟೇರ್ ಜಮೀನುಗಳಲ್ಲಿ ಬೆಳೆನಾಶದ ಜೊತೆ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಉಪಜೀವನಕ್ಕೆ ಆಧಾರವಾಗಿದ್ದ ಬೆಳೆಗಳು ನೀರು ಪಾಲಾಗಿದ್ದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಮುಂದೇನು ಮಾಡಬೇಕು ಎನ್ನುವ ಆಲೋಚನೆಯಲ್ಲಿ ತೊಡಗಿದ್ದಾರೆ.
ಈ ವರೆಗೆ ತಾಲೂಕಿನ ಭೀಮಾತೀರದ 36ಕ್ಕೂಅಧಿಕ ಗ್ರಾಮಗಳ ಪೈಕಿ 26 ಹಳ್ಳಿಗಳ ಜನರನ್ನು ಸ್ಥಳಾಂತರ ಮಾಡಲಾಗಿದ್ದು, ನದಿ ತೀರದಲ್ಲಿರುವ ಪ್ರಸಿದ್ಧ ಇಟಗಾ ಯಲ್ಲಮ್ಮ ದೇವಸ್ಥಾನ, ರಾಸಣಗಿ, ಬಲಭೀಮಸೇನ ದೇವರ ಗುಡಿ, ನರಿಬೋಳವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನ ಜಲಾವೃತಗೊಂಡಿವೆ.
ಕೋನಾಹಿಪ್ಪರಗಾ-ಮಂದರವಾಡ ಸಂಪೂರ್ಣ ಸ್ಥಳಾಂತರ :
ಜೇವರ್ಗಿ: ಮಹಾರಾಷ್ಟ್ರದ ಉಜನಿಜಲಾಶಯದಿಂದ ಭೀಮಾನದಿಗೆ 8.50 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ತಾಲೂಕಿನ ಮಂದರವಾಡ ಹಾಗೂ ಕೋನಾಹಿಪ್ಪರಗಿ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ.
ಭೀಮಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗಿರುವುದರಿಂದ ತಾಲೂಕಿನ ಇಟಗಾ, ಭೋಸಗಾ.ಕೆ, ಭೋಸಗಾ.ಬಿ, ಸಿದ್ನಾಳ, ಅಂಕಲಗಾ ಗ್ರಾಮಗಳಲ್ಲಿ ನೀರು ಹೊಕ್ಕು ಹತ್ತಾರು ಮನೆಗಳು ಜಲಾವೃತಗೊಂಡಿವೆ.ನೂರಾರು ಹೆಕ್ಟೇರ್ ಜಮೀನುಗಳಿಗೆ ನೀರು ಹೊಕ್ಕು ತೊಗರಿ, ಹತ್ತಿ, ಮೆಣಸಿನಕಾಯಿ, ಕಬ್ಬು, ಬಾಳೆ ನಾಶವಾಗಿ ಹೋಗಿವೆ. ಇಟಗಾ ಹಾಗೂ ಕೂಡಲಗಿ ಗ್ರಾಮಗಳಲ್ಲಿ ಎನ್‌ಡಿಆರ್‌ಎಫ್ ತಂಡದವರು 200 ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ. ತಾಲೂಕಾಡಳಿತ ವತಿಯಿಂದ ಭೀಮಾನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿ ನದಿ ತೀರಕ್ಕೆ ತೆರಳದಂತೆ ಮನವಿ ಮಾಡಲಾಗುತ್ತಿದೆ. ಭಾನುವಾರ ನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದ ಪರಿಣಾಮ ಮಂದರವಾಡ ಹಾಗೂ ಕೋನಾಹಿಪ್ಪರಗಾ ಗ್ರಾಮಗಳ ಕನಿಷ್ಠ 1200ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿ ಕೂಡಿ ದರ್ಗಾ ಬಳಿಯಿರುವ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ತಹಶೀಲ್ದಾರ್ ಸಿದರಾಯ ಭೋಸಗಿ ನದಿ ತೀರದ ಗ್ರಾಮಗಳಿಗೆ ನಿರಂತರ ಭೇಟಿ ನೀಡುತ್ತಾ ಕಾಳಜಿ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಊಟ, ಉಪಾಹಾರ ಹಾಗೂ ವಿವಿಧ ಸೌಲಭ್ಯಗಳ ಕುರಿತು ನಿಗಾವಹಿಸುತ್ತಿದ್ದಾರೆ. ಕಲ್ಲೂರ.ಕೆ ಹಾಗೂ ಅಫಜಲಪುರತಾಲೂಕಿನ ಮಧ್ಯದ ಭೀಮಾ ನದಿಗೆಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಇಟಗಾ-ಗಾಣಗಾಪುರ ಸೇತುವೆಗಳು ಜಲಾವೃತಗೊಂಡಿವೆ.
-ವಿಜಯಕುಮಾರ ಎಸ್.ಕಲ್ಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.