ಮತದಾರರ ಗುರುತಿನ ಚೀಟಿ ಮತ್ತೆ ಸದ್ದು!
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಅನಾಮಧೇಯಕರೆಗಳು, ದೂರು
Team Udayavani, Oct 20, 2020, 11:54 AM IST
ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಗುರುತಿನ ಚೀಟಿ, ಐಡಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕೇಳುತ್ತಿರುವ ಬಗ್ಗೆ ಅನಾಮಧೇಯ ಕರೆಗಳು ಬರುತ್ತಿವೆ ಹಾಗೂ ದೂರುಗಳು ಕೇಳಿ ಬಂದಿವೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದರು.
ಆರ್.ಆರ್. ನಗರ ಉಪ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಆರ್.ಆರ್. ನಗರ ಉಪ ಚುನಾವಣೆಗೆ ಸಂಬಂಧಿಸಿದಂತೆ ಕೆಲವರು ಸಾರ್ವಜನಿಕರಿಂದ ಮತದಾರರ ಗುರುತಿನ ಚೀಟಿ ಸಂಖ್ಯೆ ಕೇಳುತ್ತಿರುವ ಬಗ್ಗೆ ದೂರು ಕೇಳಿಬಂದಿದೆ. ಅಲ್ಲದೆ,ಕೆಲವುರುಕರೆ ಮಾಡಿ ಮತದಾರರ ಗುರುತಿನ ಚೀಟಿ ಕೊಡಬೇಕಾ ಎಂದೂ ಕೇಳುತ್ತಿದ್ದಾರೆ. ಗುರುತಿನ ಚೀಟಿ ಕೇಳುವುದು ಹಾಗೂ ಕೊಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಕೆಲವು ಭಾಗಗಳಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹಿಸುವುದಕ್ಕೆ ಮುಂದಾಗಿರುವುದು ಹಾಗೂ ಸಂಗ್ರಹ ಮಾಡಲು ಸಿದ್ಧತೆ ಮಾಡಿಕೊಂಡಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.ಮತದಾರರ ಗುರುತಿನ ಚೀಟಿ ಕೊಡಿ ಎಂದು ಕೇಳುವುದಾಗಲಿ, ಸಂಗ್ರಹ ಮಾಡಲು ಪರೋಕ್ಷವಾಗಿ ಸೂಚನೆ ನೀಡುವುದಾಗಲಿ ಅಥವಾ ಗುರುತಿನ ಚೀಟಿಗಳನ್ನು ಬೇರೆಯವರಿಗೆ ನೀಡುವುದಾಗಲಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ದೂರುಗಳು ಕೇಳಿ ಬಂದರೆ, ಪ್ರಜಾ ಪ್ರತಿನಿಧಿ ಕಾಯ್ದೆ -1951ರ ಅಡಿ (ಪ್ರಸೆಂಟೆಷನ್ ಆಫ್ ಪೀಪಲ್)ಕಠಿಣ ಕಾನೂನುಕ್ರಮಕೈಗೊಳ್ಳಲಾಗುವುದು. ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
50 ಜನ ಹೆಚ್ಚುವರಿ ಮಾರ್ಷಲ್‌ಗಳ ನೇಮಕ : ರಾಜರಾಜೇಶ್ವರಿ ನಗರದಲ್ಲಿ ಈಗಾಗಲೇ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು, ಉಪ ಚುನಾವಣೆ ಹಾಗೂ ಮುಂದಿನ ದಿನಗಳಲ್ಲಿ ಸರಣಿ ಹಬ್ಬಗಳು ಇರುವ ಹಿನ್ನೆಲೆಯಲ್ಲಿ ಆರ್.ಆರ್. ನಗರದಲ್ಲಿ ಹಾಲಿ ಇರುವ ಮಾರ್ಷಲ್‌ಗಳ ಜತೆಗೆ 50 ಜನ ಹೆಚ್ಚುವರಿ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಾರ್ಷಲ್‌ಗಳು ಸಾರ್ವಜನಿಕರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ವಹಿಸಲಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಎಲ್ಲ ರಾಜಕೀಯ ಪಕ್ಷಗಳ ಗಮನಕ್ಕೆ : ಮತದಾರರಿಂದಯಾವುದೇಕಾರಣಕ್ಕೂ ರಾಜಕೀಯ ಪಕ್ಷಗಳು ಮತದಾರರ ಗುರುತಿನ ಚೀಟಿ ಅಥವಾ ಸಂಖ್ಯೆಕೇಳುವಂತಿಲ್ಲ. ಎಲ್ಲ ಪಕ್ಷಗಳು ಹಾಗೂ ಅವರ ಬೆಂಬಲಿಗರಿಗೆ ಇದು ಸ್ಪಷ್ಟ ಸಂದೇಶ. ಈ ಸಂಬಂಧ ನಗರ ಪೊಲೀಸ್ ಆಯುಕ್ತರ ಗಮನಕ್ಕೂ ತರಲಾಗಿದೆ ಎಂದು ನಗರ ಆಯುಕ್ತರು ತಿಳಿಸಿದರು.
ಆಮಿಷಗಳಿಗೆ ಒಳಗಾಗಬೇಡಿ : ಮತದಾರರು ಯಾವುದೇ ಆಸೆ- ಆಮಿಷಗಳಿಗೆ ಒಳಗಾಗಬೇಡಿ. ಮತದಾರರ ಗುರುತಿನ ಚೀಟಿ ಅಥವಾ ಸಂಖ್ಯೆಯನ್ನು ನೀಡಬೇಡಿ.ಈ ರೀತಿ ನೀಡುವುದೂ ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಆಯುಕ್ತರು ಸೂಚನೆ ನೀಡಿದ್ದಾರೆ.
79 ಅತಿ ಸೂಕ್ಷ್ಮಮತಕೇಂದ್ರಗಳು : ಆರ್.ಆರ್. ನಗರ ವ್ಯಾಪ್ತಿಯಲ್ಲಿ 79 ಮತ ಕೇಂದ್ರಗಳನ್ನು ಅತೀ ಸೂಕ್ಷ್ಮ ಮತಕೇಂದ್ರಗಳು ಎಂದು ಗುರುತಿಸಲಾಗಿದೆ. ಈ ಹಿಂದೆ ಚುನಾವಣೆ ಹಾಗೂ ಮತದಾನದ ಸಂದರ್ಭದಲ್ಲಿನ ಪ್ರಕ್ರಿಯೆಗಳ ಆಧಾರದ ಮೇಲೆ ಈ ಕೇಂದ್ರಗಳನ್ನು ಸೂಕ್ಷ್ಮ ಮತಕೇಂದ್ರಗಳು ಎಂದು ಗುರುತಿಸಲಾಗಿದೆ. ಮತದಾನ ನಡೆಯುವ ದಿನ ಸಂಜೆ ಆರು ಗಂಟೆಯ ವರೆಗೆ ಸಾಲಿನಲ್ಲಿ ನಿಲ್ಲುವವರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು. ಕೊನೆಯಲ್ಲಿ ಬಂದವರಿಗೆ ಟೋಕನ್ ನೀಡಲಾಗುದು ಎಂದು ಹೇಳಿದರು.
15-20 ಅಧಿಕಾರಿಗಳ ವರ್ಗಾವಣೆ : ಆರ್.ಆರ್. ನಗರ ವ್ಯಾಪ್ತಿಯಲ್ಲಿ ಕಳೆದ ಹಲವುವರ್ಷಗಳಿಂದ ಪಾಲಿಕೆಯಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ.ಚುನಾವಣೆ ದೃಷ್ಟಿಯಿಂದ ಈ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂಬ ಅಭಿಪ್ರಾಯವ್ಯಕ್ತವಾಗಿತ್ತು.ಈ ಹಿನ್ನೆಲೆಯಲ್ಲಿ 15ರಿಂದ 20 ಜನ ಪಾಲಿಕೆಯ ಅಧಿಕಾರಿಗಳನ್ನು ಆರ್.ಆರ್. ನಗರ ದಿಂದ ಬೇರೆ ವಲಯಗಳಿಗೆ ವರ್ಗಾವಣೆ ಮಾಡಿಆದೇಶ ಮಾಡಲಾಗಿದೆ ಎಂದುಆಯುಕ್ತರು ಮಾಹಿತಿ ನೀಡಿದರು.
11 ಪರ್ಯಾಯ ದಾಖಲೆ ತೋರಿಸಿ ಮತ ಚಲಾಯಿಸಿ :
- ಪಾಸ್ ಪೋರ್ಟ್
- ಡ್ರೈವಿಂಗ್‌ಲೈಸೆನ್ಸ್
- ಕೇಂದ್ರ ಮತ್ತು ರಾಜ್ಯ ಸರ್ಕಾರ, ಸಾರ್ವಜನಿಕ ವಲಯ ಉದ್ದಿಮೆ, ಸಾರ್ವಜನಿಕ ಸೀಮಿತ ಕಂಪನಿಗಳ ನೌಕರರಿಗೆ ನೀಡಿರುವ ಫೋಟೋ ಇರುವ ಗುರುತಿನ ಚೀಟಿ
- ನರೇಗಾ ಜಾಬ್ ಕಾರ್ಡ್
- ಪ್ಯಾನ್ ಕಾರ್ಡ್
- ಭಾವಚಿತ್ರ ಇರುವ ಪಿಂಚಣಿಕಾರ್ಡ್
- ಭಾವಚಿತ್ರ ಇರುವ ಬ್ಯಾಂಕ್ ಪಾಸ್‌ಬುಕ್
- ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಕಾರ್ಡ್
- ಆರ್.ಜಿ.ಐನ ಅಡಿ ಎನ್.ಪಿ ಆರ್ ನೀಡುವ ಸ್ಮಾರ್ಟ್ ಕಾರ್ಡ್
- ಸಂಸದ, ಶಾಸಕ ಅಥವಾ ವಿಧಾನಪರಿಷತ್ತು ಸದಸ್ಯರಿಗೆ ನೀಡಿರುವ ಗುರುತಿನ ಚೀಟಿ
- ಆಧಾರ್ ಕಾರ್ಡ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.