ಪಟ್ಲ ಬೆಟ್ಟಕ್ಕೆ ಬರುವ ಪ್ರವಾಸಿಗರಿಗಿಲ್ಲ ರಕ್ಷಣೆ

ಸ್ಥಳೀಯಕೆಲ ಕಿಡಿಗೇಡಿಗಳಿಂದ ನೈತಿಕ ಪೊಲೀಸ್‌ ಗಿರಿ , ವಾಹನಗಳ ಟಯರ್‌ ಪಂಕ್ಚರ್‌ ಮಾಡಿ ವಿಕೃತಿ

Team Udayavani, Oct 20, 2020, 4:17 PM IST

hasan-tdy-1

ಸಕಲೇಶಪುರ: ನಿಸರ್ಗದ ತವರೂರಾದ ತಾಲೂಕಿನಲ್ಲಿರುವ ರಮ್ಯತಾಣಗಳಲ್ಲಿ ವನಗೂರು ಗ್ರಾಪಂ ವ್ಯಾಪ್ತಿಯ ಪಟ್ಲಬೆಟ್ಟ ಕೂಡ ಒಂದು.ಈ ಬೆಟ್ಟದ ಮೇಲೆ ನಿಂತು ನೋಡಿದರೆ ‌ಸ್ವರ್ಗವೇ ಧರೆಗಿಳಿದಂತೆ ಕಾಣುತ್ತದೆ. ಬೆಟ್ಟದಿಂದ ಹಿಂತಿರುಗಿ ಬಂದರೆ ನರಕಯಾತನೆ ಪಡಬೇಕಾದ ಸ್ಥಿತಿ ಇಲ್ಲಿನ ಪ್ರವಾಸಿಗರದ್ದಾಗಿದೆ.

ಪಟ್ಲ ಬೆಟ್ಟ ಕೊಡಗಿನ ಸೋಮವಾರಪೇಟೆತಾಲೂಕಿಗೆ ಅತಿ ಸಮೀಪದಲ್ಲಿದ್ದು, ಗುಡ್ಡ, ದಟ್ಟ ಅರಣ್ಯ, ಜಲಪಾತ, ಸದಾ ಮಂಜಿನಿಂದ ಕೂಡಿರುವ ಪ್ರದೇಶವಾಗಿದೆ. ಇದು ಪ್ರವಾಸಿಗರ ಕಣ್ಮನ ತಣಿಸುತ್ತದೆ. ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ, ತಾಲೂಕಿನ ಬಿಸಿಲೆ, ಮುಂತಾದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು, 9 ಕಿ.ಮೀ. ದೂರದ ಪಟ್ಲ ಬೆಟ್ಟಕ್ಕೆ ಭೇಟಿ ನೀಡುವುದು ಸಾಮಾನ್ಯ. ಸಮುದ್ರ ಮಟ್ಟದಿಂದ 3500 ಅಡಿ ಎತ್ತರದಲ್ಲಿರುವಈ ಬೆಟ್ಟದ ಮೇಲಿಂದ ದಕ್ಷಿಣ ಕನ್ನಡ, ಹಾಸನ, ಕೊಡಗುಜಿಲ್ಲೆಯ ಗಿರಿ ಶಿಖರಹಾಗೂಜಲಪಾತಗಳು ಕಾಣಿಸುತ್ತಿವೆ.

ಮೂಲ ಸೌಲಭ್ಯವಿಲ್ಲ: ಬೆಟ್ಟದ ಮೇಲಿಂದ ಮೋಡ ಗಳು ಹಾಗೂ ಮಂಜು ಕವಿಯುವ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದು. ಬೆಟ್ಟದಲ್ಲಿ ಯಾವುದೇ ಮೂಲ ಸೌಕರ್ಯ ಕಲ್ಪಿಸದ ಕಾರಣ, ನೀರುಕುಡಿಯಬೇಕೆಂದರೂ ಪ್ರವಾಸಿಗರು ಪರದಾಡಬೇಕಾಗಿದೆ. ಜೊತೆಗೆ, ಇಲ್ಲಿಗೆ ಬರುವ ಕೆಲ ಕಿಡಿಗೇಡಿಗಳು ಎಲ್ಲೆಂದರಲ್ಲಿ ಮದ್ಯ ಸೇವಿಸಿ ಬಾಟಲ್‌ ಅನ್ನು ಬಿಸಾಡಿ, ದಾಂಧಲೆ ನಡೆಸುತ್ತಿರುವುದು ಆತಂಕಕಾರಿಯಾಗಿದೆ.

ಇಲ್ಲಿ ಜೀಪುಗಳು ಮಾತ್ರ ಬೆಟ್ಟದ ತುದಿಗೆ ಹೋಗುವುದರಿಂದ ಕೆಲವರು ತಮ್ಮ ವಾಹನ ಬೆಟ್ಟದ ಕೆಳಗೆ ನಿಲ್ಲಿಸಿ ನಡೆದುಕೊಂಡು ಹೋಗಿ ಬೆಟ್ಟದ ಸೌಂದರ್ಯ ವೀಕ್ಷಣೆ ಮಾಡಿದರೆ, ಕೆಲವರು ಬಾಡಿಗೆವಾಹನದಲ್ಲೇ ಬೆಟ್ಟ ವೀಕ್ಷಿಸಲು ತೆರಳುತ್ತಾರೆ. ಪ್ರವಾಸಿಗರು ಬೆಟ್ಟ ಹತ್ತಿ ಪ್ರಾಕೃತಿಕ ಸೌಂದರ್ಯವೀಕ್ಷಿಸಿ ಸಂತೋಷದಿಂದ ಹಿಂತಿರುಗಿದರೆ, ಅಘಾತಕ್ಕೆ ಒಳಗಾಗಬೇಕಾಗುತ್ತದೆ.

ಟಯರ್‌ ಪಂಕ್ಚರ್‌ :  ಏಕೆಂದರೆ, ಪಟ್ಲ ಸುತ್ತಮುತ್ತಲಿನ ಕೆಲವು ಕಿಡಿಗೇಡಿಗಳು ಬೆಟ್ಟದಕೆಳಗೆ ನಿಲ್ಲಿಸಿರುವ ವಾಹನಗಳ ಟಯರ್‌ ಪಂಕ್ಚರ್‌ ಮಾಡುತ್ತಾರೆ. ನೆರವು ನೀಡಲು ಸುತ್ತಮುತ್ತಲು ಯಾರೂ ಇರುವುದಿಲ್ಲವನಗೂರಿನಲ್ಲಿ ಪಂಕ್ಚರ್‌ ಅಂಗಡಿಯೊಂದಿದ್ದು, ಅವರು ಸಹ ಹೊರ ಹೋಗಿದ್ದಲ್ಲಿ ಪ್ರವಾಸಿಗರ ಗೋಳು ಕೇಳುವವರು ಯಾರು ಇರುವುದಿಲ್ಲ. ರಸ್ತೆಯಲ್ಲಿ ತಿರುಗಾಡುವವರ ಬಳಿ ಕಾಡಿ ಬೇಡಿ 18ಕಿ.ಮೀ. ದೂರದ ಹೆತ್ತೂರು, ಇಲ್ಲ,52ಕಿ. ಮೀ. ದೂರದ ಸಕಲೇಶಪುರಕ್ಕೆ ಹೋಗಿ ಪಂಕ್ಚರ್‌ ಹಾಕುವವರನ್ನು ಹುಡುಕಿ, ಪಂಚರ್‌ ಹಾಕಿಸಿಕೊಂಡು, ಬಾಡಿಗೆ ವಾಹನದಲ್ಲಿ ಬಂದು ಊರಿಗೆ ಹಿಂತಿರುಗುವ ಹೊತ್ತಿಗೆ ಒಂದು ದಿನಆಗಿರುತ್ತದೆ. ಶ್ರೀಮಂತರು ಖರ್ಚು ಮಾಡಿಕೊಂಡು ಟಯರ್‌ ಬದಲಿಸಿಕೊಳ್ಳುತ್ತಾರೆ. ಆದರೆ, ಇಲ್ಲಿಗೆ ಬರುವ ಬಡವರ ಪಾಡೇನು? ಕೆಲವೊಮ್ಮೆ ಪಂಕ್ಚರ್‌ ಹಾಕಿಸಲು ಸಾಧ್ಯವಾಗದೇ ಕೆಲ ಪ್ರವಾಸಿಗರುಕಣ್ಣೀರು ಹಾಕಿಕೊಂಡು ವಾಹನದಲ್ಲಿ ಮಲಗಿರುವಕಥೆ ಸಾಕಷ್ಟಿವೆ.

ಪತಿ ಮುಂದೆಯೇ ಲೈಂಗಿಕ ‌ಕಿರುಕುಳ :  ಕೆಲವೊಮ್ಮೆ ಗಂಡ ಹೆಂಡತಿ ಇಬ್ಬರೆ ಇಲ್ಲಿನ ಸೌಂದರ್ಯ ವೀಕ್ಷಿಸಲು ಬಂದರೆ, ಪತಿಯ ಮುಂದೆಯೇ ಕೆಲ ಕಿಡಿಗೇಡಿಗಳು ಲೈಂಗಿಕ ಕಿರುಕುಳ ನೀಡಿದ ಉದಾಹರಣೆಯಿದೆ. ಕೆಲವು ಸಂದರ್ಭಗಳಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವುದು ಉಂಟು. ಮರ್ಯಾದೆಗೆ ಅಂಜಿ ಹಲವರು ಈ ಕುರಿತು ದೂರು ನೀಡಲು ಮುಂದಾಗುವುದಿಲ್ಲ. ಇಲ್ಲಿ ದೌರ್ಜನ್ಯಕ್ಕೆ ಒಳಗಾಗುವರು ಬಹುತೇಕರು ಹೊರ ಜಿಲ್ಲೆಗಳಿಂದ ಬರುವವರು ಆಗಿರುವುದರಿಂದ ಯಾರೂ ಪೊಲೀಸರಿಗೆ ದೂರು ನೀಡಲು ಹೋಗುವುದಿಲ್ಲ.ಕಳೆದಕೆಲವು ತಿಂಗಳ ಹಿಂದೆ ತಾಲೂಕಿನಕೆಲವು ಮಾಧ್ಯಮದವರು ಪಟ್ಲ ಬೆಟ್ಟದ ಕುರಿತು ವರದಿ ಮಾಡಲು ಹೋದಾಗ ಎರಡು ಕಾರುಗಳ 8 ಟಯರ್‌ ಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದರು. ಇಲ್ಲಿಗೆ ಬರುವ ಪ್ರವಾಸಿಗರ ವಿರುದ್ಧ ಇಲ್ಲಸಲ್ಲದ ನೆಪ ಹೇಳಿಕೊಂಡು ನೈತಿಕ ಪೊಲೀಸ್‌ ಗಿರಿ ತೋರುತ್ತಿರುವವರ ವಿರುದ್ಧ ತಾಲೂಕು ಆಡಳಿತ, ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಆಡಳಿತ ಉಗ್ರಕ್ರಮಕೈಗೊಳ್ಳಬೇಕಾಗಿದೆ.

ಪಟ್ಲ ರಮಣೀಯ ಸ್ಥಳ. ಇಲ್ಲಿಗೆ ಬರುವ ಪ್ರವಾಸಿಗರ ಮೇಲೆಕೆಲ ಕಿಡಿಗೇಡಿಗಳು ಹಲ್ಲೇ ಮಾಡುವುದು, ವಾಹನಗಳ ಟಯರ್‌ ಪಂಕ್ಚರ್‌ ಮಾಡುವುದು, ಹೀಗೆ ವಿಕೃತ ಆನಂದ ಪಡೆಯುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ, ಪ್ರವಾಸಿಗರಲ್ಲಿನ ಆತಂಕ ನಿವಾರಿಸಬೇಕು. ಜೈಭೀಮ್‌ ಮಂಜು, ಜಿಲ್ಲಾಧ್ಯಕ್ಷ, ಮಾನವ ಬಂಧುತ್ವ ವೇದಿಕೆ.

ಬೆಟ್ಟ ನೋಡಲು ಬರುವ ಕೆಲವರು ಮದ್ಯಪಾನ ಮಾಡಿ ಬಾಟಲ್‌ಗ‌ಳನ್ನು ಎಲ್ಲೆಂದರಲ್ಲಿ ಎಸೆಯುವುದು ಬೇಸರದ ಸಂಗತಿ. ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಪಟ್ಲ ಬೆಟ್ಟಕ್ಕೆ  ಹೋದಾಗ ಕೆಲವು ಕಿಡಿಗೇಡಿಗಳು ದಬ್ಟಾಳಿಕೆ ಮಾಡುವುದು ಸರಿಯಲ್ಲ. ಸ್ಥಳೀಯ ಗ್ರಾಪಂಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. -ಜಗದೀಶ್‌,ಹೆತ್ತೂರು ಗ್ರಾಮಸ್ಥ

ಪಟ್ಲ ಬೆಟ್ಟ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೆಲವು ಕಿಡಿಗೇಡಿಗಳು ವಿನಾಕಾರಣ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಕೇಳಿ ಬಂದಿದೆ. ಈ ಕುರಿತು ಪೊಲೀಸ್‌ ಇಲಾಖೆಗೆ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಂಜುನಾಥ್‌, ತಹಶೀಲ್ದಾರ್‌.

 

ಸುಧೀರ್‌ ಎಸ್‌.ಎಲ್‌.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.