![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 20, 2020, 9:10 PM IST
ಟ್ರೂ ಕಾಲರ್…. ಇಂದು ಹಲವರು ಬಳಸುತ್ತಿರುವ ಅಪ್ಲಿಕೇಶನ್. ಯಾವುದಾದರು ಹೊಸ ನಂಬರ್‌ನಿಂದ ಕರೆ ಬಂದರೇ ಅದು ಯಾರ ನಂಬರ್ ಎಂದು ತಿಳಿಯಲು ಮೊದಲು ನೆರವಾಗುವುದೇ ‘ಟ್ರೂ ಕಾಲರ್’. ಸಾಮಾನ್ಯವಾಗಿ ಬಹುತೇಕರ ಸ್ಮಾರ್ಟ್‌ಫೋನ್ ಗಳಲ್ಲಿ ಈ ಅಪ್ಲಿಕೇಶನ್ ಇನ್‌ಸ್ಟಾಲ್ ಆಗಿರುತ್ತದೆ. ಆ ಮೂಲಕ ಅಜ್ಞಾತ (Unknown numbers) ಸಂಖ್ಯೆಯನ್ನು ಕಂಡುಹಿಡಿಯಲು ಟ್ರೂ ಕಾಲರ್ ಸಹಾಯವಾಗಿದೆ ಎನ್ನಬಹುದು.
ಇಂದು ಟ್ರೂ ಕಾಲರ್ ಎಂಬುದು ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಕಾರಣವೇನೆಂದರೇ ಇದಕ್ಕೆ ತಿಂಗಳಿನಲ್ಲಿ ಸುಮಾರು 250 ಮಿಲಿಯನ್ ಸಕ್ರಿಯ ಬಳಕೆದಾರರಿದ್ದು, ಭಾರತದಲ್ಲೇ 185 ಮಿಲಿಯನ್ ಜನರು ನಿಯಮಿತವಾಗಿ ಬಳಸುತ್ತಾರೆ. ತಿಂಗಳ ಸಕ್ರಿಯ ಬಳಕೆದಾರರನ್ನು MAU (monthly Active users) ಎಂದು ಪರಿಗಣಿಸಲಾಗುತ್ತದೆ.
ಈ ಅಪ್ಲಿಕೇಶನ್ ನನ್ನು ದಿನವೊಂದಕ್ಕೆ (DAU-Daily Active Users) 200 ಮಿಲಿಯನ್ ಜನರು ಬಳಸುತ್ತಿದ್ದು, ಭಾರತದಲ್ಲೇ 150 ಮಿಲಿಯನ್ ಸಕ್ರಿಯ ಬಳಕೆದಾರರಿದ್ದಾರೆ ಎಂದು ಟ್ರೂ ಕಾಲರ್ ಸಂಸ್ಥೆ ತಿಳಿಸಿದೆ.
ಕೋವಿಡ್ ಸಾಂಕ್ರಮಿಕ ರೋಗದ ನಂತರ ಟ್ರೂ ಕಾಲರ್ ಬಳಕೆದಾರರ ಸಂಖ್ಯೆ 40 ಮಿಲಿಯನ್ ಹೆಚ್ಚಾಗಿದ್ದು, ಲಾಕ್ ಡೌನ್ ಸಮಯದಲ್ಲಿ ಬರುತ್ತಿದ್ದ ಬೇಡದ ಕರೆಗಳಿಂದ ಪಾರಾಗಲು ಹೆಚ್ಚಿನ ಜನರು ಈ ಅಪ್ಲಿಕೇಶನ್ ನನ್ನು ಡೌನ್ ಲೋಡ್ ಮಾಡಿಕೊಂಡಿದ್ದರು ಎಂದು ಸಮೀಕ್ಷೆ ತಿಳಿಸಿದೆ.
ಎಲ್ಲರೊಂದಿಗಿನ ಫೋನ್ ಸಂವಹನವನ್ನು ಉತ್ಕೃಷ್ಟಗೊಳಿಸಿಲು ಟ್ರೂಕಾಲರ್ ಅನ್ನು ರೂಪಿಸಲಾಗಿದೆ. ಕಳೆದೊಂದು ವರ್ಷದಿಂದ ಈ ಅಪ್ಲಿಕೇಷನ್ ಅತ್ಯುತ್ತಮ ಬೆಳವಣಿಗೆಯನ್ನು ಕಂಡಿದೆ. ಟ್ರೂ ಕಾಲರ್ ಸ್ಥಾಪನೆಯಾಗಿದ್ದೇ ಕಾಲರ್ ಐಡಿ ಗುರುತಿಸಲು. ಅದರೀಗ ಇದೀಗ SMS ಬ್ಲಾಕಿಂಗ್ ಸೇರಿದಂತೆ ಅತ್ಯುತ್ತಮ ಫೀಚರ್ ಹೊಂದಿದ್ದೇವೆ. ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉತ್ಸುಕರಾಗಿದ್ದೇವೆ. ಬಳಕೆದಾರರು ನಮ್ಮ ಮೇಲಿರಿಸಿದ ನಂಬಿಕೆಗೆ ಕೃತಜ್ಞರಾಗಿದ್ದೇವೆ ಎಂದು ಟ್ರೂ ಕಾಲರ್ ಸಿಇಒ ಮತ್ತು ಸಹ ಸಂಸ್ಥಾಪಕ ಅಲನ್ ಮಮೇದಿ ತಿಳಿಸಿದ್ದಾರೆ.
ಟ್ರೂ ಕಾಲರ್ ಮುಖ್ಯ ಕಚೇರಿ ಸ್ವೀಡನ್ ನ ಸ್ಟಾಕ್ ಹೋಮ್ ನಲ್ಲಿದೆ. ಭಾರತದಲ್ಲಿ ಬೆಂಗಳೂರು, ಗುರುಗಾಂವ್, ಮುಂಬೈ ನಲ್ಲೂ ಕಚೇರಿಗಳನ್ನು ಹೊಂದಿದೆ. 2009ರಲ್ಲಿ ಅಲನ್ ಮಮೇದಿ ಮತ್ತು ನಮಿ ಜರಿಂಗ್ ಹಾಮ್ ಸೇರಿ ಈ ಕಂಪೆನಿಯನ್ನು ಆರಂಭಿಸಿದರು.
ಟ್ರೂ ಕಾಲರ್ ಉಚಿತ ಅಪ್ಲಿಕೇಶನ್ ಆಗಿದ್ದು, ಕಾಲರ್ ಗಳನ್ನು ಗುರುತಿಸಲು ಮತ್ತು ಸ್ಪ್ಯಾಮ್ ಕರೆಗಳನ್ನು ಫೀಲ್ಟರ್ ಮಾಡಲು ನೆರವಾಗುತ್ತದೆ. ಇದು ಯಾವುದೇ ಮೊಬೈಲ್ ನಂಬರ್ ಗಳನ್ನು ನಿರ್ಬಂಧಿಸುವುದಿಲ್ಲ. ಬದಲಿಗೆ ಕೇವಲ ಗುರುತಿಸವಿಕೆ ಮತ್ತು ಮ್ಯಾನುವಲ್ ಬ್ಲಾಕ್ ಮಾಡಲು ನೆರವಾಗುತ್ತದೆ. ಇದರಲ್ಲಿ ಕಾಲರ್ ಐಡೆಂಟಿಫಿಕೇಶನ್, ಕಾಲ್ ಬ್ಲಾಕಿಂಗ್, ಫ್ಲ್ಯಾಶ್ ಮೆಸೆಂಜಿಂಗ್, ಕಾಲ್ ರೆಕಾರ್ಡಿಂಗ್ ಮುಂತಾದ ಹಲವು ಆಯ್ಕೆಗಳಿವೆ.
ಆದರೇ ಟ್ರೂ ಕಾಲರ್ ನಿಂದ ಅಪಾಯವು ಇದ್ದು ಈ ವರ್ಷಾರಂಭದಲ್ಲಿ ಸೈಬರ್ ಅಪರಾಧಿಗಳು ಸುಮಾರು 4.75 ಕೋಟಿ ಭಾರತೀಯರ ದಾಖಲೆಗಳನ್ನು ಡಾರ್ಕ್ ವೆಬ್ ನಲ್ಲಿ ಮಾರಾಟಕಿಟ್ಟಿದ್ದರು. ಮಾತ್ರವಲ್ಲದೆ ಈ ದಾಖಲೆಗಳು 75 ಸಾವಿರ ರೂ. ಗಳಿಗೆ ಟ್ರೂ ಕಾಲರ್ ನಿಂದಲೇ ಲಭ್ಯವಾಗಿತ್ತು ಎಂದು ಅನ್ ಲೈನ್ ಇಂಟಲಿಜೆನ್ಸ್ ಫರ್ಮ್ ಸೈಬರ್ ತಿಳಿಸಿತ್ತು. ಆದರೇ ಈ ಆರೋಪವನ್ನು ಟ್ರೂ ಕಾಲರ್ ಸಂಸ್ಥೆ ನಿರಾಕರಿಸಿತ್ತು.
Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?
ಬಚ್ಚನ್, ಮೋಹನ್‌ಲಾಲ್ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..
ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…
Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ
ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್ ಮಾಫಿಯಾ!
You seem to have an Ad Blocker on.
To continue reading, please turn it off or whitelist Udayavani.