ಮಳೆಗೆ ನೆಲಕ್ಕುರುಳಿದ ಭತ್ತ; ರೈತ ಕಂಗಾಲು
ವರುಣನ ಮುನಿಸಿಗೆ ನೆಲಕಚ್ಚಿದ ಬೆಳೆ
Team Udayavani, Oct 21, 2020, 5:58 PM IST
ಸಿಂಧನೂರು: ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಚಿತ್ತಿ ಮಳೆಗೆ ಭತ್ತದ ಬೆಳೆ ಸಂಪೂರ್ಣ ನೆಲಕ್ಕುರುಳಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ತಾಲೂಕಿನಲ್ಲಿ ಮಸ್ಕಿ ಭಾಗದ ನಾಲ್ಕು ಹೋಬಳಿ ಸೇರಿದಂತೆ ಒಟ್ಟು 72, 837 ಹೆಕ್ಟೇರ್ ಭತ್ತ ಬೆಳೆಯಲಾಗಿದೆ. ತೊಗರಿ 9464 ಹೆಕ್ಟೇರ್, ಹತ್ತಿ5276 ಹೆಕ್ಟೇರ್‌ನಷ್ಟು ಬಿತ್ತನೆ ಮಾಡಲಾಗಿದೆ. ಆದರೆವರುಣನ ಮುನಿಸು ರೈತರ ಮೇಲೆ ಹೆಚ್ಚಾಗಿದ್ದು, 350 ಹೆಕ್ಟೇರ್ ಭತ್ತ, 60 ಹೆಕ್ಟೇರ್ ಜೋಳ, 125ಹೆಕ್ಟೇರ್ ತೊಗರಿ ಹಾಗೂ 110 ಹೆಕ್ಟೇರ್‌ನಷ್ಟು ಹತ್ತಿಬೆಳೆ ನಷ್ಟವಾದ ಬಗ್ಗೆ ತಿಳಿದುಬಂದಿದೆ.ಬೆಳೆಗಳು ಸಂಪೂರ್ಣ ನೆಲಸಮ ಆಗಿರುವುದು ಕಂಡುಬರುತ್ತಿದೆ
ತಾಲೂಕಿನ ನೀರಾವರಿ ಆಶ್ರಿತ ಮಲ್ಲಾಪುರ, ಬೂತಲದಿನ್ನಿ, ಬಸ್ಸಾಪುರ, ಪಗಡದಿನ್ನಿ, ಜವಳಗೇರಾ,ಗಾಂಧಿ ನಗರ, ಹಂಚಿನಾಳಕ್ಯಾಂಪ್, ಧಡೆಸೂಗುರು, ಕೆಂಗಲ್, ಮುಕ್ಕುಂದಾ, ಸಾಲಗುಂದಾ,ಸೋಮಲಾಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತದ ಬೆಳೆ ಮಳೆಯಿಂದ ನೆಲಕಚ್ಚಿದೆ.
ಒಣ ಬೇಸಾಯದ ಹತ್ತಿಗುಡ್ಡ, ಹಿರೇಬೇರಗಿ, ಚಿಕ್ಕಬೇರಗಿ, ಕಲ್ಮಂಗಿ, ಬಪೂ³ರು, ಗುಡಗಲದಿನ್ನಿ, ಗುಂಡ, ಸಂಕನಾಳ, ರತ್ನಾಪುರ, ಬುಕ್ಕನಹಟ್ಟಿ, ಊಮಲೂಟಿ ಸೇರಿದಂತೆ ಇತರ ಗ್ರಾಮಗಳಲ್ಲಿ ತೊಗರಿ, ಹತ್ತಿ, ಕಡಲೆ, ಜೋಳ ಸೇರಿದಂತೆ ಇತರೆ ಬೆಳೆ ಬೆಳೆಯಲಾಗಿದೆ. ಕಳೆದ ವಾರ ಹಾಗೂ ಸೋಮವಾರ ರಾತ್ರಿ ಸುರಿದ ಮಳೆಯಿಂದ ಬೆಳೆಗಳೆಲ್ಲ ಸಂಪೂರ್ಣ ನೀರಿನಲ್ಲಿ ಮುಳುಗಿವೆ.
ಇನ್ನು ಕೆಲ ಬೆಳೆಗಳಿಗೆ ಕೀಟಬಾಧೆ ತಗಲುವಂತಾಗಿದೆ. ಮಳೆಗೆ ತೊಗರಿ, ಹತ್ತಿ ಹೂಉದುರುತ್ತಿದ್ದು ಇಳುವರಿ ಕಡಿಮೆಯಾಗುವ ಆತಂಖ ಎದುರಾಗಿದೆ. ಇದೀಗ ಹಿಂಗಾರಿನಲ್ಲಿ ಬಿತ್ತಿದಕಡಲೆ ಹಾಗೂ ಜೋಳದ ಬೆಳೆಗಳು ನಷ್ಟವಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಳೆಇಲ್ಲದೇ ಹಾಗೂ ಕಾಲುವೆಗೆ ನೀರಿಲ್ಲದೇ ರೈತರು ಪರದಾಡುತ್ತಿದ್ದರು. ಈ ಬಾರಿ ಉತ್ತಮ ಮಳೆಯಾಗಿದೆ. ಜೊತೆಗೆ ಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಒತ್ತಾಯ: ಕೂಡಲೇ ಬೆಳೆ ನಷ್ಟಕ್ಕೀಡಾದ ರೈತರಿಗೆ ಸರ್ಕಾರ ಹಾಗೂ ಸಂಬಂ ಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಸೋಮವಾರ ರಾತ್ರಿ ಸುರಿದ ಮಳೆಗೆ ಕಟಾವಿಗೆ ಬಂದಿದ್ದ 12 ಎಕರೆ ಭತ್ತದ ಬೆಳೆ ಸಂಪೂರ್ಣ ನೆಲಕ್ಕುರುಳಿದೆ. ಇದರಿಂದಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭತ್ತದ ಬೆಳೆಗೆ ಪರಿಹಾರ ನೀಡಬೇಕು. -ಮಲ್ಲಣ್ಣ ಅಮರಪ್ಪ, ರೈತ, ಮಲ್ಲಾಪುರ
ತಾಲೂಕಿನಲ್ಲಿ ಇನ್ನು ಎರಡ್ಮೂರು ದಿನಗಳ ಕಾಲ ಮಳೆ ಹೆಚ್ಚಾಗುವ ಸಂಭವವಿದೆ. ರೈತರು ಸೇರಿದಂತೆ ಸಾರ್ವಜನಿಕರು ಮುನ್ನೆಚ್ಚರಿಕೆಯಿಂದ ಇರಬೇಕು. ಬೆಳೆ ನಷ್ಟ ಹೊಂದಿದ ಪ್ರದೇಶಗಳ ಸರ್ವೇ ಕಾರ್ಯನಡೆಸುತ್ತಿದ್ದೇವೆ. ನಂತರ ವರದಿ ಸರ್ಕಾರಕ್ಕೆ ಕಳುಹಿಸಲಾಗುವುದು. -ಡಾ| ಪ್ರಶಾಂತ್, ಕೃಷಿ ಇಲಾಖೆ ನಿರ್ದೇಶಕರು ಸಿಂಧನೂರು
–ಚಂದ್ರಶೇಖರ್ ಯರದಿಹಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.